in ,

ಎಲ್ಲರೂ ಪರಿಸರದ ಬಗ್ಗೆ ಕಾಳಜಿಯನ್ನು ಬೆಳಸಿಕೊಂಡಾಗ ಮಾತ್ರ ಉತ್ತಮವಾದ ಪರಿಸರ ನಿರ್ಮಾಣ ಸಾಧ್ಯ : ಶಾಸಕ ಜಿ.ಎಚ್.ತಿಪ್ಪಾರೆಡ್ಡಿ

suddione whatsapp group join

ಚಿತ್ರದುರ್ಗ,  (ಅ.04) : ಇತ್ತೀಚೀನ ದಿನಮಾನದಲ್ಲಿ ಪರಿಸರ ಕಾಳಜಿ ಕಡಿಮೆಯಾಗುತ್ತಿದೆ. ಪರಿಸರ ಹಾಳಾದರೆ ಅದು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಎಲ್ಲರು ಪರಿಸರದ ಬಗ್ಗೆ ಕಾಳಜಿಯನ್ನು ಬೆಳಸಿಕೊಂಡಾಗ ಮಾತ್ರ ಉತ್ತಮವಾದ ಪರಿಸರ ನಿರ್ಮಾಣವಾಗಲು ಸಾಧ್ಯವಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು.

ಅರಣ್ಯ ಇಲಾಖೆ ಚಿತ್ರದುರ್ಗ ವಲಯದವತಿಯಿಂದ ನಗರದ ದೊಡ್ಡಪೇಟೆಯಲ್ಲಿ ಹಮ್ಮಿಕೊಂಡಿದ್ದ 2021ರ 67ನೇ ವನ್ಯ ಜೀವಿ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕರು, ನಾವು 1972ರಿಂದಲೂ ಜೂನ್. 5 ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ, ಈ ಸಮಯದಲ್ಲಿ ನಾವು ಸಹಾ ಸಕ್ರಿಯಯವಾಗಿ ಭಾಗವಹಿಸಿ ನಗರದ ವಿಜ್ಞಾನ ಮತ್ತು ಕಲಾ ಕಾಲೇಜಿನ ಆವರಣದಲ್ಲಿ ಸಸಿಗಳನ್ನು ನಡೆಲಾಗಿತ್ತು. ಅವುಗಳಲ್ಲಿ ಕೆಲವು ಈಗ ಬೃಹತ್ ಮರಗಳಾಗಿ ಬೆಳದಿವೆ. ಇತ್ತೀಚಿನ ದಿನದಲ್ಲಿ ರಸ್ತೆಯ ಆಗಲೀಕರಣದಲ್ಲಿ ಸಾಕಷ್ಟು ಮರಗಳನ್ನು ಕಡಿಯಲಾಗಿದೆ ಅದೇ ಜಾಗದಲ್ಲಿ ಮುಂದಿನ ದಿನದಲ್ಲಿ ಸಸಿಗಳನ್ನು ನಡೆವುದರ ಮೂಲಕ ಮರಗಳನ್ನು ಬೆಳಸಲಾಗುವುದು ಇದಕ್ಕಾಗಿ ಸಾಕಷ್ಟು ಅನುದಾನವನ್ನು ಸಹಾ ನೀಡಲಾಗಿದೆ ಎಂದು ಹೇಳಿದರು.

ಇತ್ತೀಚಿನ ದಿನದಲ್ಲಿ ಜನತೆಯಲ್ಲಿ ಪರಿಸರದ ಬಗ್ಗೆ ಕಾಳಜಿ ಕಡಿಮೆಯಾಗುತ್ತಿದೆ. ಇದರಿಂದ ಮುಂದಿನ ದಿನದಲ್ಲಿ ಕಷ್ಟವನ್ನು ಅನುಭವಿಸಬೇಕಾಗುತ್ತದೆ ಆದ್ದರಿಂದ ತಮ್ಮ ಮನೆಯ ಮುಂಭಾಗದಲ್ಲಿ ಸಸಿಗಳನ್ನು ನಡೆವುದರ ಮೂಲಕ ಪರಿಸರದ ಕಾಳಜಿಯನ್ನು ಬೆಳಸಿಕೊಳ್ಳಿ, ಈಗ ರಸ್ತೆಯನ್ನು ನಿರ್ಮಾಣ ಮಾಡಿದ ಸ್ಥಳದಲ್ಲಿ ಅರಣ್ಯ ಇಲಾಖೆಯವತಿಯಿಂದ ಸಸಿಗಳನ್ನು ನಡೆಲಾಗುವುದು ಮನೆಯವರು ಅದರ ಕಾಳಜಿಯನ್ನು ವಹಿಸಿ ನೀರು ಹಾಕುವ ಕಾರ್ಯವನ್ನು ಮಾಡಿ ಇದರಿಂದ ಪರಿಸರ ಹೆಚ್ಚಾಗುತ್ತದೆ, ಅಲ್ಲದೆ ನೆರಳು ಸಹಾ ಸಿಗುತ್ತದೆ ಎಂದು ಶಾಸಕ ತಿಪ್ಪಾರೆಡ್ಡಿ ತಿಳಿಸಿದರು.

