Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಧ್ರುವ ಸರ್ಜಾ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು..!

---Advertisement---

ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬನಶಂಕರಿಯಲ್ಲಿರುವ ಧ್ರುವ ಸರ್ಜಾ ಅವರ ಮನೆ ಬಳಿಯ ನಿವಾಸಿಯೇ ಆಗಿರುವ ಮನೋಜ್ ಎಂಬುವವರು ಈ ದೂರನ್ನ ದಾಖಲು ಮಾಡಿದ್ದಾರೆ.

ಧ್ರುವ ಸರ್ಜಾ ಅವರ ಅಭಿಮಾನಿ ಬಳಗ ದಿನೇ ದಿನೇ ಹೆಚ್ಚಾಗ್ತಾನೇ ಇದೆ. ಹೀಗಾಗಿ ಹುಟ್ಟುಹಬ್ಬಕ್ಕೆ, ಮತ್ತ್ಯಾವುದೋ ವಿಶೇಷತೆಗೆ ಧ್ರುವ ಸರ್ಜಾ ಅವರನ್ನ ಭೇಟಿಯಾಗಲು ಅವರ ಮನೆ ಬಳಿ ಹೋಗ್ತಾರೆ. ಕೆಲವೊಮ್ಮೆ ರೋಡ್ ಅನ್ನೇ ಬ್ಲಾಕ್ ಮಾಡ್ತಾರೆ. ಇದು ಅಕ್ಕ ಪಕ್ಕದ ಮನೆಯವರಿಗೆಲ್ಲಾ ಸ್ವಲ್ಪ ಕಷ್ಟವೇ. ಇದೇ ಕಾರಣದಿಂದಾನೇ ಪೊಲೀಸರಿಗೆ ದೂರು ನೀಡಲಾಗಿದೆ.

ಮನೋಜ್ ನೀಡಿದ ದೂರಿನಲ್ಲಿ, ಇವರುಗಳಿಂದ ಅಕ್ಕಪಕ್ಕದ‌ ನಿವಾಸಿಗಳಿಗೆ ತೊಂದರೆ ಅಂತ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಮನೆ ಬಳಿ ಹೋದ ಅಭಿಮಾನಿಗಳು ಮನೋಜ್ ಎಂಬುವರ ಮನೆ ಮುಂದೆ ಪ್ರತಿನಿತ್ಯ ಬೈಕ್ ಪಾರ್ಕಿಂಗ್ ಮಾಡ್ತಾರಂತೆ. ಅದರಲ್ಲೂ ಫ್ಯಾನ್ಸ್‌ಗಳು ಪ್ರತಿನಿತ್ಯ ಬೈಕ್ ಗಳನ್ನ‌ ಅಡ್ಡಲಾಗಿ ಪಾರ್ಕ್ ಮಾಡ್ತಾರಂತೆ. ಜೊತೆಗೆ ಮನೆ ಮುಂದೆ ಧೂಮಪಾನ ಮಾಡುತ್ತಾರೆ. ಮನೆಯ ಗೋಡೆಯ ಮೇಲೆಯೇ ಉಗಿಯುತ್ತಾರೆ.

ಇದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ಪ್ರತಿನಿತ್ಯ ತೊಂದರೆಯಾಗ್ತಿದೆ ಎಂದು ನಟ ಧ್ರುವ ಸರ್ಜಾ ವಿರುದ್ದ FIR ದಾಖಲಿಸುವಂತೆ ದೂರು ನೀಡಿದ್ದಾರೆ. ಸದ್ಯ ದೂರಿನನ್ವಯ ಬನಶಂಕರಿ ಪೊಲೀಸರಿಂದ NCR ದಾಖಲಾಗಿದೆ. ನಟ ಧ್ರುವ ಸರ್ಜಾ, ಮ್ಯಾನೇಜರ್, ಚಾಲಕ ಹಾಗೂ ಫಾನ್ಸ್ ಗಳ ವಿರುದ್ದ ದೂರು ದಾಖಲಾಗಿದೆ. ಈ ಬಾರಿ ನಡೆದ ಹುಟ್ಟುಹಬ್ಬದ ಸಂಭ್ರಮದಲ್ಲಿಯೂ ಇಡೀ ಏರಿಯಾವನ್ನ ಬ್ಯಾರಿಕೇಡ್ ಮೂಲಕ ಭದ್ರತೆ ಒದಗಿಸಲಾಗಿತ್ತು. ಈ ಸಂದರ್ಭದಲ್ಲಿ ಅಕ್ಕಪಕ್ಕದ ಮನೆಯವರು ಗಾಡಿ ಪಾರ್ಕಿಂಗ್ ಗೂ ಸಮಸ್ಯೆಯಾಗಿತ್ತು ಎಂದು ದೂರಲಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now