ವಿದ್ಯಾರ್ಥಿಯ ಪರಿಪೂರ್ಣತೆ ಹಾಗೂ ವಿಕಸನಕ್ಕೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು ಪೂರಕ : ಆರ್. ಪುಟ್ಟಸ್ವಾಮಿ

suddionenews
1 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 10 :  ವಿದ್ಯಾರ್ಥಿಯ ಪರಿಪೂರ್ಣತೆ ಹಾಗೂ ವಿಕಸನಕ್ಕೆ ಪಠ್ಯ ಸಹಿತ ಪಠ್ಯೇತರ ಚಟುವಟಿಕೆಗಳು ಪೂರಕವಾಗುತ್ತವೆ. ಹೀಗಾಗಿ ಪ್ರತಿ ವಿದ್ಯಾರ್ಥಿಯು ತರಗತಿಯ ಕಲಿಕೆಯ ಜೊತೆಗೆ ತನ್ನಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹಾಕಲು ಇಂತಹ ವೇದಿಕೆಗಳು ತುಂಬಾ ಸಹಕಾರಿ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಆರ್. ಪುಟ್ಟಸ್ವಾಮಿ ತಿಳಿಸಿದರು.

ನಿರ್ದೇಶಕರ ಕಚೇರಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಬೆಂಗಳೂರು, ಉಪ ನಿರ್ದೇಶಕರ ಕಚೇರಿ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಚಿತ್ರದುರ್ಗ, ಕರ್ನಾಟಕ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಹಾಗೂ ಎಸ್ ಆರ್ ಎಸ್ ಪದವಿ ಪೂರ್ವ ಕಾಲೇಜ್ ಚಿತ್ರದುರ್ಗ  ಇವರ ಸಹಯೋಗದಲ್ಲಿ  ಎಸ್ ಆರ್ ಎಸ್ ಪದವಿ ಪೂರ್ವ ಕಾಲೇಜಿನ ಅನಂತ ಕೃಷ್ಣ ವೇದಿಕೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬೆಂಗಳೂರು ವಿಭಾಗ ಮಟ್ಟದ  2023- 24ನೇ ಸಾಲಿನ ಸಾಂಸ್ಕೃತಿಕ ಸ್ಪರ್ಧೆಗಳನ್ನು  ಉದ್ಘಾಟಿಸಿ ಮಾತನಾಡಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರತಿ ವರ್ಷವೂ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಿ ಮಕ್ಕಳಲ್ಲಿ ಸ್ಪರ್ಧಾ ಮನೋಭಾವನೆಯನ್ನು ಮೂಡಿಸುವಲ್ಲಿ ಮುಂದಾಗಿದೆ. ಸೋಲು ಗೆಲುವಿಗಿಂತಲೂ ಸ್ಪರ್ಧೆಯಲ್ಲಿ ಭಾಗವಹಿಸುವುದು ವಿದ್ಯಾರ್ಥಿಗಳಿಗೆ  ಮುಖ್ಯವಾಗಬೇಕಿದೆ. ಯಾಕೆಂದರೆ ಭವಿಷ್ಯದ ಬದುಕಿನಲ್ಲಿ ಬರುವ ಕಷ್ಟ ಸುಖಗಳನ್ನು ಸಮಾನಾಗಿ ಸ್ವೀಕರಿಸುವ ಸಾಮರ್ಥ್ಯವನ್ನು ಈ ಸ್ಪರ್ಧಾ ವೇದಿಕೆಗಳು ಒದಗಿಸುತ್ತವೆ ಎಂದು ತಿಳಿಸಿದರು.

ಸಭೆಯ ಅಧ್ಯಕ್ಷತೆಯನ್ನು ಎಸ್. ಆರ್. ಎಸ್. ಸಮೂಹ ಶಿಕ್ಷಣ ಸಂಸ್ಥೆಯ ರವಿಕುಮಾರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಉಪ ನಿರ್ದೇಶಕರಾದ ಕೆ. ವೀರಭದ್ರಪ್ಪ, ಸಂಗೀತ ವಿದ್ವಾನ್ ದ್ವಾರಕೇಶ್, ನಿವೃತ್ತ  ಪ್ರಾಂಶುಪಾಲರಾದ ಜಂಬುನಾಥ್, ಪ್ರಾಚಾರ್ಯರ ಸಂಘದ ಅಧ್ಯಕ್ಷರಾದ ಎಲ್. ರಂಗಪ್ಪ, ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾದ ಬಿ.ಆರ್ ಮಲ್ಲೇಶ್ ಕಾರ್ಯದರ್ಶಿ ಕೆ. ನಾಗರಾಜ್, ಖಜಾಂಚಿಗಳಾದ  ಎಮ್. ರವೀಶ್, ಕಾರ್ಯಧ್ಯಕ್ಷರಾದ ಜಿ.ಎಸ್. ತಿಪ್ಪೇಸ್ವಾಮಿ ಉಪನ್ಯಾಸಕರ ಸಂಘದ ಕಾರ್ಯದರ್ಶಿಗಳಾದ ಎ.ಕಾಂತರಾಜ್ ಪ್ರಾಚಾರ್ಯರಾದ ಕೆ. ನಾಗಣ್ಣ, ಗಂಗಾಧರ್, ಜಬಿವುಲ್ಲಾ, ಕೆ.ಎಚ್ .ರಾಜು ಮುಂತಾದವರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *