Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಏರುತ್ತಲೇ ಇದೆ ಅಡಿಕೆಧಾರಣೆ : ಇಂದಿನ ದರಪಟ್ಟಿ ಎಷ್ಟಿದೆ..?

---Advertisement---

ರಾಜ್ಯದ ಅಡಿಕೆ ಬೆಳೆಗಾರರು ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ದಿನೇ ದಿನೇ ಅಡಿಕೆಯ ಬೆಲೆ ಏರಿಕೆಯಾಗುತ್ತಲೆ ಇದೆ. ಮುಂದೆ ಸುಮಾರು 65 ಸಾವಿರಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಇದು ಬೆಳೆಗಾರರಿಗೆ ಹೆಚ್ಚು ಸಂತಸವಾಗಿದೆ. ಸದ್ಯ ಅಡಿಕೆಧಾರಣೆ ಇಂದು ಎಷ್ಟಿದೆ ಎಂಬುದನ್ನು ನೋಡೋಣಾ.

ಇಳಿಕೆಯತ್ತ ಸಾಗಿದ್ದ ಅಡಿಕೆ ದರ ಕಳೆದ ಕೆಲವು ದಿನಗಳಿಂದ ಏರಿಕೆಯತ್ತ ಮುಖ ಮಾಡಿದೆ. ಇಂದಿನ ಮಾರುಕಟ್ಟೆಯಲ್ಲಿ 57,500 ರೂಪಾಯಿಗೆ ಕ್ವಿಂಟಾಲ್ ಅಡಿಕೆ ಮಾರಾಟವಾಗಿದೆ. ಚನ್ನಗಿರಿ ರಾಶಿ ಅಡಿಕೆ ಧಾರಣೆ (ಕ್ವಿಂಟಾಲ್‌ಗಳಲ್ಲಿ) ಗರಿಷ್ಠ ದರ 57,500 ರೂಪಾಯಿ, ಕನಿಷ್ಠ ದರ 53,679 ರೂಪಾಯಿ ಇದ್ದು, ಸರಾಸರಿ ಬೆಲೆ 56,368 ರೂಪಾಯಿ ಇದೆ. ಕಳೆದ ಕೆಲ ದಿನಗಳ ಹಿಂದೆ 55,000 ರೂಪಾಯಿಗಿಂತ ಕೆಳಗಿಳಿದಿತ್ತು.

 

ಇಂದಿನ ಮಾರುಕಟ್ಟೆಯ ಬೆಲೆಯನ್ನು ಕಂಡು ಬೆಳೆಗಾರರು ಖುಷಿಯಾಗಿದ್ದಾರೆ. ಚನ್ನಗಿರಿ, ದಾವಣಗೆರೆ, ಹೊನ್ನಾಳಿ ಭಾಗದಲ್ಲಿ ಅಡಿಕೆ ಬೆಳೆಯುವವರು ಹೆಚ್ಚಾಗಿದ್ದಾರೆ. ಶಿವಮೊಗ್ಗದಲ್ಲಿ ಬೆಟ್ಟೆ ಅಡಿಕೆ 50,109 ರೂಪಾಯಿ ಇದೆ. ರಾಶಿ ಅಡಿಕೆ ₹45,009 ಇದೆ. ಗೊರಬಲು ₹17,890 ಇದೆ. ಹಾಗೇ ಸಾಗರದ ರಾಶಿ ಅಡಿಕೆಗೆ ₹48,959 ಇದ್ದರೆ, ಚಾಲಿ ₹34,369 ಇದೆ. ಸಿಪ್ಪೆಗೋಟು ₹16,899, ಬಿಳೆಗೋಟು ಅಡಿಕೆ ₹27,299.‌ ಇನ್ನು ಇವತ್ತಿನ ಕೊಬ್ಬರಿ ಬೆಲೆಯನ್ನು ನೋಡುವಿದಾದರೆ ದಾವಣಗೆರೆಯಲ್ಲಿ ₹18,500 ರೂಪಾಯಿ ಆಗಿದೆ. ಮೊದಲೆ ಅಡಿಕೆ ಹಾಗೂ ತೆಂಗಿನ ಬೆಳೆಯನ್ನು ಕಾಪಾಡಿಕೊಳ್ಳುವುದೇ ರೈತರಿಗೆ ದೊಡ್ಡ ಸಮಸ್ಯೆ. ರೋಗಗಳಿಂದೆಲ್ಲಾ ಅವುಗಳನ್ನು ಕಾಪಾಡಿಕೊಂಡು, ಫಸಲು ಉತ್ತಮವಾಗಿ ಬರುವಂತೆ ನೋಡಿಕೊಳ್ಳಬೇಕಿರುತ್ತದೆ. ಆ ಎಲ್ಲಾ ಸವಾಲನ್ನು ಗೆದ್ದು ಉತ್ತಮ ಬೆಳೆ ಬಂದಾಗ ಉತ್ತಮ ಬೆಲೆ ಬರದೆ ಹೋದಾಗ ರೈತರಿಗೆ ಎಷ್ಟು ನೋವಾಗಬೇಡ. ಆದರೆ ಈ ಬಾರಿ ಖುಷಿಯಾಗಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment