Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ತಳಕು ಗ್ರಾಮ ಪಂಚಾಯಿತಿಗೆ ಪಿಡಿಒ ನೇಮಿಸಿ : ಗ್ರಾ. ಪಂ. ಸದಸ್ಯರ ಒತ್ತಾಯ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ನ. 20 :  ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಗ್ರಾಮ ಪಂಚಾಯಿತಿಗೆ ಶಾಶ್ವತವಾದ ಪಂಚಾಯತ್ ಅಭಿವೃದ್ದಿ ಅಧಿಕಾರಿಯನ್ನು ನೇಮಕ ಮಾಡುವಂತೆ ತಳಕು ಗ್ರಾಮ ಪಂಚಾಯಿತಿಯ ಸದಸ್ಯರು ಜಿ.ಪಂ. ಮತ್ತು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯ ಕರೀಂಸಾಬ್ ತಳಕು ಪಂಚಾಯಿತಿ ಮೊಳಕಾಲ್ಮೂರು ವಿಧಾನಸಭಾ ವ್ಯಾಪ್ತಿಗೆ ಬರುವ 4 ಹೋಬಳಿ ಮುಖ್ಯ ಕೇಂದ್ರವಾಗಿದ್ದು, 23 ಜನ ಸದಸ್ಯ ಬಲವನ್ನು ಹೊಂದಿದ್ದು, 5 ಹಳ್ಳಿಗಳಿಂದ ಕೂಡಿದ ಪಂಚಾಯಿತಿ ಆಗಿದೆ. ಹಳ್ಳಿಗೆ 4 ರಿಂದ 5 ಮುಜರೆ ಗ್ರಾಮಗಳು ಸೇರಿ 25 ಗ್ರಾಮಗಳನ್ನು ಹೊಂದಿ ಕೊಂಡಿದೆ. ಈ ಪಂಚಾಯಿತಿಯಲ್ಲಿ ಎ ಗ್ರೇಡ್ ಕಾರ್ಯದರ್ಶಿಗಳು ವಾರದಲ್ಲಿ 3 ದಿನ ಮಾತ್ರ ಕೆಲಸಕ್ಕೆ ಬರುತ್ತಾರೆ. ಇದರಿಂದಾಗಿ ಗ್ರಾಮದ ಅಭೀವೃದ್ದಿಯಾಗುತ್ತಿಲ್ಲ, 45 ಸಾವಿರ ಜನಸಂಖ್ಯೆಯನ್ನು ಹೊಂದಿರುವ ಪಂಚಾಯಿತಿಯಲ್ಲಿ ಶಶ್ವಾತವಾದ ಪಿಡಿಓ ಇಲ್ಲ ಇದರಿಂದ ತುಂಬಾ ತೊಂದರೆಯಾಗಿದೆ ಎಂದು ದೂರಿದರು.

ಪಿಡಿಓ ಇಲ್ಲದಿರುವುದರಿಂದ ನರೇಗಾ ಯೋಜನೆಯಲ್ಲಿ 15ನೇ ಹಣಕಾಸು ವರ್ಗ-1 ಹಾಗೂ ಮುಖ್ಯಮಂತ್ರಿಗಳ ಬಜೆಟ್ ಘೋಷಣೆಯ ಕ್ರೀಯಾ ಯೋಜನೆ ಮಾಡಿಲ್ಲ, ಇದ್ದಲ್ಲದೆ ಮೊಳಕಾಲ್ಮೂರು ತಾಲ್ಲೂಕು ಬರಗಾಲಕ್ಕೆ ತುತ್ತಾಗಿದ್ದು, ಎನ್.ಆರ್.ಇ.ಜಿ. ಕೆಲಸ ಕುಡಿಯುವ ನೀರು ವಿದ್ಯುತ್ ದೀಪ, ಚರಂಡಿ ಮತ್ತು ರಸ್ತೆಗಳ ಆಭಿವೃದ್ದಿ ಕುಂಠಿತವಾಗಿದೆ. ಎಂದ ಅವರು, ತಳಕು ಪಂಚಾಯಿತಿ ಮೂಲತ ಪಿಡಿಓ ಸುಮಾರು 32 ತಿಂಗಳುಗಳಿಂದ ವೇತನವನ್ನು ಮಾತ್ರ ಪಡೆಯುತ್ತಿದ್ದು ಕೆಲಸವನ್ನು ಮಾಡುತ್ತಿಲ್ಲ, ಅಲ್ಲದೆ ಅವರು ಎಲ್ಲಿ ಕೆಲಸ ಮಾಡುತ್ತಿದ್ಧಾರೂ ಸಹಾ ಗೊತ್ತಿಲ್ಲ, ಪಂಚಾಯಿತಿ ಅಸ್ಥಿತ್ವಕ್ಕೆ ಬಂದು 32 ತಿಂಗಳಾಗಿದ್ದು, ಇದುವರೆವಿಗೂ 9 ಜನ ಪಿಡಿಓಗಳು ಬಂದು ಹೋಗಿದ್ದಾರೆ.

ಇದರಿಂದಾಗಿ ಪಂಚಾಯಿತಿ ಅಭೀವೃದ್ದಿ ಕುಂಠಿತವಾಗಿದೆ, ಈ ಹಿನ್ನಲೆಯಲ್ಲಿ ತಳಕು ಪಂಚಾಯಿತಿಗೆ ಶಶ್ವಾತವಾದ ಪಿಡಿಓರನ್ನು ನೀಡುವಂತೆ ಜಿ.ಪಂ. ಸಿಇಓ ಮತ್ತು ತಾ.ಪಂ. ಇಓರವರಿಗೆ ಮನವಿ ಮಾಡಲಾಗುತ್ತಾದರೂ ಇದುವರೆವಿಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕರೀಂಸಾಬ್ ಆರೋಪಿಸಿದರು.

ಜಿ.ಪಂ. ಮತ್ತು ತಾ.ಪಂ. ತಳಕು ಪಂಚಾಯಿತಿಗೆ ಶಶ್ವಾತವಾದ ಪಿಡಿಓರವರನ್ನು ಶೀಘ್ರವಾಗಿ ನೇಮಕ ಮಾಡದಿದ್ದರೆ ಮುಂದಿನ ದಿನದಲ್ಲಿ ಜಿ.ಪಂ. ಮುಂದೆ ಗ್ರಾಮ ಪಂಚಾಯಿತಿಯ ಸದಸ್ಯರೆಲ್ಲಾ ಸೇರಿ ಅನಿರ್ಧಿಷ್ಟ ಕಾಲದವರೆಗೆ ದರಣಿಯನ್ನು ನಡೆಸಲಾಗುವುದೆಂದು ಎಚ್ಚರಿಕೆಯನ್ನು ನೀಡಿದರು.

ಗೋಷ್ಠಿಯಲ್ಲಿ  ತಳಕು ಪಂಚಾಯಿತಿ ಸದಸ್ಯರಾದ ಶ್ರೀಮತಿ ಲಕ್ಷ್ಮೀ, ಮಾರಯ್ಯ, ಶ್ರೀಮತಿ ವಾಣಿಬಾಯಿ, ಶ್ರೀಮತಿ ಭಾಗ್ಯಮ್ಮ, ಬಿ.ತಿಪ್ಪೇಸ್ವಾಮಿ, ಶಾಮತ ಕುಮಾರ್ ಭಾಗವಹಿಸಿದ್ದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment