Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗದಲ್ಲಿ 26ನೇ ವರ್ಷದ ಶ್ರೀಗೌರಿ ವಿಸರ್ಜನೆ; ವಿಶೇಷ ಪೂಜೆ, ಅನ್ನಸಂತರ್ಪಣೆ

---Advertisement---

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 20 : ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ ಹೌಸಿಂಗ್ ಬೋರ್ಡ್ ಕಾಲೋನಿಯ ಕರ್ನಾಟಕ ರಾಜ್ಯದ 2ನೇ ಅತಿದೊಡ್ಡ 53 ಅಡಿ ಗಣಪತಿ ದೇವಸ್ಥಾನ ಹೊಂದಿರುವ ಸಂಕಷ್ಟಹರ ಸಿದ್ಧಿ ವಿನಾಯಕಸ್ವಾಮಿ ದೇವಸ್ಥಾನದ ಆವರಣದಲ್ಲಿ 26ನೇ ವರ್ಷದ ಶ್ರೀ ಗೌರಿ ವಿಸರ್ಜನೆ ಪ್ರಯುಕ್ತ ವಿಶೇಷ ಪೂಜೆ ಮತ್ತು ಅನ್ನ ಸಂತರ್ಪಣೆ, ಅಭಿಷೇಕ, ಅಲಂಕಾರ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಬೆನಕನ ಬಳಗದ ಅಧ್ಯಕ್ಷ ಹಾಗೂ ನಗರಸಭೆ ಮಾಜಿ ಸದಸ್ಯ ಗುರುಮೂರ್ತಿ, ಅರ್ಚಕ ಸಿದ್ಧಲಿಂಗಯ್ಯ ಹಿರೇಮಠ, ಸಿ.ಜಿ.ಶ್ರೀನಿವಾಸ, ನಾಗರಾಜ್, ಚಂದ್ರಾನಾಯಕ್, ರಂಗಕರ್ಮಿ ಕೆಪಿಎಂ ಗಣೇಶಯ್ಯ, ಡಾ.ಕೆ. ಮೋಹನ್ ಕುಮಾರ್, ಬಂಕ್ ಮ್ಯಾನೇಜರ್ ರಾಜಣ್ಣ, ಸಚಿನ್, ರಾಜೇಶ್ವರಿ, ಗೀತಮ್ಮ, ರತ್ನಮ್ಮ, ಆಶಾ ಗುರುಮೂರ್ತಿ ಮುಂತಾದ ಬೆನಕನ ಬಳಗದ ಸರ್ವ ಸದಸ್ಯರು ಹಾಗೂ ಭಕ್ತವೃಂದವರು ಹಾಜರಿದ್ದರು. ಚಂದ್ರವಳ್ಳಿಯ ನಿಗಧಿತ ಬಾವಿಯಲ್ಲಿ ಶ್ರೀಗೌರಿ ಮೂರ್ತಿಯನ್ನು ವಿಸರ್ಜಿಸಲಾಯಿತು. ನಂತರ ದೇವಿಯ ಕೊರಳ ಮುತ್ತಿನಹಾರ, ಅಲಂಕೃತ ಹೂವಿನಹಾರ, ತುಂಬು ಕಳಸದ ತೆಂಗಿನಕಾಯಿ ಮತ್ತಿತರ ಪೂಜಾ ಸಾಮಾಗ್ರಿಗಳನ್ನು ಹರಾಜು ಹಾಕಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಸಕಾಲಕ್ಕೆ ಮಳೆಬೆಳೆ ಕರುಣಿಸೆಂದು ಭಕ್ತರು ಶ್ರೀಗೌರಿಯನ್ನು ಬೇಡಿಕೊಂಡರು. ಕಾರ್ಯಕ್ರಮದ ಕೊನೆಯಲ್ಲಿ ನೆರೆದಿರುವ ಭಕ್ತಸಮೂಹ ಪ್ರಸಾದ ಸ್ವೀಕರಿಸಿ ದೇವಿಯ ಕೃಪೆಗೆ ಪಾತ್ರರಾದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now