Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಂಡಮಾರುತಗಳು (Cyclones) ಎಂದರೇನು ? ಇಲ್ಲಿದೆ ಮಾಹಿತಿ…!

---Advertisement---

ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಗೌರವಾಧ್ಯಕ್ಷರು, ವಿ.ಕೆ.ಎಸ್., ಚಿತ್ರದುರ್ಗ
ಮೊಬೈಲ್ ಸಂಖ್ಯೆ : 94483 38821

ಉಷ್ಣವಲಯದ ಸಾಗರಗಳಲ್ಲಿ ಕಡಿಮೆ ಒತ್ತಡದ ಕೇಂದ್ರಗಳು ನಿರ್ಮಿತಗೊಳ್ಳುತ್ತವೆ. ಭೂಭಾಗಳಲ್ಲಿ ಕಡಿಮೆ ಉಷ್ಣಾಂಶ ಹಾಗೂ ಹೆಚ್ಚುವಿರುವುದು. ಇದಕ್ಕೆ ವಿರುದ್ಧವಾಗಿ ಸಾಗರಗಳಲ್ಲಿ ಹೆಚ್ಚು ಉಷ್ಣಾಂಶವಿದ್ದು (260 ಸೆ.ಗಿಂತ ಹೆಚ್ಚು) ಒತ್ತಡ ಕಡಿಮೆಯಿರುವುದು. ಇವುಗಳನ್ನು “ವಾಯಭಾರ ಕುಸಿತ” ಎಂದು ಕರೆಯುವರು. ಇಂತಹ ಕೇಂದ್ರಗಳ ಸುತ್ತಲೂ ಕ್ರಮೇಣ ಪ್ರಬಲವಾದ ವೃತ್ತಾಕರ ಮಾರುತಗಳು ಬೀಸುತ್ತವೆ. ಈ ವ್ಯವಸ್ಥೆಯನ್ನು ಚಂಡಮಾರುತಗಳೆಂದು ಕರೆಯುವರು.

ಇವುಗಳು 200 ರಿಂದ 1500 ಕಿ.ಮೀ.ಗಳಷ್ಟು ವಿಸ್ತಾರವಾಗಿದ್ದು, ಗಂಟೆಗೆ ಸುಮಾರು 63 ಕಿ.ಮೀ.ಗಳಿಗಿಂತಲೂ ಹೆಚ್ಚು ವೇಗದಲ್ಲಿ ಬೀಸುತ್ತವೆ. ಇವುಗಳೇ ಚಂಡಮಾರುತಗಳು 100 ಕಿ.ಮೀ. ಗಳಿಗಿಂತಲೂ ವೇಗವಾಗಿ ಬೀಸುವ ಆವರ್ತ ಮಾರುತಗಳನ್ನು ತೀವ್ರ ಸ್ವರೂಪದ ಚಂಡಮಾರುತ ಎಂದೂ, 240 ಕಿ.ಮೀ.ಗಳಿಗಿಂತ ವೇಗವು ಹೆಚ್ಚಾಗಿದ್ದಲ್ಲಿ ಅದನ್ನು ಸೂಪರ್‌ ಸೈಕ್ಲೋನ್‌ ಎಂದೂ ಕರೆಯುವರು.

