ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್ 15 : ವೀರಶೈವ ಲಿಂಗಾಯಿತ ಯುವ ವೇದಿಕೆಯಿಂದ ಚಂದ್ರವಳ್ಳಿ ಕ್ರಾಸ್ ಹತ್ತಿರ ಬಸವ ಪುತ್ಥಳಿಯನ್ನು ಮಂಗಳವಾರ ಪ್ರತಿಷ್ಠಾಪಿಸಲಾಯಿತು.

ವೀರಶೈವ ಲಿಂಗಾಯಿತ ಯುವ ವೇದಿಕೆ ಅಧ್ಯಕ್ಷ ಹೆಚ್.ಎಂ.ಮಂಜುನಾಥ್ ಮಾತನಾಡಿ ಹನ್ನೆರಡನೆ ಶತಮಾನದ ಕ್ರಾಂತಿಕಾರಿ, ಭಕ್ತಿ ಭಂಡಾರಿ ಬಸವಣ್ಣನವರು ಅನುಭವ ಮಂಟಪದ ಮೂಲಕ ಮಹಿಳೆಯರಿಗೂ ಸಮಾನತೆ ಕಲ್ಪಿಸಿದರು. ಕಾಯಕವೆ ಕೈಲಾಸ ಎನ್ನುವುದು ಬಸವಣ್ಣನವರ ಧ್ಯೇಯವಾಗಿತ್ತು. ಅಂತಹ ಮಹಾನ್ ಪುರುಷನ ಆದರ್ಶ ತತ್ವಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕಿದೆ ಎಂದರು.

ಗೌರವಾಧ್ಯಕ್ಷ ಅಶೋಕ್, ಉಪಾಧ್ಯಕ್ಷ ಗಿರೀಶ್, ಕೆ.ಡಿ.ಪಿ.ಸದಸ್ಯ ನಾಗರಾಜ್, ಗಾರೆಹಟ್ಟಿ ವಿಜಯಕುಮಾರ್, ಕಾರ್ತಿಕ್, ರುದ್ರೇಶ್, ಮಂಜುನಾಥ್, ಶಿವಕುಮಾರ್, ಹನೀಸ್,
ಅಜೀಮ್ ಇವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

