ಮೈಸೂರು: ಸಿಎಂ ಸ್ಥಾನ ಅದಲು ಬದಲಾಗಬಹುದು ಎಂಬ ಜೋರು ಚರ್ಚೆಯ ನಡುವೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇಬ್ಬರು ದೆಹಲಿಯಲ್ಕಿ ಬೀಡು ಬಿಟ್ಟಿದ್ದಾರೆ. ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ತಮ್ಮ ತಂದೆಯ ಸಿಎಂ ಸ್ಥಾನದ ಬಗ್ಗೆ ಮಾತನಾಡಿದ್ದಾರೆ. ನನ್ನ ಪ್ರಕಾರ ಅವರು ಐದು ವರ್ಷ ಕೂಡ ಅವರೇ ಸಿಎಂ ಆಗಿ ಇರ್ತಾರೆ ಎಂದು ಸಿದ್ದರಾಮಯ್ಯ ಅವರ ಪರವಾಗಿ ಮಾತನಾಡಿದ್ದಾರೆ.
ಈ ಪ್ರಶ್ನೆಗೆ ಸರ್ಕಾರ ಬಂದಾಗಿನಿಂದ ಕೇಳ್ತಾ ಇದ್ದೀನಿ, ಹೇಳ್ತಾ ಇದ್ದೀನಿ. ಮತ್ತೆ ಮತ್ತೆ ಅದನ್ನೇ ಕೇಳಬೇಡಿ. ಅವಾಗಿನಿಂದಲೂ ಚರ್ಚೆ ಆಗ್ತಾ ಇದೆ. ಬದಲಾಯ್ತಾ ಇಲ್ಲ ತಾನೇ, ಮತ್ತೆ ಯಾಕ್ ಕೇಳ್ತೀರಾ ಎಂದು ಪ್ರಶ್ನೆ ಯತೀಂದ್ರ ಅವರು ಮಾಧ್ಯಮದವರಿಗೆ ಪ್ರಶ್ನೆ ಮಾಡಿದ್ದಾರೆ.
ಇದೇ ವೇಳೆ ರಂಭಾಪುರಿ ಶ್ರೀಗಳು ಹೇಳಿಗಳು ಉಚಿತ ಯೋಜನೆಯಿಂದ ಜನಗಳು ಸೋಮಾರಿ ಆಗ್ತಾ ಇದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಯತೀಂದ್ರ ಅವರು, ಇದು ಇವಾಗಲ್ಲ, ಕಳೆದ ಬಾರಿ ಭಾಗ್ಯಗಳನ್ನು ಕೊಟ್ಟಾಗಲೂ ಇದೇ ರೀತಿ ಹೇಳ್ತಾ ಇದ್ರು. ಯಾರಾದ್ರೂ ಸೋಮಾರಿಗಳಾದ್ರಾ ಆಗೋದಿಲ್ಲ. ಬರೀ ಅಕ್ಕಿ ಕೊಟ್ರೆ ಹೊಟ್ಟೆ ತುಂಬುತ್ತಾ. ಜೀವನದ ಬೇರೆ ಸೌಲಭ್ಯಗಳಿಗೆ ಅವರು ದುಡೊಯೋದು ಬೇಡವಾ..? ದುಡಿದೇ ದುಡಿಯುತ್ತಾರೆ. ಅಕ್ಕಿ ಕೊಟ್ಟಿದ್ದಕ್ಕೋಸ್ಕರ ಬಡವರು ಸೋಮಾರಿಗಳಾಗ್ತಾರೆ ಅಂತ ಹೇಳ್ತಾರಲ್ಲ, ತಲೆತಲಾಂತರದಿಂದ ಸುಖವಾಗಿ ಬಂದಿರುತ್ತಾರೆ, ಬೇರೆಯವರ ಕೈನಲ್ಲಿ ಕೆಲಸ ಮಾಡಿಸಿಕೊಂಡುಕೊಂಡು ಬಂದಿರ್ತಾರೆ ಅಂತವರು ಅಷ್ಟೇ ಈ ರೀತಿ ಮಾತನಾಡೋದು.
ಇದೇ ಪ್ರಶ್ನೆಯನ್ನ ಕೇಂದ್ರ ಸರ್ಕಾರ, ಶ್ರೀಮಂತರ ಸಾವಿರಾರು ಕೋಟಿ ಸಾಲಮನ್ನಾ ಮಾಡ್ತಾರೆ. ಅವರ ಟ್ಯಾಕ್ಸ್ ಕಮ್ಮಿ ಮಾಡ್ತಾರೆ ಆಗ ಯಾರಾದ್ರೂ ಕೇಳ್ತಾರಾ..? ಬಡವರಿಗೆ ಕೊಟ್ಟರೆ ಮಾತ್ರ ಯಾಕೆ ಕೇಳ್ತಾರೆ. ಕಾಂಗ್ರೆಸ್ ಪಕ್ಷ ಸದಾ ಬಡವರ ಪರವಾಗಿ ಇರುವುದು. ಈಗಿಂದ ಅಲ್ಲ ಸ್ವಾತಂತ್ರ್ಯ ಬರುವುದಕ್ಕೂ ಮುಂಚಿತವಾಗಿಂದಲೂ ಬಡವರ ಪರವಾಗಿಯೇ ಇರುವುದು. ಯಾರೂ ಏನೇ ಟೀಕೆ ಮಾಡಿದ್ರು ನಮಗೆ ಚೆನ್ನಾಗಿ ಗೊತ್ತು ಬಡವರಿಗೆ ಸಹಾಯ ಬೇಕು ಅಂತ. ಅದನ್ನ ನಮ್ಮ ಸರ್ಕಾರ ಕೊಟ್ಟಿದೆ ಎಂದಿದ್ದಾರೆ.











