Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

LPG Cylinder Price : ಜನಸಾಮಾನ್ಯರಿಗೆ ಹೊರೆ, ಪೆಟ್ರೋಲಿಯಂ ಕಂಪನಿಗಳ ಬರೆ ; ಮತ್ತೆ ಏರಿಕೆಯಾದ ಅಡುಗೆ ಅನಿಲ ಸಿಲಿಂಡರ್ ಬೆಲೆ…!

Facebook
Twitter
Telegram
WhatsApp

ನವದೆಹಲಿ : ಪೆಟ್ರೋಲಿಯಂ ಕಂಪನಿಗಳು ಮಾರ್ಚ್ ತಿಂಗಳ ಮೊದಲ ದಿನವೇ ಭಾರೀ ಶಾಕ್ ನೀಡಿವೆ. ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿವೆ. ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್ ಸೇರಿದಂತೆ ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ಗಳ ಬೆಲೆಯೂ ಏರಿಕೆಯಾಗಿದೆ.

ಹೆಚ್ಚಿದ ಬೆಲೆಗಳು ಇಂದಿನಿಂದ ಜಾರಿಗೆ ಬರಲಿವೆ. ಅಡುಗೆ ಅನಿಲ ಸಿಲಿಂಡರ್ ಬೆಲೆ ರೂ. 50ರಷ್ಟು ಹೆಚ್ಚಿಸಲಾಗಿದೆ. ಇದರಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 14.2 ಕೆಜಿ ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆ ರೂ. 1103 ತಲುಪಿದೆ.

ಇದುವರೆಗೆ 14.2 ಕೆ.ಜಿ.ಗೆ 1053 ರೂ.ಗಳಷ್ಟಿತ್ತು.

ಮುಂಬೈನಲ್ಲಿ ಗ್ಯಾಸ್ ಸಿಲಿಂಡರ್ ದರ ರೂ.1052.50ರಿಂದ ರೂ.1102.50ಕ್ಕೆ ಏರಿಕೆಯಾಗಿದೆ. ಕೋಲ್ಕತ್ತಾದಲ್ಲಿ ರೂ. 1129 ಶುಲ್ಕ ವಿಧಿಸಲಾಗುತ್ತದೆ. ಅದೇ ಚೆನ್ನೈನಲ್ಲಿ 1118.50 ರೂ.ಗೆ ತಲುಪಿದೆ.

ವಾಣಿಜ್ಯ ಸಿಲಿಂಡರ್ ಬೆಲೆ 19 ಕೆಜಿಗೆ 350.50 ರೂ. ಹೆಚ್ಚಾಗಿದೆ. ಇದರೊಂದಿಗೆ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ದರ 2119.50 ರೂ.ಗೆ ಏರಿಕೆಯಾಗಿದೆ. ಈ ಮೊದಲು ರೂ.1769 ಇತ್ತು.

ಹಾಗೂ ಕೋಲ್ಕತ್ತಾದಲ್ಲಿ ರೂ.1870ರಿಂದ ರೂ.2221.50ಕ್ಕೆ ಏರಿಕೆಯಾಗಿದೆ. ಮುಂಬೈನಲ್ಲಿ 19 ಕೆಜಿಯ ವಾಣಿಜ್ಯ ಸಿಲಿಂಡರ್ ದರ 2071.50 ರೂ.ಗೆ ತಲುಪಿದೆ. ಚೆನ್ನೈನಲ್ಲಿ ರೂ.2268 ತಲುಪಿದೆ.

ಈ ಏರಿಕೆ ದರಗಳು ಮಾರ್ಚ್ 1 ರಿಂದ ಜಾರಿಗೆ ಬರಲಿದೆ ಎಂದು ಪೆಟ್ರೋಲಿಯಂ ಕಂಪನಿಗಳು ಘೋಷಿಸಿವೆ. ಈಗಾಗಲೇ ಅಗತ್ಯ ವಸ್ತುಗಳ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜನಸಾಮಾನ್ಯರ ಜೇಬಿಗೆ ಮತ್ತೆ ಕತ್ತರಿ ಬಿದ್ದಂತಾಗಿದೆ. ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಇನ್ನಷ್ಟು ಹೊರೆಯಾಗಲಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಳ್ಳಕೆರೆಯಲ್ಲಿ ಮತದಾನ ಮಾಡಿದ ಶತಾಯುಷಿ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 26 : ರಾಜ್ಯದಲ್ಲಿ ಇಂದು ಲೋಕಸಭಾ ಚುನಾವಣೆ  ಮತದಾನ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಯುವಕ –

ಚಿತ್ರದುರ್ಗದಲ್ಲಿ‌ ಆರಂಭಗೊಂಡ ಮತದಾನ ಪ್ರಕ್ರಿಯೆ : ಬೆಳ್ಳಂಬೆಳಿಗ್ಗೆಯೇ ಸಾಲುಗಟ್ಟಿ ನಿಂತ ಮತದಾರರು

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 26 : ದೇಶದಾದ್ಯಂತ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಇಂದು ಆರಂಭವಾಗಿದೆ. ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭವಾಗಿದೆ. ಚಿತ್ರದುರ್ಗ ನಗರದ ವಿಪಿ ಬಡಾವಣೆಯ

ಮತ ಚಲಾಯಿಸಲು ಯಾವ ದಾಖಲೆಗಳು ಬೇಕು ? ಇಲ್ಲಿದೆ ಮಾಹಿತಿ…!

ಸುದ್ದಿಒನ್, ಚಿತ್ರದುರ್ಗ :  ಮತದಾನ ಮಾಡಲು ಮತದಾರನು ಎಪಿಕ್ (ಆಧಾರ್) ಕಾರ್ಡ್ ಇಲ್ಲವೆಂದು ಚಿಂತಿಸಬೇಕಿಲ್ಲಾ. ಪ್ರಜಾಪ್ರಭುತ್ವದ ಹಬ್ಬದಲ್ಲಿ ಯಾವೊಬ್ಬ ಮತದಾರನು ಮತದಾನದಿಂದ ವಂಚಿತರಾಗಬಾರದು ಎಂಬ ದೃಷ್ಠಿಯಿಂದ ಚುನಾವಣಾ ಆಯೋಗವು ಎಪಿಕ್ ಕಾರ್ಡ್ ಹೊರತುಪಡಿಸಿ 12

error: Content is protected !!