in ,

ಮತದಾನ ಹಾಗೂ ಮತ ಎಣಿಕೆಗೆ ಕಾರ್ಯಕ್ಕೆ ಸೂಕ್ತ ಬಂದೋಬಸ್ತ್ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರುಶುರಾಮ್

suddione whatsapp group join

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,(ಮೇ.08) : ಕರ್ನಾಟಕ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮೇ.10 ರಂದು ನಡೆಯಲಿರುವ ಮತದಾನ ಹಾಗೂ ಮೇ.13 ರ ಮತ ಎಣಿಕೆ ಕಾರ್ಯ ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತವಾಗಿ ನಡೆಯಲು ಅನುಕೂಲವಾಗುವಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರುಶುರಾಮ್ ತಿಳಿಸಿದ್ದಾರೆ. ಈ ಕುರಿತು ಅವರು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

ಜಿಲ್ಲೆಯ 1648 ಮತಗಟ್ಟೆಗಳ ಪೈಕಿ 341 ಕ್ರಿಟಿಕಲ್ ಮತಗಟ್ಟೆಗಳನ್ನು ಗುರುತಿಸಲಾಗಿದೆ. 51 ದುರ್ಬಲ ಪ್ರದೇಶಗಳಲ್ಲಿನ 64 ಮತಗಟ್ಟೆ ವ್ಯಾಪ್ತಿಯ 224 ಕುಟುಂಬಗಳ 759 ಮತದಾರರಿಗೆ ಸೂಕ್ತ ರಕ್ಷಣೆ ಒದಗಿಸಲಾಗಿದೆ. ಮುಂಜಾಗೃತ ಕ್ರಮವಾಗಿ ಇವರಿಗೆ ಅಡಚಣೆ ಉಂಟುಮಾಡುತ್ತಿದ್ದ 102 ಜನರ ವಿರುದ್ದ ಕ್ರಮಕೈಗೊಳ್ಳಲಾಗಿದೆ.

ಜಿಲ್ಲೆಯಲ್ಲಿ 8 ಅಂತರಾಜ್ಯ, 11 ಅಂತರ್ ಜಿಲ್ಲೆ, 16 ಜಿಲ್ಲೆಯ ಒಳಗಡೆ ಚಕ್ ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದೆ.

ಇದುವರೆಗೆ ಚುನಾವಣೆ ಸಂಬಂಧ 671 ಪ್ರಕರಣಗಳಲ್ಲಿ 1666 ಜನರ ವಿರುದ್ದ ಪ್ರಕರಣ ದಾಖಲಿಸಲಾಗಿದೆ. 3333 ಜನರ ವಿರುದ್ದ ಜಾಮೀನು ರಹಿತ ಬಂಧನದ ವಾರೆಂಟ್ ಜಾರಿ ಮಾಡಲಾಗಿದೆ.

ಅಪರಾಧ ಹಿನ್ನಲೆಯುಳ್ಳ 5 ಜನರನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಜಿಲ್ಲೆಯಲ್ಲಿ 1176 ಪರವಾನಿಗೆ ಹೊಂದಿದ ಆಯುಧಗಳಲ್ಲಿ 1151 ಆಯುಧಗಳನ್ನು ಪೊಲೀಸರ ಸುಫರ್ಧಿಗೆ ಪಡೆಯಲಾಗಿದೆ. 25 ಆಯುಧಗಳಿಗೆ ವಿನಾಯಿತಿ ನೀಡಲಾಗಿದೆ.

ಮಾದರಿ ನೀತಿ ಸಂಹಿತೆ ಉಲಂಘನೆಯಡಿ ಜಿಲ್ಲೆಯಲ್ಲಿ 28 ಪ್ರಕರಣಗಳನ್ನು ದಾಖಲಿಸಲಾಗಿದೆ. ರೂ.81 ಲಕ್ಷ ನಗದು, ರೂ.3.12 ಲಕ್ಷದ ಮೌಲ್ಯದ 798 ಲೀಟರ್ ಮದ್ಯ ವಶ ಪಡೆಸಿಕೊಳ್ಳಲಾಗಿದೆ.

ಇದರೊಂದಿಗೆ ರೂ.1.2 ಸಾವಿರ ಮೌಲ್ಯದ ನಶೆ ಪದಾರ್ಥ, ರೂ.7.48 ಕೋಟಿ ಮೌಲ್ಯದ 14.84 ಕೆ.ಜಿ. ಬಂಗಾರ, ರೂ.6.39ಲಕ್ಷದ ಮೌಲ್ಯದ 10.89 ಕೆ.ಜಿ. ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರುಶುರಾಮ್ ಮಾಹಿತಿ ನೀಡಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಚಿತ್ರದುರ್ಗ ಎಸ್‍ಎಸ್‍ಎಲ್‍ಸಿ ಫಲಿತಾಂಶ : ಚಳ್ಳಕೆರೆ ತಾಲ್ಲೂಕು ಫಸ್ಟ್

ಚಿತ್ರದುರ್ಗ ಎಸ್‍ಎಸ್‍ಎಲ್‍ಸಿ ಫಲಿತಾಂಶ : ದಯಾನಿಧಿ ಎಸ್.ಪಿ ಜಿಲ್ಲಾ ಟಾಪರ್