Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಬ್ಬಿನಹೊಳೆ ಪೊಲೀಸರಿಂದ ಕೇಬಲ್‌ ವೈರ್‌ ಹಾಗೂ ಮೋಟಾರು ಪಂಪ್ ಕಳ್ಳನ ಬಂಧನ

---Advertisement---

ಸುದ್ದಿಒನ್, ಹಿರಿಯೂರು, ಜನವರಿ. 19 :ಕೇಬಲ್‌ ವೈರ್‌ ಹಾಗೂ 10 ಹೆಚ್.ಪಿ ಮೋಟಾರು ಪಂಪ್ ಕಳ್ಳತನ ಮಾಡಿದ್ದ ಓರ್ವ ಆರೋಪಿಯನ್ನು ಅಬ್ಬಿನಹೊಳೆ ಪೊಲೀಸರು ಬಂಧಿಸಿದ್ದಾರೆ.

ತಾಲ್ಲೂಕಿನ ಕೂಡ್ಲಹಳ್ಳಿ, ಗ್ರಾಮವಾಸಿಯಾದ ಚಿದಂಬರ ರವರಿಗೆ ಸೇರಿದ ಹೂವಿನಹೊಳೆ ಗ್ರಾಮದ ಜಮೀನಿನಲ್ಲಿದ್ದ 10 ಹೆಚ್.ಪಿ ಮೋಟಾರು ಪಂಪ್ ಹಾಗೂ ಕೇಬಲ್‌ ವೈರ್‌ ಜನವರಿ 08 ರಂದು ಕಳ್ಳತನವಾಗಿತ್ತು. ಈ ಸಂಬಂಧ ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ
ಅಬ್ಬಿನಹೊಳೆ ಪೊಲೀಸರು ಜನವರಿ 17 ರಂದು ಆರೋಪಿ ಮಧುಸೂದನ್ ನನ್ನು ಬಂಧಿಸಿ ಆತನಿಂದ ಕಳ್ಳತನವಾಗಿದ್ದ ಅಂದಾಜು 35,000/- ರೂಪಾಯಿಯ 10 ಹೆಚ್.ಪಿ ಮೋಟಾರು ಪಂಪ್ ಮತ್ತು ಅಂದಾಜು 8,000/- ರೂಪಾಯಿಯ ಕೇಬಲ್ ವೈರನ್ನು ವಶಪಡಿಸಿಕೊಂಡಿದ್ದಾರೆ. ಇನ್ನೊಬ್ಬ ಆರೋಪಿ ಶಶಿಕುಮಾರ ತಲೆ ಮರೆಸಿಕೊಂಡಿದ್ದು, ಪತ್ತೆಗಾಗಿ ಬಲೆ ಬೀಸಿದ್ದಾರೆ.

ಪ್ರಕರಣವನ್ನು ಭೇದಿಸಿದ ಅಬ್ಬಿನಹೊಳೆ ಪೊಲೀಸರ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...