Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್ : ಅಪರಾಧಿ ಎಂದು ಘೋಷಿಸಿದ ಕೋರ್ಟ್, ಶಿಕ್ಷೆಯ ಪ್ರಮಾಣವೊಂದೆ ಬಾಕಿ..!

---Advertisement---

ಬೆಂಗಳೂರು: ಈ ಬಾರಿ ಜಾಮೀನು ಸಿಗಲಿದೆ, ಹೊರ್ಎ ಬಂದು ಮತ್ತೆ ಹೊಸ ರಾಜಕೀಯ ಜೀವನ ಶುರು ಮಾಡಬಹುದು ಎಂದುಕೊಂಡಿದ್ದ ಪ್ರಜ್ವಲ್ ರೇವಣ್ಣನಿಗೆ ತೀರಾ ಹಿನ್ನಡೆಯಾಗಿದೆ. ಕೋರ್ಟ್ ನಿಂದ ಅಪರಾಧಿ ಎಂದು ಘೋಷಣೆಯಾಗಿದೆ. ಅತ್ಯಾಚಾರ ಆರೋಪದ ಪ್ರಕರಣದ ತನಿಖೆ ನಡೆಸುತ್ತಿದ್ದ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್, ಮಹತ್ವದ ತೀರ್ಪು ಪ್ರಕಟಿಸುವ ಮೂಲಕ ಬಿಗ್ ಶಾಕ್ ನೀಡಿದೆ.

ಅತ್ಯಾಚಾರ ಕೇಸಲ್ಲಿ ಪ್ರಜ್ವಲ್ ಅವರನ್ನ ಕೋರ್ಟ್ ಇಂದು ಅಪರಾಧಿ ಎಂದು ತೀರ್ಪು ನೀಡಿದ್ದು, ನಾಳೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಣೆ ಮಾಡಲಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ನಾಲ್ಕು ಕೇಸ್ ಗಳು ದಾಖಲಾಗಿದ್ದವು. ಈ ಕೇಸಲ್ಲಿ ಒಂದು ಪ್ರಕರಣದ ತೀರ್ಪು ಮಾತ್ರ ಬಂದಿದೆ. ಮನೆ ಕೆಲಸದಾಕೆ ನೀಡಿದ ದೂರಿನಲ್ಲಿ ಆರೋಪ ಸಾಬೀತಾದ ಹಿನ್ನೆಲೆ ಅಪರಾಧಿ ಎಂದು ತೀರ್ಪು ನೀಡಿದೆ.

ಎರಡು ಕಡೆಯ ವಕೀಲರ ವಾದವನ್ನ ಆಲಿಸಿದ್ದ ನ್ಯಾಯಾಧೀಶರು, ತೀರ್ಪನ್ನು ನೀಡಿದ್ದಾರೆ. ಅಪರಾಧಿ ಎಂದು ಸಾಬೀತಾದ ಹಿನ್ನೆಲೆ ಪ್ರಜ್ವಲ್ ರೇವಣ್ಣನಿಗೆ ದೊಡ್ಡ ಹಿನ್ನಡೆಯಾಗಿದೆ. ನಾಳೆ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ. ಶಿಕ್ಷೆಯ ಪ್ರಮಾಣಕ್ಕೂ ಮುನ್ನ ಕೂಡ ವಾದ ಪ್ರತಿವಾದವನ್ನು ಕೋರ್ಟ್ ಆಲಿಸಲಿದೆ. ಈ ವೇಳೆ ಪ್ರಜ್ವಲ್ ರೇವಣ್ಣ ಅವರ ಪರ ವಕೀಲರು ಕೋರ್ಟ್ ಗೆ ಮನವಿಯನ್ನು ಮಾಡಬಹುದು. ತಮ್ಮ ಕಕ್ಷಿದಾರನ ರಾಜಕೀಯ ಭವಿಷ್ಯವನ್ನು ಮುಂದಿಟ್ಟುಕೊಂಡು ಶಿಕ್ಷೆ ಪ್ರಮಾಣವನ್ನು ಕಡಿಮೆ ಮಾಡುವುದಕ್ಕೆ ಮನವಿ ಮಾಡಬಹುದು. ಕೋರ್ಟ್ ನತ್ತ ಸದ್ಯ ಎಲ್ಲರ ಚಿತ್ತವಿದೆ. ನಾಳೆ ಯಾವ ರೀತಿಯ ಶಿಕ್ಷೆಯನ್ನ ವಿಧಿಸಬಹುದು..? ಎಷ್ಟು ವರ್ಷಗಳ ಕಾಲ ಶಿಕ್ಷೆಯ ಪ್ರಮಾಣವನ್ನ ವಿಧಿಸಬಹುದು ಎಂಬುದು ನಾಳೆ ಗೊತ್ತಾಗಲಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment