Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗಂಡೋಬಳವ್ವ ನಾಗತಿಯ ಪರಾಕ್ರಮ ಸಮಾಜಕ್ಕೆ ತಿಳಿಯಬೇಕಿದೆ : ಡಾ.ಬಿ.ಎಲ್.ವೇಣು

---Advertisement---

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ನವೆಂಬರ್.09 : ದುರ್ಗದ ದೊರೆ ಹಿರೆಮದಕರಿನಾಯಕರ ಧರ್ಮಪತ್ನಿ ಗಂಡೋಬಳವ್ವ ನಾಗತಿ ಎರಡು ವರ್ಷಗಳ ಕಾಲ ಚಿತ್ರದುರ್ಗದ ಕೋಟೆಯನ್ನು ಆಳಿದ್ದಾಳಾದರೂ ಈಕೆ ಯಾರೆಂಬುದು ಇನ್ನು ಬೆಳಕಿಗೆ ಬರದಿರುವುದು ನೋವಿನ ಸಂಗತಿ ಎಂದು ಖ್ಯಾತ ಕಾದಂಬರಿಕಾರ ಡಾ.ಬಿ.ಎಲ್.ವೇಣು ವಿಷಾಧಿಸಿದರು.

ಚಿತ್ರದುರ್ಗ ಇತಿಹಾಸ ಕೂಟದ ಸದಸ್ಯ ಕುಮಾರ್ ಬಡಪ್ಪ ಚಿತ್ರಕಾರ ಸುಲ್ತಾನ್‍ರವರಿಂದ ಬರೆಸಿರುವ ಗಂಡೋಬಳವ್ವನಾಗತಿಯ ಭಾವಚಿತ್ರವನ್ನು ತಮ್ಮ ನಿವಾಸದಲ್ಲಿ ಭಾನುವಾರ ಅನಾವರಣಗೊಳಿಸಿ ಮಾತನಾಡಿದರು.

ರಾಯದುರ್ಗದ ಕೃಷ್ಣಪ್ಪ ನಾಯಕನ ಜೊತೆ ಹೋರಾಡಿ ಗೆದ್ದ ಗಂಡೋಬಳವ್ವನಾಗತಿಯ ಇತಿಹಾಸ ಎಲ್ಲರಿಗೂ ಗೊತ್ತಾಗಬೇಕು. ಒನಕೆಯಿಂದ ಶತ್ರಗಳನ್ನು ಸದೆ ಬಡಿದ  ಒನಕೆ ಓಬವ್ವ ಚಿರಪರಿಚಿತಳು. ಅದೇ ರೀತಿ ಗಂಡೋಬಳವ್ವ ನಾಗತಿಯ ಪರಾಕ್ರಮ ಸಮಾಜಕ್ಕೆ ತಿಳಿಯಬೇಕಿದೆ. ಜಾನಕಲ್‍ನಲ್ಲಿದ್ದ ಹನ್ನೆರಡು ವರ್ಷದ ಬಾಲಕ ಮದಕರಿನಾಯಕನನ್ನು ಕರೆತಂದು ಪಟ್ಟ ಕಟ್ಟಿ ವಿದ್ಯೆ, ಶಸ್ತ್ರಾಸ್ತ್ರವನ್ನು ಕಲಿಸುತ್ತಾಳೆ. ಎಲ್ಲವನ್ನು ಸಮರ್ಥವಾಗಿ ಎದುರಿಸುವಷ್ಟು ಶಕ್ತಿಶಾಲಿಯಾಗಿದ್ದ ಗಂಡೋಬಳವ್ವನಾಗತಿ ಶೌರ್ಯ ನೆಲ, ಜಲ, ಕೋಟೆ, ಕೊತ್ತಲಗಳ ಇತಿಹಾಸ ತಿಳಿದುಕೊಳ್ಳುವಷ್ಟು ಆಸಕ್ತಿ ಯಾರಲ್ಲಿಯೂ ಇಲ್ಲದಂತಾಗಿರುವುದು ಬೇಸರವೆನಿಸುತ್ತದೆ. ರಾಜಕಾರಣಿಗಳಿಗಂತೂ ಇಲ್ಲವೆ ಇಲ್ಲ. ಚಿತ್ರದುರ್ಗದ ಕೋಟೆ ಇತಿಹಾಸದ ಬಗ್ಗೆ ಪ್ರತಿಯೊಬ್ಬರಲ್ಲಿಯೂ ಆಸಕ್ತಿ ಮೂಡಿಸುವ ಕೆಲಸವಾಗಬೇಕೆಂದು ತಿಳಿಸಿದರು.

ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ ಗಂಡೋಬಳವ್ವನಾಗತಿ ಯಾವ ರೀತಿ ಇರಬಹುದೆಂದು ಊಹಿಸಿಕೊಂಡು ಸುಲ್ತಾನ್ ಅದ್ಬುತವಾಗಿ ಫೋಟೋ ಬಿಡಿಸಿದ್ದಾರೆ. ಚಿತ್ರದುರ್ಗವನ್ನು ಆಳಿದ ಹದಿಮೂರು ರಾಜರ ಭಾವಚಿತ್ರಗಳು ಇದೆ ರೀತಿ ಸುಲ್ತಾನ್‍ರವರ ಕುಂಚದಿಂದ ಮೂಡಿಬರುವಂತಾಗಲಿ ಎಂದು ಹಾರೈಸಿದರು.

ಕುಮಾರ್ ಬಡಪ್ಪ ಮಾತನಾಡುತ್ತ ಚಿತ್ರದುರ್ಗದ ಕೋಟೆಯನ್ನು ಆಳಿದ ರಾಜರ ಇತಿಹಾಸವನ್ನು ಸ್ಮರಣೆ ಮಾಡಿಕೊಳ್ಳುವುದು ಎಲ್ಲರ ಕರ್ತವ್ಯವಾಗಬೇಕು. ಗಂಡೋಬಳವ್ವ ನಾಗತಿ ಪರಾಕ್ರಮಿಯಾಗಿದ್ದು, ಬಹಳಷ್ಟು ಜನರಿಗೆ ಇದುವರೆವಿಗೂ ಗೊತ್ತಿಲ್ಲದಿರುವುದು ವಿಪರ್ಯಾಸ ಎಂದು ನುಡಿದರು.

ಮದಕರಿನಾಯಕ ಸಾಂಸ್ಕøತಿಕ ಸಂಘದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ, ರಾಜವಂಶಸ್ಥರಾದ ಮದಕರಿ ಜಯಚಂದ್ರನಾಯಕ, ಇತಿಹಾಸ ಸಂಶೋಧಕ ಡಾ.ಎನ್.ಎಸ್.ಮಹಂತೇಶ್, ಅಜಯ್ ಮದಕರಿ ಇನ್ನು ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now