Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಿಮಗೆ ತಲೆಹೊಟ್ಟಿನ ಸಮಸ್ಯೆ ಕಾಡುತ್ತಿದೆಯಾ..?

---Advertisement---

ಸುದ್ದಿಒನ್ : ತಲೆ ಕೂದಲಿನ ವಿಚಾರದಲ್ಲಿ ಹಲವರಿಗೆ ಹಲವು ಸಮಸ್ಯೆಗಳು ಕಾಡುತ್ತವೆ. ಹಲವರಲ್ಲಿ ತಲೆ ಕೂದಲು ಉದುರುವ ಸಮಸ್ಯೆ ಇದ್ದರೆ ಇನ್ನು ಹಲವರಿಗೆ ಹೊಟ್ಟಿನ ಸಮಸ್ಯೆ. ಏನೆ ಹಾಕಿದರು ಈ ಹೊಟ್ಟು ನಿವಾರಣೆಯಾಗುವುದೇ ಇಲ್ಲ. ಅದಕ್ಕಾಗಿ ಸಾಕಷ್ಟು ಪ್ರಯೋಗ ಮಾಡಿ ಸುಮ್ಮನಾಗಿ ಬಿಡುತ್ತಾರೆ.

ಅದರಲ್ಲೂ ತಲೆಯಲ್ಲಿ ಹೊಟ್ಟು ಇದ್ದರೆ ಅದು ಕಿರಿಕಿರಿಯನ್ನು ಮಾಡುತ್ತಾ ಇರುತ್ತದೆ. ಯಾವಾಗಲೂ ಬಟ್ಟೆಯ ಮೇಲೆ ಬೀಳುವುದು, ಜೊತೆಗಿದ್ದವರಿಗೆ ಅಸಹ್ಯವನ್ನು ತಂದೊಡ್ಡುತ್ತದೆ. ಹೀಗಾಗಿ ಈ dandruff ಅನ್ನು ಕಳೆಯಲು ನಾನಾ ಸಾಹಸ ಮಾಡುವುದಕ್ಕಿಂತ ಅಡುಗೆ ಮನೆಯಲ್ಲಿರುವ ಒಂದು ಪದಾರ್ಥ ಸಾಕಾಗುತ್ತದೆ. ಅದುವೆ ಹುಣಸೆ ಹಣ್ಣು. ಅದರಲ್ಲೂ ಹಳೆಯ ಹುಣಸೆ ಹಣ್ಣಾದರೆ ತುಂಬಾನೇ ಒಳ್ಳೆಯದು.

ಈ ಹುಣಸೆ ಹಣ್ಣನ್ನ ಮೊದಲೇ ನೆನೆಹಾಕಿ. ಅದು ರಸ ಬಿಟ್ಟುಕೊಂಡ ಬಳಿಕ ಕಿವುಚಿ ರಸ ತೆಗೆಯಿರಿ. ಸ್ನಾನಕ್ಕೆ ಹೋಗುವ ಒಂದು ಗಂಟೆಯ ಮೊದಲು ಆ ಹುಣೆ ಹಣ್ಣಿಗೆ ಬಿಸಿ ನೀರು ಬೆರೆಸಿ ಮಿಶ್ರಣ ಮಾಡಿಕೊಳ್ಳಿ. ಬಳಿಕ ಆ ನೀರನ್ನ ಕೂದಲಿನ ಬುಡಕ್ಕೆ ಹಚ್ಚುತ್ತಾ ಬನ್ನಿ. ಆದರೆ ಜೋರಾಗಿ ಮಸಾಜ್ ಮಾಡಬಾರದು. ನಿಧಾನಕ್ಕೆ ಆ ನೀರು ಬುಡಕ್ಕೆ ಸೇರಬೇಕು. ಆಗ ಮಾತ್ರ ಮತ್ತೆ ತಲೆಯ ಹೊಟ್ಟು ಬರದೆ ಇರುವಂತೆ ಕಾಪಾಡಿಕೊಳ್ಳಬಹುದು. ಒಂದು ಗಂಟೆ ಕಾಲ ಬಿಟ್ಟು ಸ್ನಾನ ಮಾಡಿ. ಆಮೇಲೆ ರಿಸಲ್ಟ್ ನಿಮ್ಮ ಕಣ್ಣ ಮುಂದೆಯೇ ಇರಲಿದೆ. ಇದರಿಂದ ತಲೆಯ ಹೊಟ್ಟು ಕಡಿಮೆಯಾಗುತ್ತದೆ. ಆಗಾಗ ಇದರ ಪ್ರಯೋಗ ಮಾಡುತ್ತಾ ಬನ್ನಿ. ಹಿತ್ತಲ ಹಿಡ ಮದ್ದಲ್ಲ ಎಂಬ ಮಾತನ್ನು ಅರ್ಥ ಮಾಡಿಕೊಂಡರೆ ಅಮ್ಮ ಮೆಂಟೈನ್ ಮಾಡಿದ ಅಡುಗೆ ಮನೆಯಲ್ಲಿಯೇ ಮದ್ದುಗಳು ಸಿಗುತ್ತವೆ.

(ಪ್ರಮುಖ ಸೂಚನೆ: ಆರೋಗ್ಯ ತಜ್ಞರು ಮತ್ತು ಇತರ ಅಧ್ಯಯನಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ನಾವು ಈ ವಿವರಗಳನ್ನು ಒದಗಿಸುತ್ತಿದ್ದೇವೆ. ಇದು ಕೇವಲ ಪ್ರಾಥಮಿಕ ಮಾಹಿತಿಯಾಗಿದ್ದು, ಇಲ್ಲಿ ಒದಗಿಸಲಾದ ವಿಷಯಗಳು ಕೇವಲ ತಿಳುವಳಿಕೆಗಾಗಿ ಮಾತ್ರ. ನಿಮಗೆ ಯಾವುದೇ ಅನುಮಾನಗಳು ಅಥವಾ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.)

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment