Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿಕ್ಕೋಡಿಯ ಸ್ವಾಮೀಜಿ ಜೈಲು ಸೇರುತ್ತಿದ್ದಂತೆ ಮಠ‌ ಸಂಪೂರ್ಣ ಧ್ವಂಸ..!

---Advertisement---

ಚಿಕ್ಕೋಡಿ; ಇಂದು ಬೆಳ್ಳಂಬೆಳಗ್ಗೆಯೇ ಚಿಕ್ಕೋಡಿಯಲ್ಲಿ ಜೆಸಿಬಿ ಸದ್ದು ಮಾಡಿದ್ದು, ಮೇಖಳಿ ಮಠ ಸಂಪೂರ್ಣವಾಗಿ ಧ್ವಂಸವಾಗಿದೆ. ಈ ಮಠದ ಸ್ವಾಮೀಜಿ ಲೋಕೇಶ್ವರ ಜೈಲು ಸೇರುತ್ತಿದ್ದಂತೆ ಈ ಘಟನೆ ನಡೆದಿದೆ. ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವನ್ನು ಲೋಕೇಶ್ಚರ ಸ್ವಾಮೀಜಿ ಎದುರಿಸುತ್ತಿದ್ದಾರೆ. ಅದೇ ಆರೋಪದ ಮೇಲೆ ಈಗ ಜೈಲು ಪಾಲಾಗಿದ್ದಾರೆ. ಈ ಬೆನ್ನಲ್ಲೇ ಆತನ ಮಠವನ್ನು ಸಂಪೂರ್ಣವಾಗಿ ಧ್ವಂಸ ಮಾಡಲಾಗಿದೆ.

ಮೇಖಳಿ ಗ್ರಾಮದ ಸರ್ವೇ ನಂಬರ್ 225ರಲ್ಲಿ ಕಪಟಿ ಸ್ವಾಮೀಜಿ ಲೋಕೇಶ್ವರ ಅನಧಿಕೃತವಾಗಿ ತಮ್ಮ ಮಠವನ್ನು ಕಟ್ಟಿಕೊಂಡಿದ್ದರು. ಹೀಗಾಗಿ ಇಂದು ಮಠವನ್ನು ಸಂಪೂರ್ಣವಾಗಿ ಧ್ವಂಸ ಮಾಡಲಾಗಿದೆ. ಸರಕಾರಿ ಗಾಯರಾಣಾ ಜಮೀನಿನಲ್ಲಿ 8 ಎಕರೆ ಜಾಗವನ್ನು ಅತಿಕ್ರಮಣ ಮಾಡಿಕೊಂಡು ಎಂಟು ವರ್ಷಗಳ ಹಿಂದೆ ಮಠ ನಿರ್ಮಾಣ ಮಾಡಿಕೊಂಡಿದ್ದರು. ಇತ್ತ ದೌರ್ಜನ್ಯ ಕೇಸ್ ನಲ್ಲಿ ಸ್ವಾಮೀಜಿ ಜೈಲು ಪಾಲಾಗುತ್ತಿದ್ದಂತೆ ಬೆಳ್ಳಬೆಳಗ್ಗೆ ರಾಯಬಾಗ ತಹಶೀಲ್ದಾರ್ ನೇತೃತ್ವದಲ್ಲಿ ಮೂರು ಜೆಸಿಬಿಗಳ ಮೂಲಕ ತೆರವು ಕಾರ್ಯಾಚರಣೆ ನಡೆಸಲಾಗಿದೆ.

ಲೋಕೇಶ್ವರ ಸ್ವಾಮಿಯ ಮಠವನ್ನು ತಾಲೂಕಾಡಳಿತ ಸಂಪೂರ್ಣವಾಗಿ ಧ್ವಂಸ ಮಾಡಲಾಗಿದೆ. ರಾಯಬಾಗ ತಹಶಿಲ್ದಾರರ ಮುಂಜೆ ನೇತೃತ್ವದಲ್ಲಿ ಮಠ ನೆಲಸಮ ಮಾಡಲಾಗಿದೆ. ಇದೀಗ ಕಳ್ಳ ಸ್ವಾಮಿ ಜೈಲು ಪಾಲಾಗಿದ್ದು, ತಾಲೂಕಾಡಳಿತ ಭೇಟಿ ಕೊಟ್ಟು ಮಠವನ್ನು ಧ್ವಂಸ ಮಾಡಿದೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮೇಕಳಿ ಗ್ರಾಮದ ಮಠಾ ಸ್ವಾಮೀಜಿಯನ್ನು ಅಪ್ರಾಪ್ತ ಬಾಲಕಿಯ ಅತ್ಯಾಚಾರದ ಆರೋಪದ ಮೇಲೆ ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಅಪ್ಪ ಮಗಳು ಇಬ್ಬರು ಈ ಮಠಕ್ಕೆ ಆಗಾಗ ಭೇಟಿ ನೀಡುತ್ತಾ ಇದ್ದರು ಎನ್ನಲಾಗ್ತಾಇದೆ. ಪರಿಚಯ ಆದ ಬಳಿಕ ಸ್ವಾಮೀಜಿ ಆಪ್ರಾಪ್ತೆಯನ್ನು ರಾಯಚೂರಿನ ಲಾಡ್ಜ್​ಗೆ ಕರೆದೊಯ್ದು 2 ದಿನಗಳ ಕಾಲ ಅತ್ಯಾಚಾರವೆಸಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment