Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಿಕ್ಲು ಶಿವನ ಕೊ* ಕೇಸ್ : ಭೈರತಿ ಬಸವರಾಜ್ ಸಹೋದರನ ಪುತ್ರ ಅರೆಸ್ಟ್..!

---Advertisement---

ಬೆಂಗಳೂರು: ರಾಜ್ಯದಲ್ಲಿ ಬಿಕ್ಲು ಶಿವನ ಕೊ* ಕೇಸ್ ಸಾಕಷ್ಟು ಸಂಚಲನವನ್ನು ಸೃಷ್ಟಿ ಮಾಡಿದೆ. ಬಿಜೆಪಿ ಶಾಸಕ ಭೈರತಿ ಬಸವರಾಜ್ ಅವರು ಹೆಸರು ಓಡಾಡುತ್ತಿದ್ದು, ಈಗಾಗಲೇ ವಿಚಾರಣೆಗೂ ಕರೆದಿದ್ದಾರೆ. ಇದರ‌ ನಡುವೆ ದೊಡ್ಡದೊಂದು ಬೆಳವಣಿಗೆ ನಡೆದಿದ್ದು, ಈ ಕೊ* ಕೇಸಲ್ಲಿ ಭೈರತಿ ಬಸವರಾಜ್ ಸಹೋದರನ ಮಗ ಅನಿಲ್ ಅವರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳಿಗೆ ಅನಿಲ್ ಕಾರು ನೀಡಿದ್ದರು ಎಂಬ ಹಿನ್ನೆಲೆ ವಶಕ್ಕೆ ಪಡೆದುಕೊಂಡಿದ್ದಾರೆ.

ಬಿಕ್ಲು ಶಿವನ ಕೊಲೆ ಕೇಸಲ್ಲಿ ಅರುಣ್ ಮತ್ತು ನವೀನ್ ಮೊದಲ ಆರೋಪಿಯಾಗಿರುವ ಜಗದೀಶ್ ಸಹಚರರಾಗಿದ್ದಾರೆ. ಇವರಿಗೆ ಭೈರತಿ ಬಸವರಾಜ್ ಸಹೋದರ ಮಗ ಅನಿಲ್ ಕಾರು ನೀಡಿದ್ದರಂತೆ. ಹೀಗಾಗಿ ಭಾರತೀನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಬಿಕ್ಲು ಶಿವ ಕೊ* ಕೇಸ್ ಚುರುಕುಗೊಂಡಿದ್ದು, ಅನುಮಾನವಿರುವವರನ್ನ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಬಿಕ್ಲು ಶಿವನ ಕೊಲೆಗೆ ಕಾರಣ ಏನಂದ್ರೆ, ಕಿತ್ತಗನೂರಿನಲ್ಲಿರುವ ಒಂದೂವರೆ ಎಕರೆ ಜಮೀನು ಎನ್ನಲಾಗಿದೆ. ಈ ಜಮೀನಿಗೆ ಮೂವರು ಮಾಲೀಕರಿದ್ದರು. ಈ ಪೈಕಿ ನದಾಫ್ ಬಳಿ ಬಿಕ್ಲು ಜಮೀನು ಖರೀದಿ ಅಗ್ರಿಮೆಂಟ್ ಮಾಡಿಸಿಕೊಂಡಿದ್ದ. ಮತ್ತೊಬ್ಬ ಮಾಲೀಕನಿಂದ ರವಿ ಅಗ್ರಿಮೆಂಟ್ ಮಾಡಿಸಿಕೊಂಡು ಕಾಂಪೌಂಡ್ ಹಾಕುತ್ತಿದ್ದ.

ಇದರಿಂದ ಕೆರಳಿದ ಶಿವ ಆ ಸಮಯಕ್ಕೆ ಕಾಂಪೌಂಡ್ ಕೆಡವಿದ್ದ. ಬಳಿಕ ರವಿ ಬೆನ್ನ ಹಿಂದೆ ಇದ್ದ ಜಗದೀಶ್ ಮತ್ತೆ ಕಿರಣ್, ಶಿವುಗೆ ಪ್ರಾಣ ಬೆದರಿಕೆ ಹಾಕಿದ್ದರು. ಈ ಬಗ್ಗೆ ಶಿವು ಅಂದಿನ ಕಮಿಷನರ್ ಗೆ ದೂರು ನೀಡಿದ್ದ.‌ ರಾಮಮೂರ್ತಿನಗರ ಠಾಣೆಗೆ ದೂರು ನೀಡಿದ್ದ. ಆದರೆ ಅವರು ಎನ್​ಸಿಆರ್​ ದಾಖಲಿಸಿ ಕೈ ಚೆಲ್ಲಿದ್ದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment