ಬೆಂಗಳೂರು; ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಿನ್ನೆ ನಡೆಯಬಾರದಾ ದುರ್ಘಟನೆ ನಡೆದಿದೆ. ಅದರಿಂದ 11 ಜನ ಸಾವನ್ನಪ್ಪಿದ್ದಾರೆ. ಎಲ್ಲೆಲ್ಲಿಂದನೋ ಬಂದು ಕಾಲ್ತುಳಿತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಈ ಸಾವಿನಿಂದ ಅವರ ಕುಟುಂಬಸ್ಥರು ಕೊರಗುತ್ತಿದ್ದಾರೆ. ಈ ಸಂಬಂಧ ವಿರೋಧ ಪಕ್ಷದ ನಾಯಕರು ಆಡಳಿತ ಪಕ್ಷದ ಮೇಲೆ ಹೌಹಾರಿದ್ದಾರೆ. ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಕೂಡ ತಿರುಗೇಟು ನೀಡಿದ್ದು, ಎರಡು ಪಕ್ಷಗಳು ಸಾವಿನಲ್ಲಿ ರಾಜಕೀಯ ಮಾಡೋದೆ ಹೆಚ್ಚು ಎಂದಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಡರ್ಟಿ ಪಾಲಿಟಿಕ್ಸ್, ಬಿಜೆಪಿ, ಜೆಡಿಎಸ್ ಯಾವತ್ತಿದ್ರೂ ಡೆಡ್ ಬಾಡಿ ಮೇಲೆ ರಾಜಕೀಯ ಮಾಡ್ತಾರೆ. ಕೆಎಸ್ಸಿಎಗೆ ಹೋಗುವ ಪ್ಲ್ಅನ್ ನನಗಿರಲಿಲ್ಲ. ಅವರು ಆಹ್ವಾನ ನೀಡಿದರೂ ಹೋಗೋಕೆ ಇಷ್ಟ ಇರಲಿಲ್ಲ. ಮ್ಯಾನೇಜ್ಮೆಂಟ್ ಅವರನ್ನು ನನ್ನ ಗಾಡಿಯಲ್ಲಿ ಕೂರಿಸೊಕೊಂಡು ಹೋಗಬೇಕಿತ್ತು. ತಕ್ಷಣ ಅವರ ಹತ್ತಿರ ಮಾತನಾಡಿ, ಅವರಿಗೆ ಹೇಳಿ ತಕ್ಷಣ 10 ನಿಮಿಷದಲ್ಲಿ ಕಾರ್ಯಕ್ರಮ ನಿಲ್ಲಿಸೋಕೆ ಹೇಳಿದೆ.
ಇದಕ್ಕೆಲ್ಲ ಅವರು ಒಪ್ಪಿಕೊಂಡರು. ಸ್ಟೇಡಿಯಂ ಹೋಗುವವರೆಗೂ ಹಿಂಗಾಗಿರುವುದು ನನಗೆ ಗೊತ್ತೇ ಇಲ್ಲ. ಫೋನ್ ಗಳು ಜ್ಯಾಮ್ ಆಗಿದ್ದವು. ಮಾಧ್ಯಮದವರೇ ಘಟನೆ ಬಗ್ಗೆ ನನಗೆ ಮಾಹಿತಿ ನೀಡಿದರು. ಆಗಿರುವ ಘಟನೆ ಕುರಿತು ಈಗ ರಾಜಕಾರಣ ಮಾತನಾಡುವುದು ಬೇಡ. ಕುಮಾರಸ್ವಾಮಿ ಹೇಳಿದಂಗೆ ಅದಕ್ಕೆ ಉತ್ತರ ಆಮೇಲೆ ಕೊಡ್ತೀನಿ. ನನ್ನ ನನ್ನ ಮನೆ ಮುಂದೆ ರಾಜಕುಮಾರ್ದ್ದು ಆಗಿದ್ದಾಗ ಆವತ್ತು ಏನಾಯಿತು?. ಡೆಲ್ಲಿ ಏನಾಗಿತ್ತು?. ಇದರ ಬಗ್ಗೆ ರಾಜಕೀಯ ಮಾತನಾಡೋಕೆ ನಾನು ಹೋಗಲ್ಲ. ಕೆಟ್ಟ ರಾಜಕೀಯ. ಬಿಜೆಪಿ, ಜೆಡಿಎಸ್ ಯಾವಾಗಲೂ ಡೆಡ್ ಬಾಡಿ ಮೇಲೆ ರಾಜಕೀಯ ಮಾಡ್ತಾರೆ. ಇದು ಅವರ ರಾಜಕೀಯ ಅಜೆಂಡಾ ಆಗಿದೆ ಎಂದಿದ್ದಾರೆ.











