Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅವ್ಯವಸ್ಥೆಯ ಜಾಗದಲ್ಲಿ ನಿರ್ಮಾಣಗೊಂಡ ಬಾದನಹಟ್ಟಿ ಪ್ರೌಢ ಶಾಲೆ :‌ ಸಮಸ್ಯೆಗಳ ಸುಳಿಯಲ್ಲಿ ವಿದ್ಯಾರ್ಥಿಗಳು

Facebook
Twitter
Telegram
WhatsApp

ಕುರುಗೋಡು. (ಜು.30)

ವರದಿ : ಮಮತಾ, ಕೆ

ಸರಕಾರ ಯಾವುದೇ ಯೋಜನೆ ಜಾರಿಗೆ ತರಲು ನೂರು ಸಲ ಯೋಚಿಸಿ ಮತ್ತು ಅದರಲ್ಲಿ ಆ ಯೋಜನೆ ಜನರಿಗೆ ಉಪಯೋಗವಾಗುವಂತಿದ್ದಾರೆ ಮಾತ್ರ ಜಾರಿಗೆ ತರುವುದು ಕಡ್ಡಾಯ, ಆದರೆ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿ ಸಮಸ್ಯೆ ಕಂಡುಬಂದಲ್ಲಿ ಸರಕಾರ ಹಾಗೂ ಅಧಿಕಾರಿಗಳು ಕೂಡಲೇ ಅದಕ್ಕೆ ಪರಿಹಾರ ದೊರಕಿಸಿ ಸೂಕ್ತವಾದ ವ್ಯವಸ್ಥೆ ಕಂಡುಕೊಡುವುದು ಅತ್ಯಗತ್ಯ ವಾಗಿದೆ.

ಆದರೆ ಪಟ್ಟಣ ಸಮೀಪದ ಬಾದನಹಟ್ಟಿ ಗ್ರಾಮದಲ್ಲಿ 2021-22 ನೇ ಸಾಲಿನಲ್ಲಿ ಅಂದಾಜು 1 ಕೋಟಿ 25 ಲಕ್ಷ ವೆಚ್ಚದಲ್ಲಿ 10 ಕೊಠಡಿವುಳ್ಳ ನೂತನ ಸರಕಾರಿ ಪ್ರೌಢ ಶಾಲೆ ನಿರ್ಮಾಣಗೊಂಡಿದೆ,ಇದರಲ್ಲಿ ಸುಮಾರು 9 ರಿಂದ 10 ನೇ ತರಗತಿಯ 250 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡಿಯುತ್ತಿದ್ದಾರೆ. ಶಾಲೆಯು ಗುಡ್ಡ ಗಾಡು ಪ್ರದೇಶದ ಮದ್ಯದಲ್ಲಿ ನಿರ್ಮಾಣಗೊಂಡಿದ್ದರಿಂದ ಇದಕ್ಕೆ ರಸ್ತೆ, ತಡೆಗೋಡೆ ಕುಡಿಯುವ ನೀರು, ಸೌಚಾಲಯ ಸೇರಿದಂತೆ ಅನೇಕ ಮೂಲಭೂತ ಸೌಕರ್ಯ ಗಳು ಇಲ್ಲದೆ ನಿತ್ಯ ವಿದ್ಯಾರ್ಥಿಗಳು ಪರಿತಪಿಸುತ್ತಿದ್ದಾರೆ.

9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳಿಗೆ ಸುಮಾರು ವರ್ಷ ಸ್ವಂತ ಕಟ್ಟಡ ವಿಲ್ಲದೆ ಗ್ರಾಮದ ವದ್ದಟ್ಟಿ ರಸ್ತೆಯಲ್ಲಿ ಇರುವ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದಲ್ಲೇ ವಿದ್ಯಾಭ್ಯಾಸ ಪಡಿಯುವ ಪರಿಸ್ಥಿತಿ ಬಂದೋಗಿತ್ತು  ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕಟ್ಟಡಗಳ ಸಮಸ್ಯೆ ಇರುವುದರಿಂದ ನೂತನ ಪ್ರೌಢ ಶಾಲೆಯ ಕಟ್ಟಡಗಳಿಗೆ ಪ್ರೌಢ ಶಾಲೆ ವಿದ್ಯಾರ್ಥಿಗಳು ಸ್ಥಾಳಂತರಗೊಂಡಿದ್ದಾರೆ.

ದೇವರು ವರ ಕೊಟ್ರು ಪೂಜಾರಿ ವರ ಕೊಡಲಿಲ್ಲ ಎಂಬಂತೆ ಬೇಕಾ ಬಿಟ್ಟಿಯಾಗಿ ಸರಿಯಾದ ಜಾಗದಲ್ಲಿ ನಿರ್ಮಾಣ ಮಾಡದೆ ಅನೇಕ ಮೂಲ ಸೌಲಭ್ಯ ಗಳಿಂದ ವಂಚಿತಗೊಂಡಿದೆ. ಇದರಿಂದ ನಿತ್ಯ ಶಿಕ್ಷಣ ಪಡಿಯುವುದಕ್ಕೆ ತೊಂದರೆ ಆಗುತ್ತಿದ್ದು, ಮೂಲ ವ್ಯವಸ್ಥೆ ಸಿಗದ ಕಾರಣ ವಿದ್ಯಾರ್ಥಿಗಳು ಜನಪ್ರತಿನಿದಿಗಳಿಗೆ ಹಾಗೂ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ

ಪ್ರತಿಭಟನೆ ಮಾಡಿದರು ಪ್ರಯೋಜನೆ ಆಗದೆ ಭರವಸೆ ಯಲ್ಲೇ ಕೈತೋಳೆದುಕೊಂಡಿದ್ದಾರೆ.

ರಸ್ತೆ ಸಂಪರ್ಕ ಇಲ್ಲ :

ನೂತನ ಪ್ರೌಢ ಶಾಲೆಯನ್ನು ಗ್ರಾಮದ ಹೊರವಲಯದ ಗುಡ್ಡದಲ್ಲಿ ತರತೂರಿಯಲ್ಲಿ ನಿರ್ಮಾಣಗೊಳಿಸಿದ್ದು, ವಿದ್ಯಾರ್ಥಿಗಳಿಗೆ ಅನಾನುಕೂಲತೆ ಎದುರಾಗಿದೆ. ನಿತ್ಯ ತರಗತಿ ಪಡಿಯಲು ಬರುವ ವಿದ್ಯಾರ್ಥಿಗಳಿಗೆ ಸೂಕ್ತವಾದ ರಸ್ತೆ ಸಂಪರ್ಕ ಕಲ್ಪಿಸಿಲ್ಲ ಇದರಿಂದ ಗುಡ್ಡದ ಜಂಗಲ್ ಕಟಿಂಗ್ ಗಳಲ್ಲಿ ಹಾಗೂ ನಿತ್ಯ ಮೂತ್ರ ವಿಸರ್ಜನೆ ಮಾಡುವ ಜಾಗದ ಮುಖಂತರ ನಡೆದುಕೊಂಡು ಬಂದು ತರಗತಿ ಪಡಿಯಬೇಕಾಗಿದೆ. ಪರಿಣಾಮ ನಿತ್ಯ ನೂರಾರು ಸಮಸ್ಯೆಗಳನ್ನು ಎದುರಿಸುತ್ತಾ ಶಾಲೆಗೆ ಬರಬೇಕಾದ ಅನಿವಾರ್ಯತೆ ಉಂಟಾಗಿದೆ.

ತಡೆ ಗೋಡೆ ಮರೀಚಿಕೆ :

ನೂತನ ಪ್ರೌಢ ಶಾಲೆಗೆ ತಡೆ ಗೋಡೆ ಮರೀಚಿಕೆಯಾಗಿದೆ. ಗುಡ್ಡ ಗಾಡಿನಲ್ಲಿ ನಿರ್ಮಾಣಗೊಂಡಿದ್ದರಿಂದ ಕಟ್ಟಡಗಳಲ್ಲಿ ಬೋಧನೆ ಪಡಿಯುವ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ರಕ್ಷಣೆ ಇಲ್ಲದಂತಾಗಿದೆ. ವಿದ್ಯಾರ್ಥಿಗಳು ಬೆಳಿಗ್ಗೆ ಪ್ರಯರ್  ಮಾಡುವಾಗ ಹಾಗೂ ಮದ್ಯಾಹ್ನ ಹೊರಗಡೆ ಬಂದಂತಹ ಸಂದರ್ಭದಲ್ಲಿ ವಿಷ ಜಂತುಗಳು ಮತ್ತು ಪ್ರಾಣಿಗಳು ಸೇರಿದಂತೆ ಇತರೆ ಗಳಿಂದ ಭಯ ವಾತಾವರಣದಲ್ಲಿ ಆಟ ಪಾಠ ಗಳು ಕೇಳಬೇಕಾಗಿದೆ. ಇನ್ನೂ ಶಾಲೆ ಕಡೆಗೆ ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಯುವಕರು, ವೃದ್ಧರು ಸೇರಿದಂತೆ ಇತರರು ಮೂತ್ರ ವಿಸರ್ಜನೆ ಮಾಡುವುದಕ್ಕೆ ಬರುತ್ತಾರೆ ಅಲ್ಲದೆ ಅಂದರ್ ಬಹರ್ ಆಡುವುದಕ್ಕೂ ಇಚಕಡೆ ಆಗಮಿಸುತ್ತಾರೆ ಆದ್ದರಿಂದ ತಡೆ ಗೋಡೆ ಇಲ್ಲದ ಪರಿಣಾಮ ರಕ್ಷಣೆ ಇಲ್ಲದೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿದೆ.

