Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸದೃಢ ದೇಶಕ್ಕೆ ಆರೋಗ್ಯವಂತ ಯುವಪಡೆ ಇರಬೇಕು : ಡಾ. ಡಿ. ಧರಣೇಂದ್ರಯ್ಯ

---Advertisement---

ಸುದ್ದಿಒನ್, ಹಿರಿಯೂರು, ನವೆಂಬರ್. 25  : ಇಂದಿನ ವಿದ್ಯಾರ್ಥಿಗಳು ಓದಿನಷ್ಟೇ ಪ್ರಾಮುಖ್ಯತೆಯನ್ನು ಆರೋಗ್ಯಕ್ಕೂ ನೀಡಬೇಕು ಎಂದು ಪ್ರಾಧ್ಯಾಪಕ ಡಾ. ಡಿ. ಧರಣೇಂದ್ರಯ್ಯ ಹೇಳಿದರು.

ತಾಲೂಕಿನ ಕೋಡಿಹಳ್ಳಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು. ವಿದ್ಯಾರ್ಥಿಗಳು ಸ್ವಾಸ್ತ್ಯ ಕಾಪಾಡಿಕೊಳ್ಳಲು ಧೂಮಪಾನ, ಮದ್ಯಪಾನಗಳoತಹ ದುಶ್ಚಟಗಳಿಂದ ದೂರ ಇರಬೇಕು.ದುಶ್ಚಟಗಳಿಂದ ಆರೋಗ್ಯ ಹಾಳಾಗುವ ಜೊತೆಗೆ ಮಾನಸಿಕ ದುಷ್ಪರಿಣಾಮ ಉಂಟಾಗಿ ಕುಟುಂಬದ ಸದಸ್ಯರ ನಡುವೆ ಕೌಟುಂಬಿಕ ಕಲಹ, ಆರ್ಥಿಕ ನಷ್ಟ, ಸಂಘರ್ಷ, ಅಪರಾಧ, ಭ್ರಷ್ಟಾಚಾರ, ಮಾನ ಪ್ರಾಣಹಾನಿ, ವ್ಯಭಿಚಾರ,ನೈತಿಕ ಮೌಲ್ಯಗಳ ಪತನವಾಗುವುದರಿಂದ ಯುವಕರು ಎಚ್ಚರ ವಹಿಸಬೇಕು.ಮೊಬೈಲ್ ಬಳಕೆಯಿಂದ ಹೆಚ್ಚಿನ ಯುವಕರು ಖಿನ್ನತೆಗೆ ಒಳಗಾಗುತ್ತಿದ್ದು ಮೊಬೈಲ್ ತಯಾರಿಕೆಯ ದೇಶಗಳೇ ಸಾಮಾಜಿಕ ಜಾಲತಾಣದಿಂದ ದೂರ ಇರುವುದನ್ನು ನಾವೆಲ್ಲಾ ಅರ್ಥ ಮಾಡಿಕೊಳ್ಳಬೇಕಿದೆ. ಸದೃಢ ದೇಶಕ್ಕೆ ಆರೋಗ್ಯವಂತ ಯುವಪಡೆ ಇರಬೇಕಾಗಿದ್ದು ನೀವೆಲ್ಲಾ ವೃದ್ಧ ಪೋಷಕರನ್ನು ಸಲಹುವ ಯುವಕರಾಗಿ ಬಾಳಬೇಕು ಎಂದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ರಾಜಣ್ಣ, ಶಿಕ್ಷಕ ಪ್ರಸನ್ನ ಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿದ್ಯಾ ಸೇರಿದಂತೆ ಹಲವರು ಹಾಜರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now