Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮ ಊರು ನಮ್ಮ ಹೆಮ್ಮೆ | ಚಿತ್ರದುರ್ಗ – ಸಾದರಹಳ್ಳಿ ಗ್ರಾಮ ದರ್ಶನ

---Advertisement---

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಸುದ್ದಿಒನ್,

ಸಾದರಹಳ್ಳಿ ಗ್ರಾಮವು ಲಕ್ಷ್ಮೀಸಾಗರ ಪಂಚಾಯತಿ ವ್ಯಾಪ್ತಿಯಲ್ಲಿದ್ದು, ಚಿತ್ರದುರ್ಗದಿಂದ ವಾಯುವ್ಯಕ್ಕೆ 14 ಕಿಲೋಮೀಟರ್ ದೂರದಲ್ಲಿ
ಚಿತ್ರದುರ್ಗ- ದಾವಣಗೆರೆ ರಾ.ಹೆ.4 ರ ಕಾತ್ರಾಳ್ ನಿಂದ ದಕ್ಷಿಣದ ಕಡೆ 2 ಕಿ.ಮೀ.ದೂರದಲ್ಲಿದೆ. ಹಳೆ ಸಾದರಹಳ್ಳಿ ಗ್ರಾಮವು ಈಗಿನ ಗ್ರಾಮದ ದಕ್ಷಿಣಕ್ಕೆ 1ಕಿ.ಮೀ ದೂರದಲ್ಲಿ ಕೆರೆಯ ಪೂರ್ವದಲ್ಲಿದೆ.ಅದು ಈಗ ಬೇಚಾರಕ್ ಆಗಿದ್ದು, ಹೊಲಗಳ ಜಾಗವಾಗಿದೆ.ಅಲ್ಲಿ ಇಂದಿಗೂ ವೀರಗಲ್ಲುಗಳು, ಭಗ್ನಾವಶೇಷಗಳು,
ನಂದೀಶ್ವರ ಮಂದಿರ, ಕರಿಯಮ್ಮ ದೇವಾಲಯ ಕಾಣಬಹುದು.
ಅಲ್ಲಿಂದ ಈಗಿರುವ ಜಾಗಕ್ಕೆ ಗ್ರಾಮವು ಸ್ಥಳಾಂತರವಾಗಿದೆ.

 

ಗ್ರಾಮದ ಹೆಸರಿನ ಮೂಲ:
ಗ್ರಾಮವು ಹಿಂದಿನಿಂದಲೂ ಸಾಧು-ಸಂತರು, ಜಂಗಮರು, ಅವಧೂತರು, ಗುರುಗಳ ತಪೋಭೂಮಿಯಾಗಿದ್ದು, ತಮ್ಮ ಜ್ಞಾನ, ತಪಃಶಕ್ತಿಯಿಂದ ಇಂದಿಗೂ ಸಮಾಧಿಸ್ಥಿತಿಯಲ್ಲಿ ಚೈತನ್ಯಶೀಲರಾಗಿದ್ದಾರೆ ಎನ್ನಲಾಗುತ್ತದೆ.
ಆ ಕಾರಣಕ್ಕೆ ಸಾದರುಗಳ ಹಳ್ಳಿಯೇ ಸಾದರಹಳ್ಳಿಯಾಗಿದೆ.

ಕೆರೆ:
ಗ್ರಾಮದ ದಕ್ಷಿಣಕ್ಕೆ ಇರುವ ಕೆರೆಗೆ ಕಡಲೇಗುದ್ದು, ಕ್ಯಾಸಾಪುರದ ಕಡೆಗಳಿಂದ ನೀರು ಹರಿದು ಬರುತ್ತದೆ. ತುಂಬಿದ ನಂತರ ಜಿನಗಿಹಳ್ಳಕ್ಕೆ ಹರಿದು ಕಾತ್ರಾಳ್ ಕೆರೆಗೆ ತಲುಪುತ್ತದೆ. ನೀಲಯ್ಯನಹಟ್ಟಿ, ಕ್ಯಾಸಾಪುರ, ಕೆ.ಬಳ್ಳೆಕಟ್ಟೆ….‌ಹತ್ತಿರದ ಗ್ರಾಮಗಳಾಗಿವೆ.

ಗ್ರಾಮದಲ್ಲಿರುವ ಮಂದಿರಗಳು:

1.ಆಂಜನೇಯಸ್ವಾಮಿ ದೇವಾಲಯ:
ಗ್ರಾಮದ ಮಧ್ಯಭಾಗದಲ್ಲಿರುವ ಆಂಜನೇಯ ಸ್ವಾಮಿ ದೇವಾಲಯವು ದಕ್ಷಿಣಾಭಿಮುಖಿಯಾಗಿದ್ದು,ಸ್ಥಳೀಯ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಗರ್ಭಗೃಹ ಮಾತ್ರ ಇದೆ. ಗರ್ಭಗೃಹದಲ್ಲಿ ಆಂಜನೇಯನ ಉಬ್ಬುಶಿಲ್ಪವಿದೆ.

2.ಆಲದಮರದಮ್ಮ ದೇವಾಲಯ:
ಗ್ರಾಮದ ಮಧ್ಯಭಾಗದಲ್ಲಿರುವ ಆಲದಮರದಮ್ಮ ದೇವಾಲಯವು ಪೂರ್ವಾಭಿಮುಖವಾಗಿದ್ದು,ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ.
ಈ ದೇವಾಲಯವು ಬೃಹತ್ ಆಲದಮರವನ್ನು ಒಳಗೊಂಡಂತೆ ನಿರ್ಮಿಸಲಾಗಿರುವ ಕಾರಣಕ್ಕೆ ಈ ಹೆಸರು ಬಂದಿದೆ. ಗರ್ಭಗೃಹ ಹಾಗೂ ಸಭಾಮಂಟಪಗಳಿವೆ. ದೇವಾಲಯದ ಆವರಣದಲ್ಲಿ ಬೃಹತ್ ಆಲದ ಮರವಿದೆ.

3.ಬಸವೇಶ್ವರ ದೇವಾಲಯ:
ಗ್ರಾಮದ ಮಧ್ಯಭಾಗದಲ್ಲಿರುವ ಈ ದೇವಾಲಯವು ಉತ್ತರಾಭಿಮುಖಿಯಾಗಿದ್ದು, ಪಾಳೇಯಗಾರರ ಶೈಲಿಯಲ್ಲಿ17-18 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ.ಗರ್ಭಗೃಹ ಹಾಗೂ ಸಭಾಮಂಟಪಗಳಿದ್ದು,ಗರ್ಭಗೃಹದಲ್ಲಿ 3 ಅಡಿ ಎತ್ತರದ ನಂದಿಯ ಶಿಲ್ಪವಿದೆ.ಸಭಾಮಂಟಪದಲ್ಲಿ ಬಹುಮುಖಗಳಲ್ಲಿ ಕಡೆದ ಕಂಬಗಳಿವೆ. ಈ ಕಂಬಗಳ ಮೇಲೆ ಪುಷ್ಪ ಬೋದಿಗೆಗಳಿವೆ.ದೇವಾಲಯದ ಮುಂಭಾಗದಲ್ಲಿ ದೀಪಸ್ತಂಭವಿದೆ. ಅದರ ಪಕ್ಕದಲ್ಲಿ ಪುರಾತನವಾದ ಬಾವಿಯಿದೆ. ಗ್ರಾಮದ ಪರೇವು ಆಚರಣೆಯನ್ನು ಶ್ರಾವಣಮಾಸದಲ್ಲಿ ಇಲ್ಲಿ ನಡೆಸಲಾಗುತ್ತದೆ,

4.ವೀರಭದ್ರೇಶ್ವರ ದೇವಾಲಯ:
ವೀರಭದ್ರೇಶ್ವರ ದೇವಾಲಯವು ಗ್ರಾಮದ ಮಧ್ಯಭಾಗದಲ್ಲಿದ್ದು ಪೂರ್ವಾಭಿಮುಖವಾಗಿ ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ.
ಗರ್ಭಗೃಹದಲ್ಲಿ ವೀರಭದ್ರಶಿಲ್ಪವನ್ನು ಪ್ರತಿಷ್ಟಾಪಿಸಲಾಗಿದೆ. ತ್ರಿಭಂಗಿಯಲ್ಲಿ ನಿಂತಿರುವ ವೀರಭದ್ರನು ಕರಂಡ ಮುಕುಟಧಾರಿಯಾಗಿದ್ದಾನೆ. ನಾಲ್ಕು ಕೈಗಳಲ್ಲಿ ಕತ್ತಿ ಗುರಾಣಿ ಮತ್ತು ಬಿಲ್ಲು-ಬಾಣ ಗಳಿವೆ. ಈ ದೇವರ ಕೆಂಡೋತ್ಸವವನ್ನು ಪ್ರತಿ ವರ್ಷ ನಡೆಸಲಾಗುತ್ತದೆ.

5.ಕರಿಯಮ್ಮ ದೇವಾಲಯ:
ಗ್ರಾಮದೇವತೆ ಕರಿಯಮ್ಮ ದೇವಸ್ಥಾನವು ಗ್ರಾಮದ ಮಧ್ಯಭಾಗದಲ್ಲಿದ್ದು, ಪೂರ್ವಾಭಿಮುಖವಾಗಿ ಸ್ಥಳೀಯ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಈ ದೇವರ ಜಾತ್ರೆಯನ್ನು ಪ್ರತಿವರ್ಷ ವಿಜೃಂಭಣೆಯಿಂದ ನಡೆಸಲಾಗುತ್ತದೆ.ಇದರ ಮೂಲ ದೇವಸ್ಥಾನವು ಹಳೆ ಗ್ರಾಮ ನಿವೇಶನದಲ್ಲಿದೆ.

ಇದರ ಜೊತೆಗೆ ವಿಷ್ಣುವಿನ ಶಕ್ತಿಯ ರೂಪವುಳ್ಳ ನಂದೀಶ್ವರ ಲಿಂಗವಿರುವ ದೇವಾಲಯವು ಹಳೆ ಗ್ರಾಮ ನಿವೇಶನದಲ್ಲಿ ಇದೆ.

ಲಿಂಗವನ ಜಂಗಮ ಸಂಸ್ಥಾನ:
ಗ್ರಾಮದ ಮಧ್ಯಭಾಗದಲ್ಲಿರುವ ಈ ಸಂಸ್ಥಾನವು ನೂರಾರು ವರ್ಷಗಳ ಇತಿಹಾಸ ಹೊಂದಿದೆ ಎನ್ನಲಾಗುತ್ತದೆ. ಇದು ಹಿಂದೆ ಅವಧೂತ ಪರಂಪರೆಯ ಶ್ರೀರುದ್ರಮುನಿ ಶಿವಮೂರ್ತಿ ಸ್ವಾಮಿ ಅವರಿಂದ ಸ್ಥಾಪಿಸಲ್ಪಟ್ಟಿತ್ತು
.ಇವರು ಚಂದ್ರವಳ್ಳಿಯ ಅಂಕಲಿ ಸ್ವಾಮೀಜಿಯವರ ಸಮಕಾಲೀನರಾಗಿದ್ದರು‌.
ಇವರು ಆಧ್ಯಾತ್ಮಿಕ ಸಾಧನೆ ಮಾಡಿದ ಅವಧೂತರಾಗಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...