ಚಿತ್ರದುರ್ಗ: ಉಳುಮೆ ಪ್ರತಿಷ್ಠಾನದ ವತಿಯಿಂದ ಮೇ.15 ರಂದು ಬೆಳಿಗ್ಗೆ 10-30 ರಿಂದ ಮಧ್ಯಾಹ್ನ 1-30 ರವರೆಗೆ ಜಾಗತಿಕ ತಾಪಮಾನ ಮತ್ತು ಕೃಷಿ ವಿಚಾರಕ್ಕೆ ಸಂಬಂಧಿಸಿದಂತೆ ಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
ಮಣ್ಣು, ನೀರು, ಗಾಳಿ, ಆಹಾರ ಎಲ್ಲವೂ ಕಲುಷಿತಗೊಂಡಿರುವುದರಿಂದ ಭೂಮಿಯ ಮೇಲೆ ವಾಸಿಸುತ್ತಿರುವ ಸಕಲ ಜೀವರಾಶಿಗಳ ಮೇಲೆ ದುಷ್ಪರಿಣಾಮ ಬೀರಿದೆ ಹಾಗಾಗಿ ಜಾಗತಿಕ ತಾಪಮಾನ ಮತ್ತು ಕೃಷಿಗೆ ಸಂಬಂಧಿಸಿದಂತೆ ನಾಗೇಶ್‍ಹೆಗಡೆ, ಗಾಣಧಾಳು ಶ್ರೀಕಂಠ, ಗುರುರಾಜ್ ಎಸ್.ದಾವಣಗೆರೆ, ಬಸ್ತಿಹಳ್ಳಿ ಜಿ.ಸುರೇಶ್‍ಬಾಬು, ಅವಿನಾಶ್ ಟಿ.ಜಿ.ಎಸ್. ಇವರುಗಳು ಮಾತನಾಡಲಿದ್ದಾರೆ.
ಸಾರ್ವಜನಿಕರು ಹಾಗೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಉಳುಮೆ ಪ್ರತಿಷ್ಠಾನ ಮನವಿ ಮಾಡಿದೆ.