ಸುದ್ದಿಒನ್, ಹಿರಿಯೂರು, ಸೆಪ್ಟೆಂಬರ್. 16 : ತಾಲ್ಲೂಕಿನ ಪಟ್ರೆಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆಯನ್ನು ಶಿಮೂಲ್ ನಿರ್ದೇಶಕ ಬಿಸಿ ಸಂಜೀವಮೂರ್ತಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಇಲ್ಲಿನ ಹಾಲು ಉತ್ಪಾದಕರ ಸಮಸ್ಯೆಗಳು ಏನೇ ಇದ್ದರೂ ನಾವು ಬಗೆಹರಿಸಲು ಸಿದ್ದರಿದ್ದೇವೆ. ಮುಂದಿನ ವರ್ಷದಲ್ಲಿ ಬಿಎಂಸಿ ಕೇಂದ್ರ ತೆರೆಯಲು ಮಂಜೂರು ಮಾಡಲಾಗುವುದು. ಹಾಲಿನ ಉತ್ಪಾದನೆಯಲ್ಲಿ ಬದಲಾವಣೆ ತರಲು ಶಿಮೂಲ್ ಒಕ್ಕೂಟ ಮುಂದಾಗಿದ್ದು, ಅದರಂತೆ ಪಟ್ರೆಹಳ್ಳಿಯ ಹಾಲು ಉತ್ಪಾದಕ ಸುಮಾರು 40 ಜನರಿಗೆ ಬಡ್ಡಿ ರಹಿತ ಸಾಲ ಕೊಡಲು ತಿರ್ಮಾನಿಸಲಾಗಿದೆ. ಪಟ್ರೆಹಳ್ಳಿ ಹಾಲು ಉತ್ಪಾದಕರ ಮಹಿಳಾ ಆಡಳಿತ ಮಂಡಳಿಯು ಉತ್ತಮವಾಗಿ ಕಾರ್ಯ ನಡೆಯುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಶಿಮೂಲ್ ಒಕ್ಕೂಟದಿಂದ ಸಿಗುವ ರಬ್ಬರ್ ಮ್ಯಾಟ್, ಮಿಲ್ಕ್ ಮಿಶನ್ ಒಳಗೊಂಡಂತೆ ಎಲ್ಲಾ ಸೌಲಭ್ಯಗಳನ್ನು ಪಡಿಸಿಕೊಂಡು, ಹಾಲು ಉತ್ಪಾದಕರು ಜೀವನ ನಿರ್ವಹಣೆಗೆ ಮುಂದಾಗಬೇಕು ಎಂದರು.
2024ರ ವರ್ಷದಲ್ಲಿ ಪಟ್ರೆಹಳ್ಳಿ ಹಾಲು ಉತ್ಪಾದಕರ ಸಂಘದ ರೈತರು ಉತ್ಪಾದನೆ ಮಾಡಿದ 57,567,08 ರೂಪಾಯಿ ಮೌಲ್ಯದ ಹಾಲನ್ನು ಶಿಮೂಲ್ ಒಕ್ಕೂಟ ಖರೀದಿಸಿದ್ದು, ಈ ಹಾಲನ್ನು 60,91,567ರೂಪಾಯಿಗೆ ಮಾರಾಟ ಮಾಡಿದೆ. 5,13,800 ರೂಪಾಯಿ ಮೌಲ್ಯದ ಹಾಲನ್ನು ಸ್ಥಳೀಯವಾಗಿ ಮಾರಾಟ ಮಾಡಿದೆ. ಈ ವರ್ಷದಲ್ಲಿ ಪಟ್ರೆಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘವು 2,29,347 ರೂಪಾಯಿ ಲಾಭಾಂಶದಲ್ಲಿದೆಯೆಂದು ಸಭೆಯಲ್ಲಿ ಪಶುವೈದ್ಯಾಧಿಕಾರಿ ಎಂ. ಪುಟ್ಟರಾಜು ಮಾಹಿತಿ ನೀಡಿದರು.
ಇದೇ ವೇಳೆ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡಿದ ಮೂವರು ಮಹಿಳಾ ರೈತರನ್ನು ಸನ್ಮಾನಿಸಲಾಯಿತು. ಭಾಗ್ಯಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ವಿಸ್ತರಣಾಧಿಕಾರಿ ಎಸ್.ಜಿ. ಕೃಷ್ಣಕುಮಾರ್, ಆಡಳಿತ ಮಂಡಳಿ ಸದಸ್ಯರಾದ ಶೃತಿ, ವಸಂತಿ, ಕುಮುದ, ವೈ. ಸೆಲ್ವಿ, ತಂಗಮಣಿ, ಸುಂದರಮ್ಮ, ಅನುಷಾ, ದುರ್ಗಮ್ಮ, ಡೈರಿಯ ಕಾರ್ಯನಿರ್ವಾಹಣಾಧಿಕಾರಿ ಕಾವ್ಯ, ಹಾಲು ಪರೀಕ್ಷಕಿ ಎಂ. ಕಲಾ, ಸಹಾಯಕಿ ಅಮಲ ಸೇರಿದಂತೆ ಮತ್ತಿತರರು ಇದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.
