ಕುಡಿಯುವ ನೀರು ಇಲ್ಲ :

ಪ್ರಾಣಿ ಪಕ್ಷಿಗಳು ಸೇರಿದಂತೆ ಪ್ರತಿಯೊಬ್ಬರಿಗೂ ಗಾಳಿ ಎಷ್ಟು ಮುಖ್ಯನೋ ಅದೇ ರೀತಿ ನೀರು ಸಮೇತ ಅಷ್ಟೇ ಮುಖ್ಯ ಆದ್ರೆ ಶಾಲೆ ಕಟ್ಟಡ ಅಷ್ಟೇ ನಿರ್ಮಿಸಿ ವಿದ್ಯಾರ್ಥಿಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ ಇದರಿಂದ ನೀರಿನ ದಾಹ ತೀರಿಸಿಕೊಳ್ಳಲು ತುಂಬಾ ಕಷ್ಟಕರ ವಾಗಿದೆ. ಗ್ರಾಮದಲ್ಲಿ ಆದ್ರೂ ಅಕ್ಕ ಪಕ್ಕದಲ್ಲಿ ನೀರು ಕುಡಿದು ದಾಹ ತೀರಿಸಿಕೊಳ್ಳುತ್ತಾರೆ ಆದ್ರೆ ಗ್ರಾಮದ ಹೊರವಲಯದಲ್ಲಿ ನಿರ್ಮಾಣಗೊಂಡಿದ್ದರಿಂದ ನಿತ್ಯ ನೀರಿಗಾಗಿ ವಿದ್ಯಾರ್ಥಿಗಳು ಪರದಾಡಬೇಕಾಗಿದೆ. ಸದ್ಯ ಹೇಗೋ ಮನೆಯಿಂದ ಬಾಟಲ್ ನಿಂದ ನೀರು ತಂದು ಸೇವಿಸುತ್ತಾರೆ ಬೇಸಿಗೆ ಗಾಲದಲ್ಲಿ ತುಂಬಾ ಕಷ್ಟ ಆಗಲಿದ್ದು, ಸಮಸ್ಯೆ ಎದುರಾಗುವ ಮುನ್ನ ಅಧಿಕಾರಿಗಳು ಎಚ್ಚತುಕೊಳ್ಳಬೇಕಾಗಿದೆ.

250 ವಿದ್ಯಾರ್ಥಿಗಳಿಗೆ ಒಂದೇ ಸೌಚಾಲಯ :

ಪ್ರೌಢ ಶಾಲೆಯ 250 ವಿದ್ಯಾರ್ಥಿಗಳಿಗೆ ಬಾಲಕರಿಗೆ ಒಂದು, ಬಾಲಕಿಯರಿಗೆ ಒಂದು  ಸೌಚಾಲಯ ಇದ್ದು, ಇದರಲ್ಲೇ ಎಲ್ಲರೂ ಮೂತ್ರ ವಿಸರ್ಜನೆ ಮಾಡಬೇಕಾಗಿದೆ ಎಲ್ಲರಿಗೂ ಸರಿಯಾದ ಸಮಯಕ್ಕೆ ಅನುಕೂಲ ಆಗದ ಕಾರಣ ಹಲವು ವಿದ್ಯಾರ್ಥಿಗಳು ಅಂಗೈಯಲ್ಲಿ ಜೀವ ಹಿಡಿದುಕೊಂಡು ಬಯಲು ಬಹಿರ್ದೆಸೆ ಯಲ್ಲಿ ಹೋಗಿ ಸೌಚ ಮಾಡಬೇಕಾಗಿದೆ.

ವಿದ್ಯುತ್ ಸಂಪರ್ಕ ಇಲ್ಲ :

ಸರಕಾರ ಯಾವುದೇ ಕಟ್ಟಡ ನಿರ್ಮಿಸಿ ಪೂರ್ಣಗೊಳ್ಳಿಸಿದ ನಂತರ ಅದಕ್ಕೆ ವಿದ್ಯುತ್ ಸಂಪರ್ಕ ಜೋಡಣೆ ಗೊಳ್ಳಿಸಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಸೇರಿದಂತೆ ತಂತ್ರಜ್ಞಾನಿಕ ವ್ಯವಸ್ಥೆ ಯನ್ನು ಕಲ್ಪಿಸುವುದು ಕಡ್ಡಾಯ ಆದ್ರೆ ಇಲ್ಲಿ ಕಟ್ಟಡ ನಿರ್ಮಾಣಗೊಂಡು ವರ್ಷ ಗತಿಸಿದ್ರು ಕಟ್ಟಡ ಗಳಲ್ಲಿ ವಿದ್ಯುತ್ ವ್ಯವಸ್ಥೆ ಇಲ್ಲದಾಗಿದೆ ಇದರಿಂದ ಉಘೇ ಉಘೇ ಯಲ್ಲಿ ವಿದ್ಯಾರ್ಥಿಗಳು ತರಗತಿಗಳನ್ನು ಕೇಳಬೇಕಾಗಿದೆ. ವೈಜ್ಞಾನಿಕ ತಂತ್ರಜ್ಞಾನ ದಲ್ಲಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಸೇರಿದಂತೆ ಇತರೆ ಗುಣ ಮಟ್ಟದ ಶಿಕ್ಷಣದ ಕಲಿಕೆ ಕೊಕ್ಕೆ ಬಿದ್ದಂತಾಗಿದೆ.

ಶಾಲೆ ಬಿಡಿಸಲು ಮುಂದಾದ ಪೋಷಕರು :

ಬಾದನಹಟ್ಟಿ ಗ್ರಾಮದ ಹೊರವಲಯದ ಗುಡ್ಡ ಗಾಡು ಪ್ರದೇಶದಲ್ಲಿ ಸೂಕ್ತವಾಗದ ಸ್ಥಳದಲ್ಲಿ ಪ್ರೌಢ ಶಾಲೆಯ ಕಟ್ಟಡ ನಿರ್ಮಿಸಿದ್ದು, ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಮತ್ತು ಸಂಜೆ ಹೋಗುವುದಕ್ಕೆ ಹಾಗೂ ಬರುವುದಕ್ಕೆ ರಕ್ಷಣೆ ಇಲ್ಲದ ಪರಿಣಾಮ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೇಟು ಹಾಕುತಿದ್ದಾರೆ ಅಲ್ಲದೆ ಇನ್ನೂ ಕೆಲ ಪೋಷಕರು ಮಕ್ಕಳ ಟಿಸಿ ಕಿತ್ತಿಕೊಂಡು ಬೇರೆ ಕಡೆ ನೋಂದಾಯಿಸಲು ಮುಂದಾಗಿರುವುದು ವಿಪರ್ಯಾಸ ವಾಗಿದೆ.

ಶಾಲೆಯ ಜನ ಪ್ರತಿನಿದಿಗಳ ಪಟ್ಟಿಯಲ್ಲಿ ದಾನಿಗಳ ಹೆಸರು ಮರೀಚಿಕೆ ಗೊಂದಲ :

ಗ್ರಾಮದಲ್ಲಿ ಪ್ರೌಢ ಶಾಲೆ ನಿರ್ಮಿಸುವುದಕ್ಕೆ ಸ್ಥಳದ ಕೊರತೆ ಎದುರಾಗಿದ್ದು, ಹಿರಿಯ ಪ್ರಾಥಮಿಕ ಶಾಲೆಯ ಹಿಕ್ಕಟ್ಟಿನ ಜಾಗದಲ್ಲಿ ವಿದ್ಯಾರ್ಥಿಗಳು ಆಟ ಪಾಠ ಕೇಳಬೇಕಾಗಿತ್ತು, ಇದರ ಪರಿಸ್ಥಿತಿ ಗಮನಿಸಿ ಗ್ರಾಮದ ವ್ಯಕ್ತಿಯೊರ್ವ ಪ್ರೌಢ ಶಾಲೆ ಕಟ್ಟಡ ನಿರ್ಮಿಸಲು ಜಾಗವನ್ನು ದಾನಿಯಾಗಿ ನೀಡಿದ್ದು, ಜನ ಪ್ರತಿನಿದಿಗಳ ಹಾಗೂ ಮುಖಂಡರ ಪಟ್ಟಿಯಲ್ಲಿ ಸ್ಥಳ ದಾನಿಗಳ ಹೆಸರು ಕೈ ಬಿಟ್ಟಿರುವುದರಿಂದ ಗ್ರಾಮದ ಕೆಲ ಮುಖಂಡರಲ್ಲಿ ಗೊಂದಲ ಸೃಷ್ಟಿಯಾಗಿದ್ದು, ಅಧಿಕಾರಿಗಳ ಹಾಗೂ ಜನ ಪ್ರತಿನಿಧಿಗಳ ಮೇಲೆ ಬೇಸಾರ ವ್ಯಕ್ತಪಡಿಸುತ್ತಿದ್ದಾರೆ.

ಹೇಳಿಕೆ :

ಪ್ರೌಢ ಶಾಲೆಯ ಕಟ್ಟಡವನ್ನು ಅಂತಹ ಸ್ಥಳದಲ್ಲಿ ನಿರ್ಮಿಸಿರುವುದೇ ಬಹಳ ಅಪರಾಧ, ಶಾಲೆಗೆ ಬೇಕಿರುವ ಎಲ್ಲ ರೀತಿಯ ಸಲಕರಣೆಗಳು ಅಲ್ಲಿ ಇಲ್ಲ. ಹೆಸರಿಗೆ ಮಾತ್ರ ಶಾಲೆಯಾಗಿದೆ. ತುಂಬಾ ಅವ್ಯವಸ್ಥೆ ಯಿಂದ ಕೂಡಿರುವ ಜಾಗದಲ್ಲಿ ಕಟ್ಟಡ ನಿರ್ಮಿಸಿದ್ದಾರೆ. ಆಚಕಡೆ ಜನ ಮೂತ್ರ ವಿಸರ್ಜನೆ ಮಾಡುವುದಕ್ಕೆ, ಅಂದರ್ ಬಹರ್, ಜೂಜಾಟ ಸೇರಿದಂತೆ ಅನೇಕರು ಆಕಡೆ ಹೋಗುತ್ತಿದ್ದೂ, ವಿದ್ಯಾರ್ಥಿಗಳಿಗೆ ತುಂಬಾ ತೊಂದ್ರೆ ಆಗುತ್ತಿದೆ ಅಲ್ಲದೆ ರಸ್ತೆ, ಕುಡಿಯುವ ನೀರು ಸೇರಿದಂತೆ ಅನೇಕ ಸಮಸ್ಯೆ ಗಳನ್ನು ಶೀಘ್ರದಲ್ಲಿ ಬಗೆಹರಿಸಬೇಕು ಎಂದು ವಿ. ಎಸ್. ಶಿವಸಂಕರ್, (ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾಧ್ಯಕ್ಷರು) ಹೇಳಿದರು.

 

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಆಗುತ್ತೆ ಎಂಬ ನಿಟ್ಟಿನಲ್ಲಿ ಸುಮಾರು 2.50 ಎಕರೆ ಯನ್ನು ದಾನ ಮಾಡಿದ್ದೇವೆ, ಕಟ್ಟಡ ನಿರ್ಮಾಣವಾದಂತೆ ಎಲ್ಲರನ್ನು ನಿರ್ಲಕ್ಷ ಮಾಡಿದ್ದಾರೆ. ಜೊತೆಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಕೈಗೊಂಡಿಲ್ಲ, ಇನ್ನೂ ಜನ ಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಪಟ್ಟಿಯಲ್ಲಿ ಸ್ಥಳ ದಾನಿಗಳ ಹೆಸರು ಕೈ ಬಿಟ್ಟಿರುವುದು ಬಹಳ ಬೇಸಾರ.

* ಪುರಗೈ ದೊಡ್ಡಬಸಪ್ಪಯ್ಯ, ಪ್ರೌಢ ಶಾಲೆಯ ಸ್ಥಳ ದಾನಿ, ಬಾದನಹಟ್ಟಿ

ಶಾಲೆಗೆ ಹೋಗಬೇಕಾದರೆ ಹುಸಿರು ಬಿಗಿ ಹಿಡಿದುಕೊಂಡು ಹೋಗಬೇಕಾಗಿದೆ. ರಸ್ತೆ ಸಂಪರ್ಕ ಇಲ್ಲದ ಕಾರಣ ಅನೇಕ ಸಮಸ್ಯೆಗಳನ್ನು ಅನುಭವಿಸಬೇಕಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕೆ ರಸ್ತೆ, ಕುಡಿವ ನೀರು ಸೇರಿದಂತೆ ಅನೇಕ ಸೌಲಭ್ಯ ಗಳನ್ನು ಶೀಘ್ರ ಬಗೆ ಹರಿಸಬೇಕಾಗಿದೆ.

* ನಿರ್ಮಲಾ, ಮುಖ್ಯಗುರುಗಳು ಪ್ರೌಢ ಶಾಲೆ ಬಾದನಹಟ್ಟಿ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕೋಟಿ ಕೋಟಿ ಆಸ್ತಿಯ ಒಡೆಯ ದಿಂಗಾಲೇಶ್ವರ ಸ್ವಾಮೀಜಿ : ಚಿನ್ನ, ಬೆಳ್ಳಿ ಸೇರಿ ಏನೆಲ್ಲಾ ಇದೆ‌ ಗೊತ್ತಾ..?

ಹುಬ್ಬಳ್ಳಿ: ಪ್ರಹ್ಲಾದ್ ಜೋಶಿ ಸ್ಪರ್ಧೆಗೆ ವಿರೋಧಿಸಿ, ಬಿಜೆಪಿ ಅಭ್ಯರ್ಥಿ ಪರ ಸ್ಪರ್ಧೆಗೆ ನಿಂತಿರುವ ದಿಂಗಾಲೇಶ್ವರ ಸ್ವಾಮೀಜಿ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ತಮ್ಮ ಬಳಿ ಇರುವ ಚರಾಸ್ಥಿ-ಸ್ಥಿರಾಸ್ತಿ ಸೇರಿದಂತೆ ಎಲ್ಲಾ ವಿವರವನ್ನು

ಪ್ರೀತಿ ನಿರಾಕರಿಸಿದ್ದಕ್ಕೆ ಕಾರ್ಪೋರೇಟರ್ ಪುತ್ರಿಯನ್ನೇ ಚಾಕುವಿನಿಂದ ಇರಿದು ಕೊಲೆ : ಬೆಚ್ಚಿ ಬಿದ್ದ ಹುಬ್ಬಳ್ಳಿ-ಧಾರವಾಡ ಮಂದಿ

ಹುಬ್ಬಳ್ಳಿ: ಪ್ರೀತಿ ಮಾಡಲು ನಿರಾಕರಿಸಿದ್ದಕ್ಕೆ ಕಾರ್ಪೋರೇಟರ್ ಮಗಳನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿ ನಗರದಲ್ಲಿ ನಡೆದಿದೆ. ನೇಹಾ ಬರ್ಬರವಾಗಿ ಕೊಲೆಯಾದ ಯುವತಿ. ಫಯಾಜ್ ಕೊಲೆ ಮಾಡಿದಾತ. ನೇಹಾ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ

ಎಳಸು, ರಾಜಕೀಯ ಜ್ಞಾನ ಇರದವನು : ವಿಜಯೇಂದ್ರ ಮೇಲೆ ಈಶ್ವರಪ್ಪ ಮಾತಿನ ಪ್ರಹಾರ

ಉಡುಪಿ: ಹಾವೇರಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಈಶ್ವರಪ್ಪ ಅವರಿಗೆ ಬಿಜೆಪಿ ನಿರಾಸೆ ಮಾಡಿದಾಗಿನಿಂದ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಮಕ್ಕಳ ಮೇಲೆ ಹರಿಹಾಯುತ್ತಲೇ ಇದ್ದಾರೆ. ಬಿಜೆಪಿ ನಾಯಕರ ಮಾತನ್ನು ಮೀರಿ, ಸದ್ಯ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ

error: Content is protected !!