ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
ದಾವಣಗೆರೆ: ಅಮಿತ್ ಶಾ ಅವರು ಪ್ರಭಾ ಮಲ್ಲಿಕಾರ್ಜುನ ಅವರನ್ನ ಹೊಗಳಿಲ್ಲ, ಭಾರೀ ಚಾಲಾಕಿ ಎಂದು ಹೇಳಿದರು. ಹೊಸ ಸಂಸದರು ಬಂದು ವರ್ಷ ಕಳೆದಿದೆ ಎಂದು ಪ್ರತಾಪ್ ಸಿಂಹ ಮಾತನಾಡಿದ್ದಾರೆ. ಜಿ.ಎಂ.ಸಿದ್ದೇಶ್ವರ ಅಭಿಮಾನಿಗಳು ನೆರವೇರಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತಾಪ್ ಸಿಂಹ ಈ ಬಗ್ಗೆ ಮಾತನಾಡಿದ್ದಾರೆ.
ಈಗಿನ ಸಂಸದೆ ಪ್ರಭಾ ಅವರ ಮಾವ ಅಡ್ಜೆಸ್ಟ್ಮೆಂಟ್ ಮಾಡಿದ ಪರಿಣಾಮವಾಗಿ ಅವರು ಗೆದ್ದರು. ಗೃಹ ಸಚಿವ ಅಮಿತ್ ಶಾ ನಿಮ್ಮನ್ನು ಹೊಗಳಿಲ್ಲ. ಬಾರೀ ಚಾಲಕಿ ಇದ್ದಾರೆ ಅಂದ್ರು. ಹೊಸ ಸಂಸದರು ಬಂದು ವರ್ಷವಾಗಿದೆ. ಅಶೋಕ ರೈಲ್ವೆ ಗೇಟ್ ಬಳಿ ಕಾಮಗಾರಿ ಕೈಗೊಳ್ಳದ, ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಅಳವಡಿಸದ ಕಾರಣ ಐದು ಯೋಜನೆಗಳಿಗೆ ಹಿಂದಿನ ಸಂಸದ ಸಿದ್ದೇಶ್ವರರು ತಂದ ಅನುದಾನ ವಾಪಾಸ್ ಆಗಿದೆ. ಇನ್ನು ಮುಂದಾದರು ಪ್ರಭಾ ಹಿಂದಿನ ಒಳ್ಳೆಯ ಕೆಲಸಗಳನ್ನು ಮುಂದುವರೆಸುತ್ತೇನೆಂದು ಸೌವಜನ್ಯ ತೋರಲಿ ಎಂದು ಸಲಹೆ ನೀಡಿದ್ದಾರೆ.
ಮೈಸೂರಿನಲ್ಲಿ ದನ ಮೇಯುತ್ತಿದ್ದ ವಿಮಾನ ನಿಲ್ದಾಣದ ಜೀರ್ಣೋದ್ಧಾರಕ್ಕೆ ಜಿ.ಎಂ. ಸಿದ್ದೇಶ್ವರ ಅವರ ಸಹಕಾರವೂ ಇದೆ. ಜಿ.ಮಲ್ಲಿಕಾರ್ಜುನಪ್ಪನವರು ದಾವಣಗೆರೆಯಲ್ಲಿ ಪಕ್ಷ ಬೆಳೆಸಿದರು. ನಾಲ್ಕು ಬಾರಿ ದಾವಣಗೆರೆ ಕ್ಷೇತ್ರ ಪ್ರತಿನಿಧಿಸಿರುವ ಸಿದ್ದೇಶ್ವರ 115 ಕಾಮಗಾರಿ ಮಾಡಿಸಿದ್ದಾರೆ ಎಂದರು.
ಇದೆ ವೇಳೆ, ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಮಾತನಾಡಿ, ”ಬಿ.ಎಸ್. ಯಡಿಯೂರಪ್ಪನವರ ಬಲಗೈ ಭಂಟರಾಗಿ ಪಕ್ಷ ಕಟ್ಟಿದವರಲ್ಲಿ ಜಿ.ಎಂ. ಸಿದ್ದೇಶ್ವರ್ ಕೊಡುಗೆಯು ಇದೆ. ಬಿಜೆಪಿ ಸರಕಾರದ ಅವಧಿಯಲ್ಲಿ ಹೆಚ್ಚಿನ ಅನುದಾನ ತಂದು ದಾವಣಗೆರೆ ಜಿಲ್ಲೆಯನ್ನು ಅಭಿವೃದ್ಧಿ ಮಾಡಿದ ಕೀರ್ತಿ ಸಿದ್ದೇಶ್ವರ ಅವರಿಗೆ ಸಲ್ಲಲಿದೆ” ಎಂದರು.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್ಡೇಟ್. ನೀವು ಯಾವಾಗಲೂ ಅಪ್ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್