Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

BBK 12: ಒಂದು ಪತ್ರದಿಂದ ಮತ್ತೆ ಒಂದಾದ ಅಶ್ವಿನಿ – ಜಾಹ್ನವಿ

BBK12
---Advertisement---

ಬೆಂಗಳೂರು: ಬಿಗ್ ಬಾಸ್ ಕನ್ನಡ ಶುರುವಾದಾಗಿನಿಂದ ಅಶ್ವಿನಿ ಹಾಗೂ ಜಾಹ್ನವಿ ಸಿಕ್ಕಾಪಟ್ಟೆ ಆತ್ಮೀಯರಾಗಿದ್ದರು. ಗಾಸಿಪ್ ಮಾಡುವುದರಲ್ಲಿ ಮುಂದಿದ್ದರು. ಅಷ್ಟೇ ಅಲ್ಲ ಬೇರೆಯವರಿಗೆ ಇಬ್ಬರ ನಡವಳಿಕೆಯಿಂದ ಸಾಕಷ್ಟು ನೋವಾಗಿತ್ತು. ಆದರೆ ಇತ್ತೀಚೆಗೆ ಇಬ್ಬರು ಕಿತ್ತಾಡಿಕೊಂಡು, ದೂರ ದೂರ ಆಗಿದ್ದರು. ಬಿಗ್ ಬಾಸ್ ಮನೆಯಲ್ಲಿ ಎಂಥದ್ದೆ ಫ್ರೆಂಡ್ಶಿಪ್ ಆದ್ರೂ ಹೆಚ್ಚು ದಿನ ವರ್ಕ್ ಆಗಲ್ಲ ಅನ್ನೋದನ್ನ ಇಬ್ಬರು ಪ್ರೂವ್ ಮಾಡಿದ್ದರು. ಇದೀಗ ಮತ್ತೆ ಒಂದಾಗಿದ್ದಾರೆ.

ಅಶ್ವಿನಿ ಹಾಗೂ ಜಾನ್ವಿಯನ್ನ ಒಂದು ಮಾಡಿದ್ದು ಅದೊಂದು ಭಾವನಾತ್ಮಕ ಪತ್ರ. ಹೌದು ಈ ವಾರ ಪೂರ್ತಿ ಮನೆಯವರಿಂದ ಪತ್ರ ಕಳುಹಿಸಲಾಗಿದೆ. ಆದರೆ ಸ್ಪರ್ಧಿಗಳಿಗೆ ಅಷಗಟು ಸುಲಭದಲ್ಲಿ ಪತ್ರಗಳು ಸಿಗುತ್ತಿಲ್ಲ. ಒಬ್ಬರು ತ್ಯಾಗ ಮಾಡಿದರಷ್ಟೇ ಇನ್ನೊಬ್ಬರಿಗೆ ಪತ್ರಗಳು ಸಿಗುವುದು. ಕೆಲವೊಂದು ಪತ್ರಗಳು ದ್ವೇಷದ ಜ್ವಾಲೆಗೂ ಚಿಂದಿಯಾಗಿವೆ. ಈಗ ಅಶ್ವಿನಿ ಹಾಗೂ ಜಾಹ್ನವಿ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಪತ್ರ ಓದುವ ಅವಕಾಶವಿದೆ. ಯಾರಿಗೆ ಸಿಗಲಿದೆ ಅನ್ನೋ ಸಂದರ್ಭದಲ್ಲಿ ಇಬ್ಬರು ಒಂದಾಗಿದ್ದಾರೆ.

ಜಾಹ್ನವಿ ಹಾಗೂ ಅಶ್ವಿನಿ ಇಬ್ಬರು ಸಿಂಗಲ್ ಮದರ್ಸ್. ಇಬ್ಬರಿಗಿರುವುದು ಗಂಡು ಮಗನೆ. ಪತ್ರದ ಬಗ್ಗೆ ಹೇಳುವಾಗ ಜಾಹ್ನವಿ ನಾನೇ ಎಕ್ಸ್ ಪ್ಲೈನ್ ಮಾಡ್ತೀನಿ ಅಂದರು ಅಶ್ವಿನಿನೇ ಮಾತನಾಡಿದ್ದಾರೆ. ತಂದೆಯ ಪ್ರೀತಿ ಬಗ್ಗೆ ಮಾತನಾಡುತ್ತಾ ಎಮೋಷನಲ್ ಆಗಿದ್ದಾರೆ. ಆಗ ಜಾಹ್ನವಿ ಓಡಿ ಬಂದು ತಬ್ಬಿಕೊಂಡಿದ್ದಾರೆ. ಈ ಮೂಲಕ ದೂರ ದೂರವಾಗಿದ್ದ ಸ್ನೇಹಿತೆಯರು ಮತ್ತೆ ಒಂದಾಗಿದ್ದಾರೆ. ಮತ್ತೆ ಅದೇ ತಪ್ಪನ್ನ ಇಬ್ಬರು ಮುಂದುವರೆಸುತ್ತಾರಾ..? ಇಲ್ಲ ಬದಲಾಗುತ್ತಾರಾ ಎಂಬುದನ್ನ ನೋಡಬೇಕಿದೆ. ಒಟ್ನಲ್ಲಿ ಬಿಗ್ ಬಾಸ್ ಮನೆಯ ಕೆಲವೊಂದು ಭಾವನಾತ್ಮಕ ವಿಚಾರಗಳು ಸ್ಪರ್ಧಿಗಳನ್ನ ಒಂದು ಮಾಡುತ್ತವೆ. ಅದಕ್ಕೆ ಈ ಇಬ್ಬರೆ ಸಾಕ್ಷಿ.

 

ಚಿಕಿತ್ಸೆ ನೀಡಿದರು ಹರೀಶ್ ರಾಯ್ ಸಾವನ್ನಪ್ಪಲು ಕಾರಣವೇನು..? ವೈದ್ಯರಿಂದ ಸ್ಪಷ್ಟನೆ

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now