Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದರ್ಶನ್ ನೋಡಲು ಜೈಲಿಗೆ ನಟ-ನಟಿಯರ ಭೇಟಿ : ರೇಣುಕಾಸ್ವಾಮಿ ತಾಯಿ ಬೇಸರ..!

---Advertisement---

 

ಸುದ್ದಿಒನ್,  ಚಿತ್ರದುರ್ಗ : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಹದಿನೇಳು ಮಂದಿ ಪರಪ್ಪನ ಅಗ್ರಹಾರ ಸೇರಿದ್ದಾರೆ. ಆರಂಭದಲ್ಲಿ ದರ್ಶನ್ ಬಗ್ಗೆ ಇಂಡಸ್ಟ್ರಿ ಅವರು ಕೂಡ ಮಾತನಾಡುತ್ತಿರಲಿಲ್ಲ. ಆದರೆ ಕಳೆದ ಕೆಲವು ದಿನಗಳಿಂದ ದರ್ಶನ್ ಜೊತೆಗೆ ಗುರುತಿಸಿಕೊಂಡಿದ್ದವರು ಜೈಲಿಗೆ ಹೋಗಿ ಬರುತ್ತಿದ್ದಾರೆ. ಪವಿತ್ರಾ ಗೌಡ ಕುಟುಂಬಸ್ಥರು, ದರ್ಶನ್ ಕುಟುಂಬಸ್ಥರು ಮತ್ತು ಆಪ್ತರು ಜೈಲಿಗೆ ಹೋಗಿ ಬರುತ್ತಿದ್ದಾರೆ. ಇನ್ನು ಕೆಲವು ಆರೋಪಿಗಳ ಪೋಷಕರು ಕೂಡ ಜೈಲಿಗೆ ಭೇಟಿ ನೀಡಿ ಆರೋಪಿಗಳನ್ನು ಮಾತನಾಡಿಸಿಕೊಂಡು ಬರುತ್ತಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಇದೀಗ ರೇಣುಕಾಸ್ವಾಮಿ ತಾಯಿ ಆಕ್ರೋಶದ ಮಾತುಗಳನ್ನಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ರತ್ನಪ್ರಭಾ ಅವರು, ಆರೋಪಿಗಳ ತಂದೆ-ತಾಯಿ ತಮ್ಮ ಮಕ್ಕಳನ್ನು ನೋಡಲು ಈಗ ಜೈಲಿಗೆ ಹೋಗುತ್ತಿದ್ದಾರೆ. ನಾವೂ ನಮ್ಮ ಮಗನನ್ನು ನೋಡಲು ಎಲ್ಲಿಗೆ ಹೋಗಬೇಕು. ರೇಣುಕಾಸ್ವಾಮಿ ನಮಗೆ ಮಣ್ಣು ಹಾಕಬೇಕಿತ್ತು. ಆದರೆ ಅವನಿಗೆ ನಾವೇ ಮಣ್ಣು ಹಾಕುವಂತೆ ಮಾಡಿಬಿಟ್ಟರು. ಕೊಲೆಯಾಗಿ ಒಂದು ತಿಂಗಳಾದರೂ ರೇಣುಕಾಸ್ವಾಮಿ ಹೆಂಡತಿ ಇನ್ನೂ ಗಂಡನ ನೆನಪಲ್ಲಿಯೇ ಇದ್ದಾಳೆ. ಊಟ ಎಲ್ಲಾ ಬಿಟ್ಟಿದ್ದಾಳೆ. ಅವಳ ಆರೋಗ್ಯ ಏನಾಗುತ್ತೋ, ಮಗಿವಿನ ಆರೋಗ್ಯ ಏನಾಗುತ್ತದೋ ಎಂಬ ಆತಂಕ ನಮ್ಮನ್ನು ಕಾಡುತ್ತಿದೆ.

ನನ್ನ ಮಗನನ್ನು ನೋಡಬೇಕು ಅಂದ್ರು ಈಗ ಸಿಗ್ತಾ ಇಲ್ಲ. ಪೊಲೀಸರಿಗೆ ಕಂಪ್ಲೈಂಟ್ ಕೊಟ್ಟಿದ್ದರೆ ಅವನೇ‌ ಅನುಭವಿಸುತ್ತಿದ್ದ. ಆದರೆ ಭೀಕರವಾಗಿ ಹತ್ಯೆ ಮಾಡುವ ಅವಶ್ಯಕತೆ ಇರಲಿಲ್ಲ. ಸತ್ತ ಮೇಲೆ ಈಗ ಬಂದು ನಮಗೂ ಮೆಸೇಜ್ ಮಾಡ್ತಾನೆ ಅಂತ ಹೇಳ್ತಾ ಇದಾರೆ. ಇಷ್ಟು ದಿನ ಅವರೇನು ಬಾಯಿಗೆ ಕಡುಬು ಇಟ್ಟುಕೊಂಡಿದ್ರಾ..? ಎಂದು ಪ್ರಶ್ನಿಸಿದ್ದಾರೆ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment