ಚಿತ್ರದುರ್ಗ | ಬಿದ್ದಿದ್ದ ಮರದ ಕೊಂಬೆ ತೆರವು : ಕಾರ್ಯಾಚರಣೆ ತಡವಾಗಿದ್ದು ಯಾಕೆ ?

1 Min Read

ಸುದ್ದಿಒನ್, ಚಿತ್ರದುರ್ಗ, ಮೇ. 10 : ಜೆ.ಸಿ.ಆರ್. ಬಡಾವಣೆಯ ನಾಲ್ಕನೇ ಕ್ರಾಸ್‍ನಲ್ಲಿ ಬುಧವಾರ ಸಂಜೆ ಸುರಿದ ಮಳೆ ಮತ್ತು ಗಾಳಿಗೆ ದೊಡ್ಡ ಮರದ ಕೊಂಬೆಯೊಂದು ಮುರಿದು ಬಿದ್ದಿತ್ತು. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿರಲಿಲ್ಲ.

 

ಇಂದು (ಶುಕ್ರವಾರ) ನಗರಸಭೆ ಸದಸ್ಯೆ ಶ್ರೀಮತಿ ಅನುರಾಧ ರವಿಕುಮಾರ್, ನಗರಸಭೆ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆಯವರು ತೆರವು ಕಾರ್ಯಾಚರಣೆ ನಡೆಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಬುಧವಾರ ರಾತ್ರಿ ಸುರಿದ ಮಳೆ ಮತ್ತು ಗಾಳುಗೆ ಇಲ್ಲಿನ ಬೃಹತ್ ಗಾತ್ರದ ಮರದ ಕೊಂಬೆಯೊಂದು ರಸ್ತೆಗೆ ಬಿದ್ದಿತ್ತು. ಅಲ್ಲಿನ ನಗರಸಭೆ ಸದಸ್ಯೆ ಅನುರಾಧ ರವಿಕುಮಾರ್ ಅವರಿಗೆ ಅಲ್ಲಿನ ನಿವಾಸಿಗಳು ಮರ ಬಿದ್ದ ವಿಚಾರವನ್ನು ತಿಳಿಸಿದ್ದರು. ಗುರುವಾರ ಬೆಳಿಗ್ಗೆಯೇ ಮರದ ಕೊಂಬೆ ತೆರವುಗೊಳಿಸುವುದಾಗಿ ಭರವಸೆ ನೀಡಿದ್ದರು.

ಆದರೆ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದಾಗ ರಸ್ತೆಗೆ ಬಿದ್ದ ಮರದ ಕೊಬೆಯಲ್ಲಿ ಜೇನು ಗೂಡು ಕಟ್ಟಿರುವುದು ತಿಳಿಯಿತು. ಅದರಲ್ಲಿ ಜೇನು ಇದ್ದ ಕಾರಣಕ್ಕೆ ತಕ್ಷಣವೇ ತೆರವು ಕಾರ್ಯಾಚರಣೆ ಮಾಡಲು ಸಾಧ್ಯವಾಗಲಿಲ್ಲ. ನಗರಸಭೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ವಿಷಯ ತಿಳಿಸಿದಾಗ ಜೇನು ಗೂಡನ್ನು ಹಗಲು ಹೊತ್ತಿನಲ್ಲಿ ತೆರವುಗೊಳಿಸಲು ಪ್ರಯತ್ನಿಸಿದರೆ ಸುತ್ತಮುತ್ತಲಿನ ನಿವಾಸಿಗಳಿಗೆ ತೊಂದರೆಯಾಗಬಹುದು ಎಂಬ ಕಾರಣಕ್ಕಾಗಿ ಅರಣ್ಯ ಇಲಾಖೆಯವರ ಮಾರ್ಗದರ್ಶನದಂತೆ ಗುರವಾರ ರಾತ್ರಿ ಹೊತ್ತಿನಲ್ಲಿ ಜೇನು ಗೂಡನ್ನು ಪರಿಣಿತರಿಂದ ತೆರವು ಗೊಳಿಸಲಾಯಿತು. ನಂತರ ಶುಕ್ರವಾರ ನಗರಸಭೆ ಮತ್ತು ಅರಣ್ಯ ಇಲಾಖೆಯವರ ಜಂಟಿ ಕಾರ್ಯಾಚರಣೆಯಲ್ಲಿ ರಸ್ತೆಗೆ ಬಿದ್ದ ಮರದ ಕೊಂಬೆಯನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು ಎಂದು 21 ನೇ ವಾರ್ಡ್ ಸದಸ್ಯೆ ಶ್ರೀಮತಿ ಅನುರಾಧ ರವಿಕುಮಾರ್ ಅವರು ಸುದ್ದಿಒನ್ ಗೆ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *