Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹಸು, ಎತ್ತು ಇದ್ದ ಮನೆಗೆ ವಾಸ್ತು ಬೇಕಾಗಲ್ಲ : ಗೋ ಸೇವಾ ಪ್ರಮುಖ್ ಕುಮಾರಸ್ವಾಮಿ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಫೆ. 21 : ಹಸುವನ್ನು ಕರೆಯುವಾಗ ಕರು ಹಾಲು ಕುಡಿಯುತ್ತಿರುವಾಗಲೇ ಹಾಲು ಕರೆದರೆ ಆ ತಾಯಿ ಬೇಕಾದಷ್ಟು ಹಾಲು ಕೊಡುತ್ತಾಳೆ. ಕರು ಕಟ್ಟಿಹಾಕಿ ಹಾಲು ಕರೆದರೆ ನೊಂದುಕೊಂಡು ಹಾಲು ಕೊಡುತ್ತಾಳೆ. ಆಗ ಹಾಲು ಕಡಿಮೆಯಾಯಿತು ಎನ್ನುತ್ತೇವೆ. ಹಸು, ಎತ್ತು ಇದ್ದ ಮನೆಗೆ ವಾಸ್ತು ಬೇಕಾಗಿರಲಿಲ್ಲ. ಆ ಮನೆಗೆ ಋಣಾತ್ಮಕ ಶಕ್ತಿ ಬರುತ್ತಿರಲಿಲ್ಲ ಎಂದು ಆರೆಸ್ಸೆಸ್ಸೆ ಪ್ರಾಂತ ಗೋ ಸೇವಾ ಪ್ರಮುಖ್ ಕುಮಾರಸ್ವಾಮಿ ತಿಳಿಸಿದರು.

ಗೋ ಸೇವಾ ಗತಿವಿಧಿ ಕರ್ನಾಟಕ ವತಿಯಿಂದ ಆಯೋಜಿಸಿದ್ದ ‘ನಂದಿ ರಥಯಾತ್ರೆ’ ಕಾರ್ಯಕ್ರಮ ಗುರುವಾರ ಸಂಜೆ ಚಿತ್ರದುರ್ಗ ನಗರ ಪ್ರವೇಶಿಸಿ, ಮುಖ್ಯರಸ್ತೆಯಲ್ಲಿ ಸಂಚರಿಸಿದ ನಂತರ ಕಬೀರಾನಂದ ಮಠದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಯಿಯ ಎದೆಹಾಲು ಬಿಟ್ಟ ನಂತರ ನಾವು ಸಾಯುವವರೆಗೆ ಹಸುವಿನ ಹಾಲು ಕುಡಿಯುತ್ತೇವೆ. ಆದರೆ, ಅಂತಹ ಹಸುವನ್ನು ಬಿಟ್ಟು ಇಂದು ಎಚ್‍ಎಫ್, ಜೆರ್ಸಿ ಎಂಬ ಹಸುವಿನ ರೀತಿಯ ಪ್ರಾಣಿ ಹಾಲು ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದೇವೆ. ದೇಶಕ್ಕೆ 70 ಲಕ್ಷ ಲೀ. ಹಾಲು ಬೇಕು. ಆದರೆ, ಉತ್ಪಾಧನೆ 20 ಲಕ್ಷ ಲೀ. ಮಾತ್ರ ಆಗುತ್ತಿದೆ. ದೇಸಿ ಹಸುವಿನ ಹಾಲು ಬಿಟ್ಟು ಬೇರೆ ತಳಿಯ ಹಾಲು ಬಳಕೆ ಮಾಡಿದ ಪರಿಣಾಮ ಚಿಕ್ಕ ಮಕ್ಕಳು ಋತುಮತಿಯಾಗುತ್ತಿದ್ದಾರೆ. ಎಳೆಯ ವಯಸ್ಸಿಗೆ ದೃಷ್ಟಿ ಮಂದವಾಗುತ್ತಿದೆ. ಇದಕ್ಕೆಲ್ಲಾ ನಾವು ಸೇವಿಸುತ್ತಿರುವ ಆಹಾರವೇ ಕಾರಣ ಎಂದು ಹೇಳಿದರು.

