ಚೆನ್ನೈ: ದಕ್ಷಿಣ ಭಾರತದ ರಾಜಕೀಯದ ದಿಕ್ಸೂಚಿ ಎಂದೇ ಕರೆಯಲ್ಪಡುವ ತಮಿಳುನಾಡು ರಾಜಕಾರಣದಲ್ಲಿ ಇಂದು ಐತಿಹಾಸಿಕ ಬದಲಾವಣೆಯೊಂದು ಸಂಭವಿಸಿದೆ. ತಮಿಳಗ ವೆಟ್ರಿ ಕಳಗಂ (TVK) ಸಂಸ್ಥಾಪಕ ಹಾಗೂ ನಟ ದಳಪತಿ ವಿಜಯ್ ಅವರ ಸರ್ಕಾರ ರಚನೆಯ ಹಾದಿಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಗ್ರೀನ್ ಸಿಗ್ನಲ್ ನೀಡಿದೆ. ಈ ಮೂಲಕ ದಶಕಗಳ ಕಾಲ ಡಿಎಂಕೆ ಜೊತೆಗಿದ್ದ ಕಾಂಗ್ರೆಸ್, ಈಗ ವಿಜಯ್ ಅವರ ಕೈಹಿಡಿಯುವ ಮೂಲಕ ಹೊಸ ಮೈತ್ರಿಗೆ ನಾಂದಿ ಹಾಡಿದೆ.
ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಬೆಂಬಲ ಕೋರಿ ವಿಜಯ್ ಸಲ್ಲಿಸಿದ್ದ ಮನವಿಗೆ ಕಾಂಗ್ರೆಸ್ ಸಕಾರಾತ್ಮಕವಾಗಿ ಸ್ಪಂದಿಸಿದೆ. ರಾಜ್ಯದ ಯುವಜನತೆ ಜಾತ್ಯತೀತ ಮತ್ತು ಪ್ರಗತಿಪರ ಸರ್ಕಾರಕ್ಕಾಗಿ ಹಂಬಲಿಸುತ್ತಿದ್ದಾರೆ, ಹೀಗಾಗಿ ಟಿವಿಎಕ್ ಬೆಂಬಲಿಸಲು ತಮಿಳುನಾಡು ಕಾಂಗ್ರೆಸ್ ಸಮಿತಿ (TNCC) ನಿರ್ಧರಿಸಿದೆ.ಈ ಮೈತ್ರಿ ಕೇವಲ ಈಗಿನ ಸರ್ಕಾರ ರಚನೆಗೆ ಮಾತ್ರ ಸೀಮಿತವಾಗಿಲ್ಲ. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆ ಹಾಗೂ ಲೋಕಸಭೆ ಚುನಾವಣೆಗಳಲ್ಲೂ ಈ ಎರಡೂ ಪಕ್ಷಗಳು ಜೊತೆಯಾಗಿ ಸಾಗಲಿವೆ.

ವಿಜಯ್ ಅವರಿಗೆ ಬೆಂಬಲ ಘೋಷಿಸುವ ಮುನ್ನ ಕಾಂಗ್ರೆಸ್ ಹೈಕಮಾಂಡ್ ಒಂದು ಮಹತ್ವದ ಷರತ್ತನ್ನು ವಿಧಿಸಿದೆ. “ಭಾರತದ ಸಂವಿಧಾನದ ಮೇಲೆ ನಂಬಿಕೆ ಇಲ್ಲದ ಯಾವುದೇ ಕೋಮು ಶಕ್ತಿಗಳನ್ನು (Communal Forces) ಮೈತ್ರಿಯಿಂದ ದೂರ ಇಡಬೇಕು ಹಾಗೂ ಸರ್ಕಾರದಲ್ಲಿ ಅವರಿಗೆ ಯಾವುದೇ ಸ್ಥಾನ ನೀಡಬಾರದು.” ಈ ಷರತ್ತಿಗೆ ವಿಜಯ್ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಮೈತ್ರಿ ಅಂತಿಮಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ರಾಜಕೀಯ ಲೆಕ್ಕಾಚಾರಗಳು
ನಟ ವಿಜಯ್ ಅವರ ರಾಜಕೀಯ ಪ್ರವೇಶ ತಮಿಳುನಾಡಿನಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿತ್ತು. ಈಗ ಕಾಂಗ್ರೆಸ್ ಬೆಂಬಲ ದೊರೆತಿರುವುದು ಅವರ ರಾಜಕೀಯ ಭವಿಷ್ಯಕ್ಕೆ ದೊಡ್ಡ ಬಲ ನೀಡಿದೆ. ಮತ್ತೊಂದೆಡೆ, ಡಿಎಂಕೆ ಪಾಳಯದಿಂದ ಕಾಂಗ್ರೆಸ್ ಹೊರಬಂದಿರುವುದು ರಾಜ್ಯದ ಸಾಂಪ್ರದಾಯಿಕ ರಾಜಕೀಯ ಸಮೀಕರಣಗಳನ್ನು ಸಂಪೂರ್ಣವಾಗಿ ಬದಲಿಸಿದೆ.
The President of Tamizhaga Vettri Kazhagam (TVK), Thiru C Vijay, has formally requested the Indian National Congress (INC) to extend its support for forming a government in Tamil Nadu. The people of Tamil Nadu, especially the youth, have delivered a very clear, strong and… pic.twitter.com/Aig79MoRoE
— Tamil Nadu Congress Committee (@INCTamilNadu) May 6, 2026



















