Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಭೂಮಿಗೆ ಭಾರವಾಗಿ ಬದುಕುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ : ಕಾಂಗ್ರೆಸ್ ವ್ಯಂಗ್ಯ

---Advertisement---

ಸಿಎಂ ಸಿದ್ದರಾಮಯ್ಯ ಅವರು ತನ್ವೀರ್ ಹಶ್ಮೀ ಜೊತೆಗೆ ವೇದಿಕೆ ಹಂಚಿಕೊಂಡಿದ್ದಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗರಂ ಆಗಿದ್ದರು. ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿದ್ದರು. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ತಿರುಗೇಟು ನೀಡಿದೆ.

“ಆಚಾರವಿಲ್ಲದ ನಾಲಿಗೆ ನಿನ್ನ, ನೀಚ ಬುದ್ಧಿಯ ಬಿಡು ನಾಲಿಗೆ,
ವಿಚಾರವಿಲ್ಲದೆ ಪರರ ದುಶಿಸುವುದಕ್ಕೆ, ಚಾಚಿ ಕೊಂಡಿರುವಂತ ನಾಲಿಗೆ“ ದಾಸರ ಈ ಸಾಲುಗಳು ಬಿಜೆಪಿಯಲ್ಲಿ ಮನ್ನಣೆ ಸಿಗದೆ ಮತಿಭ್ರಮಣೆಗೊಂಡವರಂತೆ ವರ್ತಿಸುತ್ತಾ, ಭೂಮಿಗೆ ಭಾರವಾಗಿ ಬದುಕುತ್ತಿರುವ @BasanagoudaBJP ಅವರಿಗೆ ಅರ್ಪಣೆ.

ಮುಸ್ಲಿಂ ಧರ್ಮಗುರು ಸೈಯ್ಯದ್ ತನ್ವೀರ್ ಹಾಶ್ಮಿಯವರಿಗೆ ಐಸಿಸ್ ನಂಟಿದೆ ಎಂದು ಹುರುಳಿಲ್ಲದ ಆರೋಪ ಮಾಡಿದ ಅತೃಪ್ತ ಆತ್ಮ ದಂತಿರುವ ಯತ್ನಾಳ್ ಹಾಗೂ ಬಿಜೆಪಿ ಹಾಶ್ಮಿಯವರ ಸಾಮಾಜಿಕ ಜಾಲತಾಣಗಳಲ್ಲಿದ್ದ ಫೋಟೋಗಳನ್ನು ಎತ್ತಿ ಇತರ ಮುಸ್ಲಿಂ ಧಾರ್ಮಿಕ ನಾಯಕರನ್ನು ಐಸಿಸ್ ನವರೆಂದು ಬಿಂಬಿಸಲು ಹೊರಟಿದ್ದಾರೆ,

ಯತ್ನಾಳ್ ಅವರೇ, ಇದೇ ಹಾಶ್ಮಿಯಾವರೊಂದಿಗೆ ನಿಮ್ಮ ಹೊಸ ಬ್ರದರ್ ಕೂಡ ಜಾತ್ಯತೀತತೆಯ ಪೋಷಕು ತೊಟ್ಟಿದ್ದಾಗ ಫೋಟೋ ತೆಗೆದುಕೊಂಡಿದ್ದಾರೆ, ಈಗ ಕುಮಾರಸ್ವಾಮಿಯವರಿಗೂ ಐಸಿಸ್ ಪಟ್ಟ ಕಟ್ಟುತ್ತೀರಾ?

ಮತಿಭ್ರಮಣೆಯಾದವರ ಮಾತುಗಳನ್ನು ಕೇಳಿಕೊಂಡು ತನಿಖೆ ಮಾಡಿಸಿ ಸರ್ಕಾರದ ಸಂಪನ್ಮೂಲ, ಅಧಿಕಾರಿಗಳ ಸಮಯವನ್ನು ವ್ಯರ್ಥ ಮಾಡಲಾದೀತೆ!? ಮುಂದೆ ನಮ್ಮ ಮನೆಯ ಬಿಳಿ ನಾಯಿ ಕಪ್ಪು ಮರಿ ಹಾಕಿದೆ ತನಿಖೆ ಮಾಡಿಸಿ ಎನ್ನುವಿರಿ, ಮಾಡಿಸಲು ಸಾಧ್ಯವೇ! ಮತಿಭ್ರಮಣೆಯಾಗಿರುವ @BasanagoudaBJP ಹಾಗೂ ಬಿಜೆಪಿ ನಾಯಕರ ಗಮನಕ್ಕೆ..

ಬಿಜೆಪಿ ಐಸಿಸ್ ನಂಟು ಕಲ್ಪಿಸಿದ ಮುಸ್ಲಿಂ ಧಾರ್ಮಿಕ ಗುರುಗಳು ಕೇಂದ್ರ ಸಚಿವ @nitin_gadkari ಅವರೊಂದಿಗೂ ಕಾಣಿಸಿಕೊಂಡಿದ್ದಾರೆ, ಈಗ ನಿತಿನ್ ಗಡ್ಕರಿಯವರನ್ನೂ ತನಿಖೆಗೆ ಒಳಪಡಿಸಲು ಬಿಜೆಪಿಗರು ಆಗ್ರಹಿಸುತ್ತಾರಾ? ಸುಳ್ಳು ಆರೋಪ ಮಾಡುವ ಯತ್ನಾಳ್ ಈಗ ಯಾವ ರೀತಿ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಾರೆ? ಎಂದು ಟ್ವೀಟ್ ಮಾಡಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment