ಸ್ಯಾಂಡಲ್ ವುಡ್ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ ಭೀಮಾ. ಸಲಗದಂತ ರಾ ಸಿನಿಮಾ ಕೊಟ್ಟು, ಮಾಸ್ ಪ್ರೇಕ್ಷಕರನ್ನು ಸೆಳೆದಿದ್ದಂತ ದುನಿಯಾ ವಿಜಯ್ ಮತ್ತೆ ಕೈಗೆತ್ತಿಕೊಂಡಿದ್ದು ಭೀಮಾ ಸಿನಿಮಾ. ಭೀಮಾ ಸಿನಿಮಾ ಅನೌನ್ಸ್ ಆದಾಗಿನಿಂದ ಸಾಕಷ್ಟು ಸುದ್ದಿಯಲ್ಲಿದೆ. ಈ ಸಿನಿಮಾಗಾಗಿ ದುನಿಯಾ ವಿಜಯ್ ಎಷ್ಟು ಕಷ್ಟ ಪಡುತ್ತಿದ್ದಾರೆ ಎಂಬುದು ಕೂಡ ಆಗಾಗ ರಿವಿಲ್ ಆಗಿದೆ.
ರಸ್ತೆಯ ಬೀದಿ ಬೀದಿಗಳಲ್ಲಿ ಅಲೆದು, ಇಕ್ಕೆಲಗಳಲ್ಲಿ ಸುತ್ತಾಡಿ ಸಿನಿಮಾ ಶೂಟಿಂಗ್ ಮಾಡಿದ್ದಾರೆ ದುನಿಯಾ ವಿಜಯ್ ಇತ್ತಿಚೆಗೆ ಅದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ರಿಲೀಸ್ ಆಗಿತ್ತು. ರಿಯಲ್ ಪೊಲೀಸರು ಕೂಡ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಧ್ಯವಾದಷ್ಟು ರಿಯಲಿಸ್ಟಿಕ್ ಆಗಿ ಶೂಟ್ ಮಾಡಿದ್ದಾರೆ. ಆದರೆ ಇದೀಗ ಮೇಕಿಂಗ್ ವಿಡಿಯೋ ರಿಲೀಸ್ ಆಗಿದ್ದು, ಸಿನಿಮಾದ ಹಿಂದಿನ ಕಷ್ಟ-ಸುಖ ಅನಾವರಣವಾಗಿದೆ.
ಭೀಮಾ ಸಿನಿಮಾವನ್ನು ಬೆಂಗಳೂರಿನ ಇಕ್ಕೆಲಗಳಲ್ಲಿ ಶೂಟ್ ಮಾಡಲಾಗಿದೆ. ಅದರ ಜೊತೆಗೆ ದೊಡ್ಡ ದೊಡ್ಡ ಸೆಟ್ ಗಳನ್ನು ಹಾಕಿ ಶೂಟ್ ಮಾಡಲಾಗಿದೆ. ಭೀಮನ ಈ ಅಂಗಳದಲ್ಲಿ ನಿಮಗೆ ನೂರಾರು ಮುಖಗಳೂ ಕಾಣುತ್ತವೆ. ತಮ್ಮ ಪ್ರಾಣಕ್ಕಷ್ಟೇ ಅಲ್ಲ ಸಾರ್ವಜನಿಕರ ಜೀವಕ್ಕೂ ವೀಲಿಂಗ್ ಮಾಡುವ ಮೂಲಕ ಕುತ್ತು ತರುವ ಪುಂಡರ ಹಾವಳಿ ಜೊತೆ ಜೈಲಿನ ಸೆರೆವಾಸ ಹಾಗೂ ವನವಾಸದ ಸ್ಯಾಂಪಲ್ಲುಗಳನ್ನೂ ಈ ವಿಡಿಯೋದಲ್ಲಿ ನೀವು ನೋಡಬಹುದು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