ಹತ್ತು ತಿಂಗಳ ಮಗುವಿಗೆ ಅನ್ನಪ್ರಾಶನ ಮಾಡುವ ಸಂಪ್ರದಾಯವಿದೆ. ಆದರೆ, ನಾವು ಸೇವಿಸುವ ಅಥವಾ ಮಗುವಿಗೆ ನೀಡುವ ಆಹಾರದಲ್ಲಿ ಎಷ್ಟು ವಿಷ ಇದೆ ಎಂದು ಆಲೋಚನೆ ಮಾಡಬೇಕಾಗಿದೆ. 40-50 ವರ್ಷಗಳ ಹಿಂದೆ ನಮ್ಮ ಜಮೀನಿನಲ್ಲಿ ಓಡಾಡಿದರೆ ಹೂವಿನ ಮೇಲೆ ನಡೆದ ಅನುಭವ ಆಗುತ್ತಿತ್ತು. ಆದರೆ, ಈಗ ಮುಳ್ಳಿನ ಮೇಲೆ ನಡೆದ ಅನುಭವ ಆಗುತ್ತಿದೆ ಎಂದರು.

ಇಂದು ರೈತನಿಗೆ ವಿಷಮುಕ್ತ ಆಹಾರ ಕೊಡಲು ಆಗುತ್ತಿಲ್ಲ. ನಮ್ಮತನ ಎನ್ನುವ ಎಲ್ಲವನ್ನೂ ಕಳೆದುಕೊಂಡು ಪ್ರಗತಿಪರ ರೈತ ಎಂದು ಹೇಳಿಕೊಳ್ಳುವ ದುಸ್ಥಿತಿಯಿದೆ. ಹಿಂದೆ ನಮ್ಮ ಜಮೀನಿನ ಗೊಬ್ಬರಕ್ಕಾಗಿ ಹಸು ಸಾಕುತ್ತಿದ್ದರು. ಹಾಲು ಮಾರಾಟಕ್ಕೆ ಅಲ್ಲ. ಮನುಷ್ಯ ಆರ್ಥಿಕತೆ ಹಿಂದೆ ಬಿದ್ದು ಹಾಲು ಮಾರಾಟ ಮಾಡುತ್ತಿದ್ದಾನೆ. ಕರುವಿಗೂ ಹಾಲು ಬಿಡದೆ ಎಲ್ಲವನ್ನೂ ಕರೆದುಕೊಂಡು ನಾವು ದರಿದ್ರರಾಗುತ್ತಿದ್ದೇವೆ ಎಂದು ತಿಳಿಸಿದರು.

ಹಸುವನ್ನು ಕರೆಯುವಾಗ ಕರು ಹಾಲು ಕುಡಿಯುತ್ತಿರುವಾಗಲೇ ಹಾಲು ಕರೆದರೆ ಆ ತಾಯಿ ಬೇಕಾದಷ್ಟು ಹಾಲು ಕೊಡುತ್ತಾಳೆ. ಕರು ಕಟ್ಟಿಹಾಕಿ ಹಾಲು ಕರೆದರೆ ನೊಂದುಕೊಂಡು ಹಾಲು ಕೊಡುತ್ತಾಳೆ. ಆಗ ಹಾಲು ಕಡಿಮೆಯಾಯಿತು ಎನ್ನುತ್ತೇವೆ. ಹಸು, ಎತ್ತು ಇದ್ದ ಮನೆಗೆ ವಾಸ್ತು ಬೇಕಾಗಿರಲಿಲ್ಲ. ಆ ಮನೆಗೆ ಋಣಾತ್ಮಕ ಶಕ್ತಿ ಬರುತ್ತಿರಲಿಲ್ಲ ಎಂದರು.

ಹಸು ನಮ್ಮ ಮನೆಯ ಆಸ್ಪತ್ರೆ, ಹಸು ನಮ್ಮ  ಮನೆಯ ಬ್ಯಾಂಕ್, ಹಸು ಇದ್ದ ಮನೆಗೆ ವಾಸ್ತು ಬೇಕಾಗಿರಲಿಲ್ಲ. ಆದರೆ, ಇಂದು ಹಸುವಿನ ಮೆರವಣಿಗೆ ಮಾಡಿ ಜಾಗೃತಿ ಮೂಡಿಸಬೇಕಾದ ಸ್ಥಿತಿ ಬಂದಿದೆ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಸಂಘ ಪರಿವಾರದ ಪ್ರಮುಖರಾದ ಜ್ಞಾನೇಶ್, ರಾಜಕುಮಾರ್, ಶ್ರೀನಾಥ್, ಉಮೇಶ್, ದೇವರಾಜ್ ಕೋಟ್ಲಾ, ಓಂಕಾರ್, ರುದ್ರೇಶ್, ಸಂಪತ್‍ಕುಮಾರ್, ಭಾರ್ಗವಿ ದ್ರಾವಿಡ್, ಛಲವಾದಿ ತಿಪ್ಪೇಸ್ವಾಮಿ, ಯೋಗೀಶ್ ಸಹ್ಯಾದ್ರಿ ಇತರರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...