ಸುದ್ದಿಒನ್, ಹಿರಿಯೂರು, ಅಕ್ಟೋಬರ್. 10 : ತಾಲೂಕಿನಾದ್ಯಂತ ಬೆಳ್ಳಂ ಬೆಳಿಗ್ಗೆಯೇ ಮಳೆರಾಯ ಆರ್ಭಟಿಸಿದ್ದಾನೆ.
ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಶುಕ್ರವಾರ ಬೆಳಗ್ಗೆ ಚಿತ್ತಾ ಮಳೆ ಅಬ್ಬರಿಸಿದೆ. ತಾಲೂಕಿನ ಕೆರೆಕೋಡಿಹಟ್ಟಿ ರಸ್ತೆ ಸಂಪೂರ್ಣ ಜಲಾವೃತವಾಗಿವೆ. ಜವನಗೊಂಡನಹಳ್ಳಿ ಹೋಬಳಿಯಲ್ಲಿ ಸಹ ಉತ್ತಮ ಹದವಾದ ಮಳೆಯಾಗಿದೆ.
ತಾಲೂಕಿನಲ್ಲಿ ಮೊಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಮಳೆ ಮುಂದುವರಿಯುವ ಸಾಧ್ಯತೆಯಿದೆ. ಮಳೆ ಇಲ್ಲದೆ ಕಂಗಾಲಾಗಿದ್ದ ರೈತರ ಮೊಗದಲಿ ಮಂದಹಾಸ ಮೂಡಿದೆ. ಹೆಚ್ಚು ಮಳೆ ಆದಲ್ಲಿ ಕಡಲೆ ಬಿತ್ತನೆಗೆ ರೈತರು ತಯಾರಿ ನಡೆಸುತ್ತಿದ್ದಾರೆ.


