Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಕ್ಷಯ ತೃತೀಯ : ಚಿತ್ರದುರ್ಗದ ಶ್ರೀಕಂಠೇಶ್ವರ ಜ್ಯುವೆಲರ್ಸ್ ನಲ್ಲಿ ವಿಶೇಷ ಕೊಡಗೆ

---Advertisement---

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 18 : ಹಿಂದುಗಳ ಅತ್ಯಂತ ಪವಿತ್ರವಾದ ಶುಭ ಮುಹೂರ್ತಗಳಲ್ಲಿ ಯುಗಾದಿ, ಅಕ್ಷಯ ತೃತೀಯ, ವಿಜಯ ದಶಮಿಗಳದ್ದು ಮೇಲ್ಪಂಕ್ತಿ. ಈ ದಿವಸಗಳಂದು ಸಾಮಾನ್ಯವಾಗಿ ಎಲ್ಲಾ ಶುಭ ಕೆಲಸವನ್ನು ಮಾಡಿದರೆ ತುಂಬಾ ಒಳ್ಳೆದು. ಅಕ್ಷಯ ತೃತೀಯ ದಿವಸ ಜೀವನದ ಹೊಸ ಕೆಲಸ, ಉದ್ಯೋಗ ಪ್ರಾರಂಭ, ಚಿನ್ನಾಭರಣ ಖರೀದಿ ತುಂಬಾ ಶುಭಕರ ಎಂಬ ಭಾವನೆಯಿದೆ.


ಎಲ್ಲಾ ಹೆಣ್ಣು ಮಕ್ಕಳಿಗೆ ಅಕ್ಷಯ ತೃತೀಯ ದಿನದಂದು ಕನಿಷ್ಠ ಒಂದು ಗ್ರಾಂ ಚಿನ್ನ ಅಥವಾ ಬೆಳ್ಳಿಯಾದರೂ ತೆಗೆದುಕೊಳ್ಳುವ ಬಯಕೆ. ಅಂದು ಚಿನ್ನಾಭರಣ ಖರೀದಿ ಶುಭಕರ ಎಂಬ ನಂಬಿಕೆ. ಅಂದು ಏನೇ ಖರೀದಿಸಿದರೂ ಅದು ದ್ವಿಗುಣವಾಗುತ್ತದೆ ಎಂಬ ನಂಬಿಕೆ. ಹೀಗಾಗಿಯೇ ಅಂದಿನ ವಿಶೇಷ ದಿನಕ್ಕಾಗಿ ಎಲ್ಲರೂ ಕಾಯುತ್ತಾರೆ. ಆದರೆ ಇಂದಿನ ದಿನದಲ್ಲಿ ಚಿನ್ನದ ದರ ನೋಡಿದರೆ ಗಗನದತ್ತ ಮುಖ ಮಾಡಿದೆ. ಇದರ ನಡುವೆ ಚಿತ್ರದುರ್ಗದ ಸುತ್ತ ಮುತ್ತಲಿನ ಮಂದಿಗೆ ಸಿಹಿ ಸುದ್ದಿಯೊಂದು ಇದೆ. ಇದೇ ಅಕ್ಷಯ ತೃತೀಯ ದಿನದಂದು ನಿಮ್ಮ ಬದುಕು ಬಂಗಾರವಾಗುವಂತ ಆಫರ್ ಅನ್ನು ಚಿತ್ರದುರ್ಗದ ಪ್ರತಿಷ್ಠಿತ ಶ್ರೀಕಂಠೇಶ್ವರ ಜ್ಯುವೆಲರ್ಸ್ ನೀಡುತ್ತಾ ಇದೆ.

ಹೌದು, ಅಕ್ಷಯ ತೃತೀಯ ಮತ್ತು ಮದುವೆ ಸಮಾರಂಭದ ಅಂಗವಾಗಿ ವಿಶೇಷ ಕೊಡುಗೆ ನೀಡುತ್ತಿದೆ. ಈಗಾಗಲೇ ಇದೇ ಏಪ್ರಿಲ್ 10 ರಿಂದಲೇ ಈ ಆಫರ್ ಶುರುವಾಗಿದೆ. ಏಪ್ರಿಲ್ 30 ಕ್ಕೆ ಅಕ್ಷಯ ತೃತೀಯ ದಿನವಿದೆ. ಅಂದು ಚಿನ್ನಾಭರಣ ಖರೀದಿ ಮಾಡಬೇಕೆನ್ನುವವರು ಇಂದೇ ಭೇಟಿ ನೀಡಿ ಒಮ್ಮೆ ಪರಿಶೀಲಿಸಿ ಖಾತರಿ ಮಾಡಿಕೊಳ್ಳಿ. ಚಿನ್ನ ಕೊಂಡುಕೊಳ್ಳಬೇಕೆಂದುಕೊಳ್ಳುತ್ತಿರುವವರು ಒಮ್ಮೆ ಶ್ರೀಕಂಠೇಶ್ವರ ಜ್ಯುವೆಲರ್ಸ್ ಗೆ ಭೇಟಿ ನೀಡಿ. ಚಿನ್ನ, ಬೆಳ್ಳಿಯಲ್ಲಿ ಅಪರೂಪದ ಡಿಸೈನ್ ಗಳು ಈ ಮಳಿಗೆಯಲ್ಲಿ ನಿಮಗೆ ಸಿಗಲಿವೆ. ಜೊತೆಗೆ ನೀವೆ ಆರ್ಡರ್ ಕೊಟ್ಟ ಡಿಸೈನ್ ಅನ್ನು ಮಾಡಿ ಕೊಡಲಿದೆ.

ಹಾಗಾದ್ರೆ ಈ ವರ್ಷದ ಅಕ್ಷಯ ತೃತೀಯಕ್ಕಾಗಿ ಏನೆಲ್ಲಾ ಆಫರ್ ನೀಡಲಾಗಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ. ಚಿನ್ನಾಭರಣದ ಮೇಲೆ ಯಾವುದೇ ಮೇಕಿಂಗ್ ಚಾರ್ಜಸ್ ಇರುವುದಿಲ್ಲ. ಏಕೆಂದರೆ ಬೇರೆ ಕಡೆಯಲ್ಲೆಲ್ಲಾ ಮೇಕಿಂಗ್ ಚಾರ್ಜಸ್ ಬಹಳ ಕಡೆ ಹೆಚ್ಚು. ಆದರೆ ಇಲ್ಲಿ 0 ಮೇಕಿಂಗ್ ಚಾರ್ಜಸ್ ಆಫರ್ ನೀಡಿದ್ದಾರೆ. ಹಾಗೇ ವೇಸ್ಟೇಜ್ 6% ರಿಂದ 13% ಮಾತ್ರ. 1 ಗ್ರಾಂ ಚಿನ್ನದ ಆಭರಣ ಖರೀದಿಗೆ 1 ಗ್ರಾಂ ಬೆಳ್ಳಿ ನಾಣ್ಯವನ್ನು ಉಚಿತವಾಗಿ ನೀಡಲಾಗುತ್ತಿದೆ. ಈ ಆಫರ್ ಮಿಸ್ ಮಾಡಿಕೊಳ್ಳದೆ ಚಿತ್ರದುರ್ಗದ ಲಕ್ಷ್ಮೀ ಬಜಾರ್ ನ 1ನೇ ಅಡ್ಡರಸ್ತೆಯಲ್ಲಿರುವ ಶ್ರೀಕಂಠೇಶ್ವರ ಜ್ಯುವೆಲರ್ಸ್ ಗೆ ಭೇಟಿ ನೀಡಿ. ಈ ವರ್ಷದ ಅಕ್ಷಯ ತೃತೀಯ ಹಬ್ಬವನ್ನು ಸಂಭ್ರಮಿಸಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ. ಮೊ : 9901873300

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment