Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

HAL ಕಂಪನಿ ಮೇಲೆ ಬಿತ್ತು ಆಂಧ್ರ ಸಿಎಂ ಕಣ್ಣು : ಒಪ್ಪಿಗೆ ಕೊಡುತ್ತಾ ಕೇಂದ್ರ ಸರ್ಕಾರ..?

---Advertisement---

ಬೆಂಗಳೂರು; ನಮ್ಮ ಸಿಲಿಕಾನ್ ಸಿಟಿ ಐಟಿ ಬಿಟಿ ಕ್ಯಾಪಿಟಲ್ ಅಂತಾನೇ ಖ್ಯಾತಿ. ಬೆಂಗಳೂರು ಎಂಬ ಮಹಾನಗರದಲ್ಲಿ ಏನಿಲ್ಲ ಹೇಳಿ. ಎಲ್ಲವೂ ಇದೆ. ಯಾವ ರಾಜ್ಯದಿಂದ ಬಂದರೂ ಹೈಫೈ ಜೀವನ ಮಾಡುವಂತ ಅವಕಾಶವೂ ಇದೆ. ದೊಡ್ಡ ದೊಡ್ಡ ಕಂಪನಿಗಳು ತಲೆ ಎತ್ತಿ ನಿಂತಿವೆ. ಇದೀಗ HAL ಮೇಲೆ ಆಂಧ್ರ ಪ್ರದೇಶದ ಸಿಎಂ ಚಂದ್ರ ಬಾಬು ನಾಯ್ಡು ಕಣ್ಣಾಕಿದ್ದು, ತಮ್ಮ ರಾಜ್ಯದತ್ತ ಶಿಫ್ಟ್ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮುಗಿ ಬಿದ್ದಿದ್ದಾರೆ. ಕಂಪನಿ ಜಾಗಕ್ಕೆ ಆಂಧ್ರಪ್ರದೇಶದಲ್ಲಿಯೇ ಜಾಗವನ್ನು ಗುರುತಿಸಿದೆ.

ಬೆಂಗಳೂರಿನಲ್ಲಿರುವ HAL ಉತ್ಪಾದನಾ ಘಟಕ, ಅಡ್ವಾನ್ಸ್ ಮೀಡಿಯಂ ಕಂಬ್ಯಾಟ್ ಏರ್ ಕ್ರಾಫ್ಟ್ ಘಟಕ, ಲೈಟ್ ಕಂಬ್ಯಾಟ್ ಏರ್ ಕ್ರಾಫ್ಟ್ ಘಟಕವನ್ನು ಶಿಫ್ಟ್ ಮಾಡುವಂತೆ ಮನವಿ ಮಾಡಿದ್ದಾರೆ. ಇದನ್ನೆಲ್ಲಾ ಆಂಧ್ರಪ್ರದೇಶಕ್ಕೆ ಶಿಫ್ಟ್ ಮಾಡಿದರೆ ಹೆಚ್ಎಎಲ್ ಕಂಪನಿಗೆ 10 ಸಾವಿರ ಎಕರೆ ಭೂಮಿ ಕೊಡುವುದಕ್ಕೆ ಸಿದ್ಧ ಎಂದು ತಿಳಿಸಿದ್ದಾರೆ.

ಮಡಕಶಿರಾ – ಲೇಪಾಕ್ಷಿ ಮಧ್ಯೆ ಸ್ಥಳಗಳಲ್ಲಿ ಜಾಗ ಕೊಡ್ತೇವೆ. ಅಲ್ಲಿ 5ನೇ ಜನರೇಷನ್ ಏರ್ ಕ್ರಾಫ್ಟ್ ಉತ್ಪಾದನೆಗೆ ಆಂಧ್ರಪ್ರದೇಶ ಒಲವು ತೋರಿದೆ. ಡಿಫೆನ್ಸ್ ಇಂಡಸ್ಟ್ರಿಯಲ್ ಕಾರಿಡಾರ್ ಹಬ್ ಗಳ ಸ್ಥಾಪನೆ ಮಾಡುತ್ತೇವೆ. ಬೆಂಗಳೂರಿನಲ್ಲಿ HAL ಬೆಳವಣಿಗೆ ತುತ್ತತುದಿ ತಲುಪಿದೆ. ಈಗ ಹೆಚ್ಎಎಲ್ ಗೆ ಹೆಚ್ಚಿನ ಜಾಗದ ಅಗತ್ಯವಿದೆ. ಹೀಗಾಗಿ ಆಂಧ್ರಪ್ರದೇಶ ಇದಕ್ಕೆ ಹೆಚ್ಚಿನ ಜಾಗ ಕೊಡುವುದಕ್ಕೆ ಸಿದ್ಧ ಎಂದಿದೆ. ಅಷ್ಟೇ ಅಲ್ಲ ದೊನಕೊಂಡದಲ್ಲಿ ವಾಯುಪಡೆ ಸ್ಟೇಷನ್ ಸ್ಥಾಪನೆಗೂ ಸಿಎಂ ಚಂದ್ರಬಾಬು ನಾಯ್ಡು ಮನವಿ ಮಾಡಿದ್ದಾರಂತೆ. ಒಂದು ವೇಳೆ ಚಂದ್ರಬಾಬು ನಾಯ್ಡು‌ ಮನವಿಗೆ ಕೇಂದ್ರ ಒಪ್ಪಿ, ಶಿಫ್ಟ್ ಮಾಡಿದರೆ ಕನ್ನಡಿಗರು ಇದನ್ನ ಹೇಗೆ ಸ್ವೀಕಾರಾ ಮಾಡ್ತಾರೆ ಎಂಬುದೇ ಪ್ರಶ್ನೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment