ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 10 : ಶಾಸಕ ವೀರೇಂದ್ರ ಪಪ್ಪಿ ಸಾಮ್ರಾಜ್ಯ ಕಂಡು ಇಡಿ ಅಧಿಕಾರಿಗಳಿಗೆ ಶಾಕ್ ಆಗಿದೆ. ಬಗೆದಲ್ಲೆಲ್ಲಾ ಕೋಟಿ ಕೋಟಿನೆ ಸಿಕ್ತಾ ಇದೆ. ಚಳ್ಳಕೆರೆಯ ಬ್ಯಾಂಕ್ ನಲ್ಲಿರು ಪಪ್ಪಿಯ ಲಾಕರ್ ಅನ್ನು ನಿನ್ನೆಯಷ್ಟೇ ಓಪನ್ ಮಾಡಲಾಗಿದೆ. ಅದರಲ್ಲಿಯೂ ಕೋಟ್ಯಾಂತರ ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ. ಹಾಗಾದ್ರೆ ಅಲ್ಲಿ ಪತ್ತೆಯಾದದ್ದು ಎಷ್ಟು ಕೆಜಿ ಚಿನ್ನ ಎಂಬ ಮಾಹಿತಿ ಇಲ್ಲಿದೆ.
ಚಳ್ಳಕೆರೆ ಬ್ಯಾಂಕ್ ನಲ್ಲಿ ಎರಡು ಲಾಕರ್ ಓಪನ್ ಮಾಡಿದಾಗ ಸುಮಾರು 50 ಕೋಟಿ ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ. ಆ ಗೋಲ್ಡ್ ಅನ್ನು ಸದ್ಯಕ್ಕೆ ಇಡಿ ಅಧಿಕಾರಿಗಳು ಸೀಜ್ ಮಾಡಿದ್ದಾರೆ. 50.33 ಕೋಟಿ ಮೌಲ್ಯದ ಗೋಲ್ಡ್ ಈ ಮೂಲಕ ಸೀಜ್ ಆಗಿದೆ. ಒಟ್ಟು 40 ಕೆಜಿ ತೂಕದ 24 ಕ್ಯಾರೆಟ್ ಚಿನ್ನದ ಬಿಸ್ಕೇಟ್ ಗಳು ಇದರಲ್ಲಿ ಅಡಗಿದೆ. ಇದಕ್ಕೂ ಮೊದಲು 21 ಕೆಜಿ ಚಿನ್ನದ ಗಟ್ಟಿಗಳನ್ನು ಇಡಿ ವಶಕ್ಕೆ ಪಡೆದುಕೊಂಡಿದೆ. ಚಿನ್ನ, ಬೆಳ್ಳಿ, ಬ್ಯಾಂಕ್ ಖಾತೆಗಳು, ದುಬಾರಿ ವಾಹನಗಳು ಈ ಎಲ್ಲಾ ಸೇರಿ 103 ಕೋಟಿ ಮೌಲ್ಯದ ಆಸ್ತಿಯನ್ನು ಇಡಿ ಪತ್ತೆ ಮಾಡಿದೆ. ಬೆಟ್ಟಿಂಗ್ ವಹಿವಾಟಿನಲ್ಲಿ ಅಂದಾಜು ಎರಡು ಸಾವಿರ ಕೋಟಿಯನ್ನು ಪತ್ತೆ ಮಾಡಿದೆ. ಆಗಸ್ಟ್ ತಿಂಗಳಲ್ಲಿ ವೀರೇಂದ್ರ ಪಪ್ಪಿಯನ್ನ ಸಿಕ್ಕಿಂನಲ್ಲಿ ಬಂಧಿಸಲಾಗಿತ್ತು. ಅಂದಿನಿಂದ ಇಡಿ ಅಧಿಕಾರಿಗಳ ಶೋಧ ನಡೆಯುತ್ತಲೇ ಇದ್ದು, ಪಪ್ಪಿ ಸಾಮ್ರಾಜ್ಯದಲ್ಲಿ ಕೋಟಿಯದ್ದೇ ದರ್ಶನವಾಗಿದೆ. ಈಗಾಗಲೇ ಅವರ ಸಹೋದರರಿಗೆ ಸಂಬಂಧಿಸಿದ ಜಾಗದಲ್ಲೂ ವಿಚಾರಣೆಯನ್ನ, ತಪಾಸಣೆಯನ್ನು ನಡೆಸಿದೆ. ಸದ್ಯಕ್ಕೆ ಚಳ್ಳಕೆರೆಯ ಬ್ಯಾಂಕ್ ಲಾಕರ್ ತೆರೆದಿದ್ದು, ಉಳಿದಂತೆ ಇನ್ನೆಷ್ಟು ಲಾಕರ್ ಗಳು ಇದಾವೆ ಎಂಬ ತನಿಖೆಯು ಚುರುಕುಗೊಂಡಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











