ಸುದ್ದಿಒನ್, ಹಿರಿಯೂರು, ಅಕ್ಟೋಬರ್. 14 : ಹಿರಿಯೂರು ಉಪವಿಭಾಗ ವ್ಯಾಪ್ತಿಯ ಹಿರಿಯೂರು 66/11 ವಿದ್ಯುತ್ ವಿತರಣಾ ಕೇಂದ್ರದಲ್ಲಿ ದಿನಾಂಕ 15 /10/2025 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹಿರಿಯರು ಉಪ ವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪೀರ್ ಸಾಬ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿರಿಯೂರು ನಗರದಲ್ಲಿ ಹೊಸದಾಗಿ ಲಿಂಕ್ ಲೈನ್ ಮತ್ತು ರಸ್ತೆ ಅಗಲೀಕರಣ ಕಾಮಗಾರಿ ಇರುವ ಪ್ರಯುಕ್ತ ಸದರಿ ದಿನಾಂಕದಂದು ಹಿರಿಯೂರು 66/ 11 ವಿದ್ಯುತ್ ವಿತರಣಾ ಕೇಂದ್ರದ ಎಪ್- 9 ಹುಳಿಯಾರು ರಸ್ತೆ ಮತ್ತು ಎಫ್-2 ತೋಟಗಾರಿಕೆ ಫೀಡರ್ ಮತ್ತು ಎಫ್- 11 ಚಳ್ಳಕೆರೆ ವಾಟರ್ ಸಪ್ಲೈ 11ಕೆವಿ ಫೀಡರ್ ಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಹಿರಿಯೂರು ನಗರ, ಟಿಬಿ ವೃತ್ತ, ವೇದಾವತಿ ನಗರ, ಅವಧಾನಿನಗರ, ಲಕ್ಕವ್ವನಹಳ್ಳಿ ರಸ್ತೆ, ಕೆಎಂ ಕೊಟ್ಟಿಗೆ, ಹರಿಶ್ಚಂದ್ರ ಘಾಟ್, ಎಪಿಎಂಸಿ ಹಿಂಭಾಗ, ಚಿತ್ರದುರ್ಗ ಕುಡಿಯುವ ನೀರಿನ ಘಟಕ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಗ್ರಾಹಕರು ಸಹಕರಿಸಬೇಕು ಎಂದು ಇಂಜಿನಿಯರ್ ಕೋರಿದ್ದಾರೆ.

