Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ದರ್ಶನ್ ಅವರ ಮತ್ತೊಂದು ಆಸೆ ಈಡೇರಿಸಿದ ಬಳ್ಳಾರಿ ಜೈಲು ಅಧಿಕಾರಿಗಳು..!

---Advertisement---

ಬಳ್ಳಾರಿ: ನಟ ದರ್ಶನ್, ರೇಣುಕಾಸ್ವಾಮಿ ಕೊಲೆ ಮಾಡಿ ಜೈಲು ಸೇರಿದ್ದಾರೆ. ಪರಪ್ಪನ ಅಗ್ರಹಾರದಿಂದ ಬಳ್ಳಾರಿಗೆ ಶಿಫ್ಟ್ ಆಗಿರುವ ದರ್ಶನ್ ಗೆ ಅಲ್ಲಿ ಯಾರೂ ಸಹಪಾಠಿಗಳಿಲ್ಲ. ಈಗ ಚಾರ್ಜ್ ಶೀಟ್ ಸಲ್ಲಿಕೆ ಆಗಿದೆ. ಆಗಾಗ ದರ್ಶನ್ ಪತ್ನಿ ವಿಜಯಲಕ್ಷ್ಮೀ ಬಳ್ಳಾರಿ ಜೈಲಿಗೆ ಭೇಟಿ ನೀಡಿ ಒಂದಷ್ಟು ವಿಚಾರಗಳನ್ನ ಹೇಳುತ್ತಾ ಇರುತ್ತಾರೆ. ಇದೀಗ ರಾಜ್ಯದಲ್ಲಿ ಏನಾಗ್ತಿದೆ, ತನ್ನ ಕೇಸಲ್ಲಿ ಏನೆಲ್ಲಾ ಡೆವಲಪ್ಮೆಂಟ್ ಆಗ್ತಾ ಇದೆ ಎಂಬುದನ್ನು ದರ್ಶನ್ ಅವರೇ ಖುದ್ದಾಗಿ ತಿಳಿದುಕೊಳ್ಳಬಹುದು. ಬಳ್ಳಾರಿ ಜೈಲು ಅಧಿಕಾರಿಗಳು ಅಂಥದ್ದೊಂದು ಅವಕಾಶ ಒದಗಿಸಿಕೊಟ್ಟಿದ್ದಾರೆ.

ಜೈಲಿನಲ್ಲಿ ಈಗ ದರ್ಶನ್ ಇರುವ ರೂಮಿಗೆ ಟಿವಿ ಫಿಕ್ಸ್ ಮಾಡಲಾಗಿದೆ. ಕೈದಿಗಳಿಗೆ ಟಿವಿ ನೀಡುವ ಅವಕಾಶ ಜೈಲಿನಲ್ಲಿ ಇದೆ. ಇಷ್ಟು ದಿನ ಆ ಟಿವಿ ಹಾಳಾಗಿತ್ತು. ದರ್ಶನ್ ಕೂಡ ಕೊಲೆ ಕೇಸಲ್ಲಿ ಏನಾಗ್ತಿದೆ ಎಂಬುದನ್ನು ನೋಡಬೇಕಿತ್ತು. ಹೀಗಾಗಿ ಮನವಿಯನ್ನು ಮಾಡಿದ್ದರು. ಆ ಮನವಿಯನ್ನು ಸ್ಚೀಕರಿಸಿದ ಬಳ್ಳಾರಿ ಜೈಲು ಅಧಿಕಾರಿಗಳು ಟಿವಿಯನ್ನು ನೀಡಿದ್ದಾರೆ.

ದರ್ಶನ ಇರುವ ಸೆಲ್ ಗೆ ಹೈಯರ್‌ ಕಂಪನಿಯ ಟಿವಿ ಅಳವಡಿಸಿದ್ದಾರೆ. ಈ ಹಿಂದೆ ಟಿವಿ ಬೇಡವೆಂದು ಹೇಳಿದ್ದ ದರ್ಶನ್, ಕೇಸ್ ಸ್ಟ್ರಾಂಗ್ ಆಗುತ್ತಾ ಹೋಗುತ್ತಿರುವ ಕಾರಣ, ತನ್ನ ವಿಚಾರ ತಿಳಿದುಕೊಳ್ಳುವುದಕ್ಕೆ ಟಿವಿ ಬೇಕು ಎಂದು ಬೇಡಿಕೆ ಇಟ್ಟಿದ್ದರು. ಬಳ್ಳಾರಿ ಜೈಲಿಗೆ ಹೋದ ಮೇಲೆ ಟಾಯ್ಲೆಟ್ ಚೇರ್ ಬೇಕು ಎಂದು ಕೇಳಿದ್ದರು ಅದನ್ನು ನೀಡಲಾಗಿದೆ. ಈಗ ಟಿವಿ ಕೂಡ ನೀಡಲಾಗಿದೆ. ಪರಪ್ಪನ ಅಗ್ರಹಾರದಲ್ಲಿ ತನಗೆ ಬೇಕಾದ್ದನ್ನು ರೌಡಿಶೀಟರ್ ಗಳ ಸ್ನೇಹದಿಂದ ಸುಲಭವಾಗಿ ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ಆದರೆ ಬಳ್ಳಾರಿ ಜೈಲಿನಲ್ಲಿ ಅವರುಗೆ ಯಾರು ಪರಿಚಯದವರೇ ಇಲ್ಲವಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...