Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರೈಲ್ವೆ ಇಲಾಖೆಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ : SSLC ಆಗಿದ್ರು ಅಪ್ಲೈ ಮಾಡಬಹುದು

---Advertisement---

ಸರ್ಕಾರಿ ಕೆಲಸಕ್ಕಾಗಿ ಸಾಕಷ್ಟು ಜನ ಕಾಯ್ತಾ ಇರ್ತಾರೆ. ಅದಕ್ಕಾಗಿ ವರ್ಷಾನುಗಟ್ಟಲೇ ತಯಾರಿ ನಡೆಸುತ್ತಾ ಇರುತ್ತಾರೆ. ಇದರ ನಡುವೆ ಎಸ್ಎಸ್ಎಲ್ಸಿ ಅಷ್ಟೇ ಓದಿರುವವರು ಇರ್ತಾರೆ. ಮುಂದಕ್ಕೆ ಓದುವುದಕ್ಕೆ ಆಗದೆ ಇದ್ದವರಿಗೂ ಇದೀಗ ರೈಲ್ವೆ ಇಲಾಖೆಯಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನ ಮಾಡಿದೆ. 6 ಸಾವಿರಕ್ಕೂ ಹೆಚ್ಚು ಉದ್ಯೋಗಗಳಿಗೆ ಅರ್ಜಿ ಆಹ್ವಾನ ಮಾಡಿದೆ. ಯಾರೆಲ್ಲಾ ಅರ್ಜಿ ಹಾಕಬಹುದು..? ಕೊನೆಯ ದಿನ ಯಾವುದಾಗಿರುತ್ತದೆ..? ಇದೆಲ್ಲಾ ಮಾಹಿತಿಯನ್ನ ಇಲ್ಲಿ ನೀಡಲಾಗಿದೆ ಓದಿ.

ಟೆಕ್ನಿಷಿಯನ್ 1, ಟೆಕ್ನಿಷಿಯನ್ 3 ಎಂಬ ಕ್ಯಾಟಗರಿಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ. ಟೆಕ್ನಿಷಿಯನ್ 1 ಕ್ಯಾಟಗರಿಯಲ್ಲಿ 183 ಹುದ್ದೆಗಳು ಹಾಗೇ ಟೆಕ್ನಿಷಿಯನ್ 3 ಕ್ಯಾಟಗರಿಯಲ್ಲಿ 6055 ಹುದ್ದೆಗಳನ್ನ ಕರೆಯಲಾಗಿದೆ. ಟೆಕ್ನಿಷಿಯನ್ 1 ಗೆ ಬಿಎಸ್ಸಿ, ಬಿಟೆಕ್, ಡಿಪ್ಲೊಮಾ, ಸಿಎಸ್ ಮಾಡಿರಬೇಕಾಗುತ್ತದೆ. ಟೆಕ್ನಿಷಿಯನ್ 3ಗೆ ಎಸ್ಎಸ್ಎಲ್ಸಿ ಹಾಗೂ ಐಟಿಐ ಮಾಡಿದವರಿಗೆ ಅವಕಾಶ ನೀಡಲಾಗಿದೆ. ಟೆಕ್ನಿಷಿಯನ್ 1 ಕ್ಯಾಟಗರಿಯಲ್ಲಿ ಹುದ್ದೆ ಪಡೆಯುವವರ ವೇತನ ಶ್ರೇಣಿ 29,200 ರೂಪಾಯಿ ಇರುತ್ತದೆ. ಟೆಕ್ನಿಷಿಯನ್ 3 ನಲ್ಲಿ ಕೆಲಸ ಪಡೆಯುವವರ ವೇತನ ಶ್ರೇಣಿ 19,900 ರೂಪಾಯಿ ಇರುತ್ತದೆ. ಹಾಗೇ ಟೆಕ್ನಿಷಿಯನ್ 1 ಅಪ್ಲೈ ಮಾಡುವವರ ವಯಸ್ಸು 18 ರಿಂದ 33 ವರ್ಷ ಕೇಳಿದ್ರೆ ಟೆಕ್ನಿಷಿಯನ್ 3ಗೆ 18 ರಿಂದ 30 ವರ್ಷ ವಯೋಮಿತಿ ನೀಡಲಾಗಿದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರಿಗೆ ಶುಲ್ಕ ಕೂಡ ಇರಲಿದೆ. ಸಾಮಾನ್ಯ ಅಭ್ಯರ್ಥಿಗಳಿಂದ 500 ರೂಪಾಯಿ ಕಟ್ಟಬೇಕಿರುತ್ತೆ, ಎಸ್ಸಿ, ಎಸ್ಟಿ, ಮಹಿಳೆಯರು, ವಿಶೇಷ ಚೇತನರು 250 ರೂಪಾಯಿ ಕಟ್ಟಬೇಕಾಗಿದೆ. ಪರೀಕ್ಷೆಗಳ ಮೂಲಕ ಅಭ್ಯರ್ಥಿಯನ್ನ ಆಯ್ಕೆ ಮಾಡಲಾಗುತ್ತದೆ. ಈಗಾಗಲೇ ಅರ್ಜಿ ಸಲ್ಲಿಕೆಗೆ ದಿನಾಂಕ ಆರಂಭವಾಗಿದೆ. ಅಂದ್ರೆ ಜೂನ್ 28 ರಿಂದಾನೇ ಅರ್ಜಿ ಕರೆಯಲಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 28. https://indianrailways.gov.in/railwayboard/view_section.jsp?lang=0&id=0,7,1281 ಹೆಚ್ಚಿನ ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment