Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕ್ಷಯಮುಕ್ತ ಭಾರತ ನಿರ್ಮಿಸಿ : ಎನ್.ಎಸ್.ಮಂಜುನಾಥ್ ಸಲಹೆ

---Advertisement---

 

 

ಚಿತ್ರದುರ್ಗ.ಜ.16: ದುಶ್ಚಟಗಳಿಂದ ದೂರವಿದ್ದು, ಆದರ್ಶ ಬದುಕು ಕಟ್ಟಿಕೊಳ್ಳುವ ಮೂಲಕ ಕ್ಷಯ ಮುಕ್ತ ಭಾರತ ನಿರ್ಮಿಸಿ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಹೇಳಿದರು.

ನಗರದ ಡಾನ್ ಬಾಸ್ಕೋ ಪ್ರೌಢಶಾಲೆಯಲ್ಲಿ  ಗುರುವಾರ 100 ದಿನಗಳ ಟಿಬಿ ನಿಯಂತ್ರಣ ಅಭಿಯಾನ ಕಾರ್ಯಕ್ರಮದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಟಿಬಿ ನಿಯಂತ್ರಣದಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

 

ಕ್ಷಯ ರೋಗವು ಸೂಕ್ಷ್ಮಾಣು ಜೀವಿ ಟ್ಯೂಬರ್ ಕ್ಲೊಸಿಸ್‍ನಿಂದ ಸೋಂಕು ತಗಲುತ್ತದೆ. ಕ್ಷಯ ರೋಗಿಯು ಕೆಮ್ಮಿದಾಗ ಸೀನಿದಾಗ ತುಂತುರು ಹನಿಗಳ ಮೂಲಕ ಕ್ಷಯರೋಗದ ಕ್ರಿಮಿ ವಾತಾವರಣ ಸೇರುತ್ತದೆ. ಉಸಿರಾಟದ ಮೂಲಕ ದೇಹ ಪ್ರವೇಶಿಸುತ್ತದೆ. ಕೆಮ್ಮುವಾಗ ಸೀನುವಾಗ ಕರವಸ್ತ್ರ ಬಳಸುವ ಶಿಸ್ತು ಪಾಲಿಸಿ, ನಿತ್ಯವೂ ವ್ಯಾಯಾಮ, ವೈಯಕ್ತಿಕ ಸ್ವಚ್ಛತೆ, ಪೌಷ್ಟಿಕ ಆಹಾರ ಸೇವಿಸಿ ಟಿಬಿ ರೋಗ ಬಾರದಂತೆ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಟಿಬಿ ರೋಗವು ಒಂದು ಮರಣಾಂತಿಕ ಕಾಯಿಲೆಯಾಗಿದ್ದು, ಭಾರತದ ಸಾರ್ವಜನಿಕ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಈ ನೂರು ದಿನಗಳ ಅಭಿಯಾನದಲ್ಲಿ ಸಾರ್ವಜನಿಕರಿಗೆ ವಿವಿಧ ವರ್ಗಗಳ ಸಮುದಾಯಕ್ಕೆ ಟಿಬಿ ರೋಗ ಹೇಗೆ ಬರುತ್ತದೆ, ಹೇಗೆ ಹರಡುತ್ತದೆ,  ಯಾವ ಚಿಕಿತ್ಸೆ ನೀಡಬೇಕು ಎಂಬುದರ ಬಗ್ಗೆ ಮಾಹಿತಿ ಶಿಕ್ಷಣ ಒದಗಿಸುವುದು. ವಿದ್ಯಾರ್ಥಿ ದಿಸೆಯಲ್ಲಿ ತಾವುಗಳು ನಿರ್ವಹಿಸಬೇಕಾದ ಜವಾಬ್ದಾರಿ ನಿಮ್ಮ ಮನೆಯ ಕುಟುಂಬದ ಸದಸ್ಯರಿಗೆ ಕೆಮ್ಮುವಾಗ ಸೀನುವಾಗ ನಿರ್ವಹಿಸಬೇಕಾದ ಶಿಷ್ಟಾಚಾರ ಹೇಳಿಕೊಡಬೇಕು.  ಸಮುದಾಯದಲ್ಲಿ ಆಗಾಗ ಅವಕಾಶ ಸಿಕ್ಕಾಗ ಇದರ ಬಗ್ಗೆ ಮಾತನಾಡಬೇಕು. ಸಾಮಾಜಿಕ ಕಳಂಕವನ್ನು ಹೋಗಲಾಡಿಸಿ ಉಚಿತ ಚಿಕಿತ್ಸೆಯ ಮಾಹಿತಿ ತಪಾಸಣೆಯ ಮಾಹಿತಿ ನೀಡಬೇಕು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಲು ಧ್ವನಿ ಎತ್ತಬೇಕು. ಎಲ್ಲಂದರಲ್ಲಿ ಉಗುಳುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯಕ್ ಮಾತನಾಡಿ, ಹೊಸ ಕ್ಷಯರೋಗ ಪ್ರಕರಣ ಕಡಿಮೆ ಮಾಡಿ ಇರುವ ರೋಗಿಗಳ ಮರಣ ಪ್ರಮಾಣ ಕಡಿಮೆ ಮಾಡುವುದು. ಇದು ನಮ್ಮೆದುರಿಗೆ ಇರುವ ಸವಾಲು ಎಲ್ಲರೂ ಒಟ್ಟಾಗಿ ಸವಾಲು ಎದುರಿಸೋಣ ಎಂದರು.

ಕಾರ್ಯಕ್ರಮದಲ್ಲಿ ಬುದ್ಧ ನಗರದ ನಗರ ಆರೋಗ್ಯ ಕೇಂದ್ರದ ಡಾ.ಸುರೇಂದ್ರ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶ್ರೀನಿವಾಸ್, ಕ್ಷಯರೋಗ ವಿಭಾಗದ ಮೇಲ್ವಿಚಾರಣಾ ಅಧಿಕಾರಿಗಳಾದ ನಾಗರಾಜ್, ಸಂತೋಷ್,  ಲೋಕೇಶ್, ಡಾನ್ ಬಾಸ್ಕೋ ವಿದ್ಯಾ ಸಂಸ್ಥೆಯ ಕೋ ಆರ್ಡಿನೇಟರ್ ಮಂಜುನಾಥ್, ಶಾಲಾ ಶಿಕ್ಷಕಿ ಅನಿತಾ, ಬುದ್ದ ನಗರದ ನಿಂಗೇಶ್, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment