Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ

Facebook
Twitter
Telegram
WhatsApp

 

ಮಾಹಿತಿ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,(ಜುಲೈ.05) : ರಾಜ್ಯ ಚುನಾವಣಾ ಆಯೋಗ ಆದೇಶದಂತೆ ಚಿತ್ರದುರ್ಗ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾದ ಖಾಲಿ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಿಸಲಾಗಿದೆ.

ಚುನಾವಣಾ ವೇಳಾಪಟ್ಟಿ ವಿವರ ಇಂತಿದೆ. 2023ರ ಜುಲೈ 6 ರಿಂದ 26 ರವರೆಗೆ ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.

ಜುಲೈ 06ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುವುದು. ಜುಲೈ 12 ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ. ಜುಲೈ 13ರಂದು ನಾಮಪತ್ರಗಳ ಪರಿಶೀಲನೆ, ಜುಲೈ 15ರಂದು ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಮತದಾನ ಅವಶ್ಯವಿದ್ದರೆ ಜುಲೈ 23ರಂದು ರಂದು ಬೆಳಿಗ್ಗೆ 7 ರಿಂದ ಸಂಜೆ 5 ರವರೆಗೆ ಮತದಾನ ನಡೆಸಲಾಗುವುದು.

ಮರು ಮತದಾನದ ಅವಶ್ಯಕತೆ ಇದ್ದರೆ ಜುಲೈ 25ರಂದು ಬೆಳಿಗ್ಗೆ 7 ರಿಂದ ಸಂಜೆ 5 ರವರೆಗೆ ಮತದಾನ ನಡೆಸಲಾಗುವುದು. ಜುಲೈ 26ರಂದು ಬೆಳಿಗ್ಗೆ 8 ಗಂಟೆಯಿಂದ ತಾಲ್ಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುವುದು. ಜುಲೈ 26ರಂದು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಚುನಾವಣಾ ನಡೆಯುವ ಗ್ರಾಮ  ಪಂಚಾಯಿತಿ ಹಾಗೂ ಸದಸ್ಯ ಸ್ಥಾನಗಳ ವಿವರ ಇಂತಿದೆ.

ಮೊಳಕಾಲ್ಮೂರು ತಾಲ್ಲೂಕಿನ ಜಹಗೀರ್ ಬುಡ್ಡೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಓಬಳಾಪುರ ಕ್ಷೇತ್ರದ 1 ಸ್ಥಾನ (ಸಾಮಾನ್ಯ),

ಚಳ್ಳಕೆರೆ ತಾಲ್ಲೂಕಿನ ಮಲ್ಲೂರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲೂರಹಳ್ಳಿ-3 ಕ್ಷೇತ್ರದ 1 ಸದಸ್ಯ ಸ್ಥಾನ (ಅನುಸೂಚಿತ ಪಂಗಡ),

ಚಿತ್ರದುರ್ಗ ತಾಲ್ಲೂಕಿನ ಕೂನಬೇವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಸೇಕಟ್ಟೆ-2 ಕ್ಷೇತ್ರದ 1 ಸದಸ್ಯ ಸ್ಥಾನ (ಅನುಸೂಚಿತ ಪಂಗಡ)ಕ್ಕೆ ಉಪಚುನಾವಣೆ ನಿಗಧಿಯಾಗಿದ್ದು,

ಚುನಾವಣೆ ನಡೆಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯ ಪರಸ್ಪರ ಇಷ್ಟಪಟ್ಟವರು ಕಾರಣವಿಲ್ಲದೆ ದೂರ ಆಗಿದ್ದಾರೆ

ಈ ರಾಶಿಯ ಪರಸ್ಪರ ಇಷ್ಟಪಟ್ಟವರು ಕಾರಣವಿಲ್ಲದೆ ದೂರ ಆಗಿದ್ದಾರೆ, ಈ ರಾಶಿಯ ಗುತ್ತಿಗೆದಾರರಿಗೆ ಮತ್ತು ರಿಯಲ್ ಎಸ್ಟೇಟ್ ಉದ್ಯಮದಾರರಿಗೆ ಸಂತೋಷದ ದಿನ, ಗುರುವಾರ ರಾಶಿ ಭವಿಷ್ಯ -ಸೆಪ್ಟೆಂಬರ್-12,2024 ಸೂರ್ಯೋದಯ: 06:07, ಸೂರ್ಯಾಸ್ತ : 06:17

ಚಿತ್ರದುರ್ಗ | ಮರಕ್ಕೆ ಕಾರು ಡಿಕ್ಕಿಯಾಗಿ 2 ವರ್ಷದ ಮಗು ಸಾವು..!

    ವರದಿ ಮತ್ತು ಫೋಟೋ ಕೃಪೆ : ಸುರೇಶ್ ಬೆಳಗೆರೆ,    ಮೊ : 97398 75729 ಸುದ್ದಿಒನ್, ಚಿತ್ರದುರ್ಗ,ಸೆಪ್ಟೆಂಬರ್. 11 : ಮರಕ್ಕೆ ಕಾರು ಡಿಕ್ಕಿಯಾಗಿ, 2 ವರ್ಷದ ಮಗು ಸಾವನ್ನಪ್ಪಿರುವ

ಖಾಸಗಿ ವಿಡಿಯೋ ಲೀಕ್ ಮಾಡುವುದಾಗೊ ಬೆದರಿಕೆ : ವರುಣ್ ಆರಾಧ್ಯ ವಿರುದ್ಧ ವರ್ಷಾ ಕಾವೇರಿ ದೂರು

    ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮೂಲಕವೇ ಖ್ಯಾತಿ ಪಡೆದಿದ್ದ ವರುಣ್ ಆರಾಧ್ಯ ಬಳಿಕ ಕಲರ್ಸ್ ಕನ್ನಡದ ಬೃಂದಾವನ ಸೀರಿಯಲ್ ನಲ್ಲಿ ಅವಕಾಶವನ್ನು ಪಡೆದಿದ್ದರು. ಅದಕ್ಕೂ ಮುನ್ನ ಸುಮಾರು ವರ್ಷಗಳಿಂದ ಪ್ರೀತಿ ಮಾಡಿದ್ದಂತ ವರ್ಷಾ

error: Content is protected !!