ಅರಣ್ಯ ಅಧಿಕಾರಿ ಮಂಜುನಾಥ್ ಮಾತನಾಡಿ ಮಾನವನಿಗೆ ಪರಿಸರ ಮತ್ತು ವನ್ಯ ಜೀವಿಗಳ ಅಗತ್ಯ ಇದೆ. ಪರಿಸರದಿಂದಲೇ ನಮ್ಮಲ್ಲೇರ ಉಳಿವು, ಅಳಿವು ಸಾಧ್ಯವಿದೆ. ಪರಿಸರದಲ್ಲಿ ಏರು ಪೇರಾಗಿರುವುದರಿಂದ ಋತು ಮಾನಗಳಲ್ಲಿಯೂ ಸಹಾ ಏರುಪೇರಾಗಿದೆ.

ಆಕಾಲಿಕ ಮಳೆ ಬರುತ್ತಿದೆ. ಪರಿಸರ ಉಳಿಯಬೇಕಾದರೆ ಮನೆಗೊಂದು ಮರದ ಅಗತ್ಯ ಇದೆ. ಚಿತ್ರದುರ್ಗ ನಗರದಲ್ಲಿ ಪರಿಸರವನ್ನು ಬೆಳೆಸಲು ಶಾಸಕರು ಹೆಚ್ಚಿನ ರೀತಿಯ ಅನುದಾನವನ್ನು ನೀಡಿದ್ದಾರೆ. ಇದರ ಸಹಾಯದಿಂದ ನಗರದಲ್ಲಿ ಸಸಿಗಳನ್ನು ನಡೆಲಾಗುವುದು ಎಂದರು.

ತಮ್ಮ ದಿನ ನಿತ್ಯದ ಜೀವನದಲ್ಲಿ ಸಾಧ್ಯವಾದಷ್ಟು ಪ್ಲಾಸ್ಟಿಕ್ ನಿಲ್ಲಿಸಿ, ಸಾಧ್ಯವಾಗದಿದ್ದರೆ ಬಳಕೆಯನ್ನು ಕಡಿಮೆ ಮಾಡಿ, ಅಗತ್ಯ ಬಿದ್ದರೆ ಮಾತ್ರ ಬಳಕೆ ಮಾಡಿ ಓಮ್ಮ ಬಳಕೆ ಮಾಡಿದ ಪ್ಲಾಸ್ಟಿಕ್ ವಸ್ತುವನ್ನು ಸಾಧ್ಯವಾದಷ್ಟು ಪುನರ್ ಬಳಕೆ ಮಾಡಿ ಎಂದು ಮಂಜುನಾಥ್ ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ವೆಂಕಟೇಶ್, ಶ್ರೀನಿವಾಸ್, ಹರೀಶ್, ವೇದಾ, ಡಿ.ಎಫ್.ಓ. ಚಂದ್ರಶೇಖರ್, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೆಶಕರಾದ ಸತೀಶ್ ರೆಡ್ಡಿ, ನಗರಸಭೆಯ ವ್ಯವಸ್ಥಾಪಕರಾದ ಶ್ರೀಮತಿ ಮಂಜುಳಾ, ಇಂಜಿನಿಯರ್ ಕಿರಣ್, ಆರೋಗ್ಯ ನಿರೀಕ್ಷಕರಾದ ಭಾರತಿ, ಸರಳ, ಬಡಾವಣೆಯ ಮುಖಂಡರಾದ ಪ್ರೋ.ಶ್ರೀಶೈಲಾ ಆರಾಧ್ಯ, ಷಣ್ಮುಖಪ್ಪ ಕೆ.ಇ.ಬಿ. ನಾಮ ನಿರ್ದೇಶಕ ಸದಸ್ಯ ಗೋಷಿನಾಥ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಇದಕ್ಕೂ ಮುನ್ನಾ ನಗರದ ಉಚ್ಚಂಗಿ ಯಲ್ಲಮ್ಮ ದೇವಾಲಯದಿಂದ ಮೈಸೂರು ಕೆಫೆಯವರೆಗೂ ಅರಣ್ಯ ಪಾದಾಯಾತ್ರೆಯನ್ನು ಶಾಸಕ ತಿಪ್ಪಾರೆಡ್ಡಿ ನೇತೃತ್ವದಲ್ಲಿ ನಡೆಸಲಾಯಿತು.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಪ್ರತಿಭಟನೆ ಸ್ವಾತಂತ್ರ್ಯ ದ ಹಕ್ಕನ ಬಿಜೆಪಿ ಸರ್ಕಾರ ಜನರಿಂದ ಕಸಿಯುತ್ತಿದೆ ಡಿ ಕೆ ಶಿವಕುಮಾರ್

ಜೆಡಿಎಸ್ ಪಕ್ಷವು ಒಕ್ಕಲಿಗರು, ಲಿಂಗಾಯತರ ಪಕ್ಷ ಎಂದ ಡಿಕೆಶಿಗೆ ಖಡಕ್ ಪ್ರಶ್ನೆ ಹಾಕಿದ ಹೆಚ್’ಡಿಕೆ