ಚಂಡಮಾರುಗಳಲ್ಲಿ 5 ವರ್ಗಗಳ ಚಂಡಮಾರುತಗಳಿವೆ
ಒಂದನೇಯ ವರ್ಗ – 110 ರಿಂದ 153 ಕಿ.ಮೀ. ವೇಗ
ಎರಡನೇಯ ವರ್ಗ – 154 ರಿಂದ 177 ಕಿ.ಮೀ. ವೇಗ
ಮೂರನೇಯ ವರ್ಗ – 178 ರಿಂದ 208 ಕಿ.ಮೀ. ವೇಗ
ನಾಲ್ಕನೇಯ ವರ್ಗ – 208 ರಿಂದ 251 ಕಿ.ಮೀ. ವೇಗ
ಐದನೇಯ ವರ್ಗ – 252 ಕಿ.ಮೀ. ವೇಗಕ್ಕಿಂತ ಹೆಚ್ಚು
ಚಂಡಮಾರುತಗಳು ಪರಿಸರದ ಹಾಗೂ ಮಾನವನ ಮೇಲೆ ವಿವಿಧ ರೀತಿಯ ಪ್ರಭಾವಗಳನ್ನು ಬೀರುತ್ತವೆ. ಇವುಗಳಿಂದ ಧಾರಾಕಾರವಾದ ಮಳೆ ಬೀಳುವುದರಿಂದ ಪ್ರವಾಹಗಳು ಉಂಟಾಗುತ್ತವೆ. ಮರಗಳು ಉರುಳುತ್ತವೆ. ಕಟ್ಟಡಗಳು ಕುಸಿದು ಹಾನಿಗೊಳಗಾಗುತ್ತವೆ. ಬೆಳೆ ಹಾಗೂ ಸಾರಿಗೆಗೆ ಹಾನಿಯುಂಟಾಗುವುದು. ಕೆಲವು ವೇಳೆ ದಟ್ಟವಾದ ಕಾವಳ ಕವಿಯುವುದು. ಚಂಡಮಾರುತದ ಅವಧಿಯಲ್ಲಿ ವಿದ್ಯುಚ್ಛಕ್ತಿ ಇಲ್ಲದೇ ಮತ್ತಷ್ಟು ಸಮಸ್ಯೆಯುಂಟಾಗುವುದು. ಇದರಿಂದ ಪ್ರಾಣಹಾನಿ ಹಾಗೂ ಅಪಾರ ಆಸ್ತಿಪಾಸ್ತಿ ಹಾನಿಯುಂಟಾಗುವುದು ಸಾಮಾನ್ಯ. ಬಾಂಗ್ಲಾ ದೇಶಕ್ಕೆ 1970ರಲ್ಲಿ ಅಪ್ಪಳಿಸಿದ್ದ ಭೋಲಾ ಚಂಡಮಾರುತ, ಚೈನಾಕ್ಕೆ 1975ರಲ್ಲಿ ಅಪ್ಪಲಿಸಿದ್ದ ನಿನಾ ಟೈಫೂನ್‌, 2008ರಲ್ಲಿ ಅ.ಸಂ.ಸಂಕ್ಕೆ ಅಪ್ಪಳಿಸಿದ್ದ ಕತ್ರಿನಾ ಅತ್ಯಂತ ಭೀಕರವಾದವು. ಪ್ರಪಂಚದಲ್ಲಿ ಅತಿ ಹೆಚ್ಚು ಚಂಡಮಾರುತಗಳಿಗೆ ತುತ್ತಾಗುವ ದೇಶಗಳಲ್ಲಿ ಭಾರತವೂ ಒಂದಾಗಿದೆ.
ಚಂಡಮಾರುತ ನಿರ್ವಹಣೆ : ಚಂಡಮಾರುತವನ್ನು ತಡೆಗಟ್ಟುವುದು ಸಾಧ್ಯವಿಲ್ಲ. ಆದರೆ ಅವುಗಳ ಪರಿಣಾಮವನ್ನು ಮಿತಿಗೊಳಿಸಬಹುದು. ಇವುಗಳ ನಿರ್ವಹಣಾ ವಿಧಾನಗಳಲ್ಲಿ ಮುಖ್ಯವಾದವುಗಳೆಂದರೆ
Ø   ತೀರ ಪ್ರದೇಶದಲ್ಲಿ ಮ್ಯಾಗ್ರೂವ್‌ ಅರಣ್ಯಗಳನ್ನು ಬೆಳೆಸುವುದರಿಂದ ಚಂಡಮಾರುತದ ತೀವ್ರತೆಯನ್ನು ತಡೆಗಟ್ಟಬಹುದು.
Ø   ಹವಾಮಾನ ಮುನ್ಸುಚನೆಯನ್ನು ಆಧರಿಸಿ, ತೀರ ಪ್ರದೇಶದ ತಗ್ಗು ಭಾಗಗಳಿಂದ ಜನರನ್ನು ಎತ್ತರದ ಒಳನಾಡುಗಳಿಗೆ ಸ್ಥಳಾಂತರಿಸುವುದು.
Ø   ಚಂಡ ಮಾರುತಗಳ ನಂತರ ಕುಡಿಯುವ ನೀರು, ಔಷಧಿ, ಆಹಾರ ವಸ್ತುಗಳನ್ನು ಪೂರೈಸುವುದು.
Ø   ವಿದ್ಯುತ್‌ ಪೂರೈಕೆಯನ್ನು ನೀಡುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now