Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಜೈನ ಸ್ವಾಮೀಜಿಗಳೆಲ್ಲಾ ಜೊತೆಗಿದ್ದಾರೆ : ವೀರೇಂದ್ರ ಹೆಗ್ಡೆ

---Advertisement---

 

ಧರ್ಮಸ್ಥಳ: ಸದ್ಯ ಧರ್ಮಸ್ಥಳದಲ್ಲಿ ಏನೆಲ್ಲಾ ಆಗ್ತಿದೆ ಅನ್ನೋದು ಎಲ್ಲರಿಗೂ ಗೊತ್ತು. ದಿನವೂ ವಿಚಾರಣೆ ನಡೆಯುತ್ತಲೇ ಇದೆ. ಇದರ ನಡುವೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆ ಅವರು, ಸತ್ಯ ಬಿಟ್ಟು ನಾನು ಎಂದು ಹೋಗಿಲ್ಲ ಹೋಗುವುದು ಇಲ್ಲ ಎಂದಿದ್ದಾರೆ. ಇತ್ತ ಹೆಗ್ಡೆ ಅವರ ಕುಟುಂಬಕ್ಕೆ ದೊಡ್ಡ ಮಟ್ಟದಲ್ಲಿಯೇ ಬೆಂಬಲ ಸಿಕ್ಕಿದೆ. ಜೈನ ಸಮುದಾಯದವರು ಬೃಹತ್ ಜಾಥಾ ನಡೆಸಿದ್ದಾರೆ. ಈ ಜಾಥಾ ಕಂಡು ವೀರೇಂದ್ರ ಹೆಗ್ಡೆಯವರು ಖುಷಿಯಾಗಿದ್ದಾರೆ.

ಇಂದು ಮಾತನಾಡಿರುವ ವೀರೇಂದ್ರ ಹೆಗ್ಡೆ ಅವರು, ಇವತ್ತು ಕ್ಷೇತ್ರಕ್ಕೆ ಕಳೆ ಬಂದಿದೆ. ಭಟ್ಟಾಚಾರ್ಯರು ಬಂದಿರುವುದು ದೊಡ್ಡ ವಿಷಯ. ಎಲ್ಲಾ ಜೈನ ಸ್ವಾಮಿಗಳು ನಿಮ್ಮ ಜೊತೆಗೆ ಇದ್ದೇವೆ ಎಂದಿದ್ದಾರೆ. ಎಸ್ಐಟಿ ತನಿಖೆ ಆಗುತ್ತಿದೆ. ಹೆಚ್ಚು ಮಾತನಾಡಬಾರದು ಅಂತ ಆದೇಶ ಆಗಿದೆ. ಹೆಣ್ಣು ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ವೇದನೆ ಪಡುತ್ತಿದ್ದಾರೆ ಎಂದು ಭಕ್ತರು ಹೇಳುತ್ತಿದ್ದಾರೆ. ಜನ ನಮಗೆ ನೆಮ್ಮದಿ ಇಲ್ಲ ಎಂದು ಹೇಳುತ್ತಿದ್ದಾರೆ. ಹೆಣ್ಣು‌ ಮಕ್ಕಳು ಕೂಡ ಪ್ರತಿಭಟನೆಗೆ ತಯಾರಾಗಿದ್ದಾರೆ. ಆದರೆ ಎಲ್ಲರೂ ಸಂಯಮದಿಂದ ಇರಿ ಅಂತ ಕರೆ ಕೊಟ್ಟಿದ್ದಾರೆ. ಈಗ ನಮಗೆ ಫಲ ಸಿಗುತ್ತಿದೆ. ಸತ್ಯ ಬಿಟ್ಟು ನಾನು ಎಂದು ಹೋಗಿಲ್ಲ, ಹೋಗುವುದು ಇಲ್ಲ.

ಶಾಂತತೆಯನ್ನು ಎಲ್ಲರೂ ಕಾಪಾಡಬೇಕು, ತಾಳ್ಮೆಯಿಂದ ಇರಬೇಕು. ವಿವೇಕಾನಂದರು ದಶ ಲಕ್ಷಣದ ಎಲ್ಲಾ ಗುಣಗಳನ್ನು ಪಾಲಿಸಿದ್ದಾರೆ. ಆದರೆ ಅವರು ಜೈನ ಧರ್ಮದ ಬಗ್ಗೆ ಹೇಳಿಲ್ಲ. ಸತ್ಯ ಎನ್ನುವುದು ಒಂದೇ. ಎಲ್ಲರೂ ಕೂಎ ದಶ ಧರ್ಮಗಳನ್ನು ಪಾಲಿಸಬೇಕು. ಪೂಜ್ಯರು ಬಂದಿರುವುದು ವಿಶ್ವಾದ ಮೂಡಿದೆ. ತಮಿಳುನಾಡಿನಿಂದ ಸ್ವಾಮೀಜಿಗಳು ಬಂದಿದ್ದಾರೆ. ಅವರು ಒಂದು ಸನ್ನೆ ಕೊಟ್ಟರೆ ಸಾಕು ಸಾವಿರಾರು ಜನ ಬರ್ತಾರೆ. ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment