Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಶಿವಮೊಗ್ಗದ ಭದ್ರಾವತಿಯಲ್ಲಿ ಸ್ವಾತಿ ಕೊಲೆ : ತಂದೆಯಿಂದ ಹೊರ ಬಂತು ಸತ್ಯ..!

---Advertisement---

ಶಿವಮೊಗ್ಗ: ಮದುವೆ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದು, ಪ್ರಿಯತಮೆಯ ಪ್ರಾಣವನ್ನ ಪ್ರಿಯಕರನೇ ತೆಗೆದ ಘಟನೆ ಭದ್ರಾವತಿಯ ಯಕ್ಕುಂದ ಗ್ರಾಮದ ಬಳಿ ನಡೆದಿದೆ. ಸೂರ್ಯ ಎಂಬಾತ ತನ್ನ ಪ್ರೇಯಸಿ ಸ್ವಾತಿಯನ್ನ ಭದ್ರಾ ಕಾಲುವೆಗೆ ತಳ್ಳಿ ಕೊಲೆ ಮಾಡಿದ್ದಾನೆ. ಈ ಸಂಬಂಧ ಸ್ವಾತಿ ಪೋಷಕರು ಸೂರ್ಯ ಹಾಗೂ ಆತನ ತಂದೆಯ ಮೇಲೆ ದೂರು ನಿಡೀದ್ದು, ಈಗಾಗಲೇ ಪೊಲೀಸರು ತಂದೆ ಮಗನನ್ನ ವಶಕ್ಕೆ ಪಡೆದಿದ್ದಾರೆ.

ಮಗಳ ಸಾವುನ ಬಗ್ಗೆ ಸ್ವಾತಿ ತಂದೆ ಹಲವು ವಿಚಾರಗಳನ್ನ ಬಿಚ್ಚಿಟ್ಟಿದ್ದಾರೆ. ಹುಡುಗನಿಗೂ ಹುಡುಗಿಗೂ ಮಾತು ಕೊಟ್ಟಿದ್ದೆವು. ಮಾಡಿಕೊಡ್ತೇವೆ ಆದ್ರೆ ಮೊದಲು ಓದು ನೀ ಅಂತ. ಅವಳಿಗೆ ಫೋನ್ ಮಾಡಿ, ತಲೆಕೆಡಿಸಿದ್ದಾನೆ. ಬಲವಂತದಿಂದಾನೇ ಮನೆಯಿಂದ ಕರೆದುಕೊಂಡು ಹೋಗಿ, ಚಾನೆಲ್ ಗೆ ದೂಕಿದ್ದಾನೆ. ಸಣ್ಣ ಮಗಿನಿಂದ ಎಷ್ಟು ಕಷ್ಟ ಪಟ್ಟು ಸಾಕಿದ್ದೀವಿ‌ ಇದಕ್ಕೆ ನ್ಯಾಯ ಬೇಕು.

ಬಡ ಕುಟುಂಬದಿಂದ ಬಂದವರು ನಾವೂ. ಫೋನ್ ಮಾಡಿ, ಮನೆಗೆ ಬಂದು ಬೈಕ್ ನಲ್ಲಿ ಕರೆದುಕೊಂಡು ಹೊಇಗಿದ್ದ. ಗ್ರಾಮದಲ್ಲಿನ ಜನರೇ ಹೇಳಿದರು. ಆಗ ಮಗಳನ್ನ ಹುಡುಕುವುದಕ್ಕೆ ಶುರು ಮಾಡಿದೆವು. ದನ ಕರ ಮೇಯಿಸುವವರೆಲ್ಲ ಹೇಳಿದರು. ಈ ರೀತಿ ವಾದ ನಡೀತಾ ಇತ್ತು. ಹುಡುಗಿ ನೀರಲ್ಲಿ ಹೋಗ್ಬಿಟ್ಟಳು ಅಂತ ಹೇಳಿದರು. ಆದರೆ ಅವನು ಉಳಿದುಕೊಂಡು ಬಿಟ್ಟಿದ್ದ ಎಂಬುದನ್ನ ಹೇಳಿದ್ದಾರೆ. ಜೊತೆಗೆ ಇದಕ್ಕಾಗಿ ನ್ಯಾಯ ಬೇಕೆ ಬೇಕು ಎಂದು ಒಟ್ಟು ಹಿಡಿದಿದ್ದಾರೆ.

ಸೂರ್ಯ ಹಾಗೂ ಸ್ವಾತಿ‌ ನಡುವೆ ಭದ್ರಾ ಕಾಲುವೆಯ ಬಳಿಯೇ ಮದುವೆ ವಿಚಾರಕ್ಕೆ ಮಾತುಕತೆ ನಡೆದಿದೆ. ಆದ್ರೆ ಸೂರ್ಯ ಹೈಡ್ರಾಮಾ ಮಾಡಿದ್ದು, ನಾವಿಬ್ಬರು ವಿಷ ಕುಡಿದಿದ್ದೆವು. ಅವಳಿ ನೀರಿನಲ್ಲಿ ಮುಳುಗಿ ಸತ್ತಳು, ನಾನು ಬದುಕಿದೆ ಎಂದು ಪೊಲೀಸರ ಎದುರು ಹೇಳಿಕೆ ಕೊಟ್ಟಿದ್ದಾನೆ ಎನ್ನಲಾಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now