ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್
ಸ್ಟೇಡಿಯಂನಲ್ಲಿ 2023 ರ ಏಷ್ಯಾ ಕಪ್‌ನ ಮೂರನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಪೈಪೋಟಿ ನಡೆಸುತ್ತಿವೆ.
ಪಾಕ್ ವೇಗಿಗಳ ಅಬ್ಬರದಿಂದ ಟೀಂ ಇಂಡಿಯಾದ ಮೊದಲ ಶ್ರೇಣಿಯ ಆಟಗಾರರು ವಿಫಲವಾದ ಹಿನ್ನೆಲೆ ಇಶಾನ್ ಕಿಶನ್ (82), ಹಾರ್ದಿಕ್ ಪಾಂಡ್ಯ (87) ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು. ಇಬ್ಬರೂ ಅರ್ಧಶತಕ ಸಿಡಿಸಿದ್ದರಿಂದ ಭಾರತ ತಂಡ ಉತ್ತಮ ಸ್ಕೋರ್ ಗಳಿಸಲು ಸಾಧ್ಯವಾಯಿತು. 48.5 ಓವರ್‌ಗಳಲ್ಲಿ 266 ರನ್ ಗಳಿಸಿತು.
ಪಾಕಿಸ್ತಾನದ ಬೌಲರ್‌ಗಳ ಪೈಕಿ ಶಾಹೀನ್ ಅಫ್ರಿದಿ ಅತಿ ಹೆಚ್ಚು, ನಾಲ್ಕು ವಿಕೆಟ್ ಪಡೆದರೆ, ನಸೀಮ್ ಶಾ ಮತ್ತು ಹ್ಯಾರಿಸ್ ರವೂಫ್ ತಲಾ ಮೂರು ವಿಕೆಟ್ ಪಡೆದರು. 267 ರನ್‌ಗಳ ಗುರಿಯೊಂದಿಗೆ ಪಾಕಿಸ್ತಾನ ಕಣಕ್ಕೆ ಇಳಿಯಲಿದೆ. ಸದ್ಯ ಮಳೆ ಮತ್ತೆ ಶುರುವಾಗಿದ್ದು, ಮಳೆಯು ನಿಂತ ನಂತರ ಆಟ ಮುಂದುವರೆಯಲಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















