ಈ ಹಿಂದೆ ಸ್ವರ್ಣ ಎಂಬ ಕಲಾವಿದೆ ಗಂಭೀರ ಆರೋಪ ಮಾಡಿದ್ದರು. ಇದೀಗ ಈ ಸಂಬಂಧ ನಿರ್ದೇಶಕ ಶ್ರೀರಾಜ್ ತಲಘಟ್ಟಪುರ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಪಿಆರ್ಓ ಹರೀಶ್ ಅರಸು, ನಿತೀನ್, ಸ್ವರ್ಣ ಈ ಮೂವರು ಸೇರಿಕೊಂಡು ಚಿತ್ರತಂಡದ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ. ಪಬ್ಲಿಸಿಟಿಗೋಸ್ಕರ 65 ಲಕ್ಷ ರೂಪಾಯಿ ಹಣವನ್ನು ಪಡೆದುಕೊಂಡು, ಬಳಿಕ ಅದಕ್ಕೆ ಯಾವುದೇ ರೀತಿಯ ಲೆಕ್ಕವನ್ನು ಕೊಡದೆ, ಇನ್ನು ಹಣ ಕೊಡದೆ ಹೋದರೆ ಮುಂದಿನ ದಿನಗಳಲ್ಲಿ ಚಿತ್ರತಂಡದ ವಿರುದ್ಧ ಕೆಟ್ಟಕೆಟ್ಟ ಪೋಸ್ಟ್ ಗಳನ್ನ ಮಾಡ್ತೇವೆ ಎಂಬ ಬ್ಲಾಕ್ ಮೇಲ್ ಮಾಡಿದ್ದಾರೆ ಎಂಬ ದೂರನ್ನ ದಾಖಲು ಮಾಡಿದ್ದಾರೆ. ದೂರಿನ ಅನ್ವಯ ತಲಘಟ್ಟಪುರ ಪೊಲೀಸರು ಈಗಾಗಲೇ ಮೂರು ಜನರಿಗೂ ನೋಟೀಸ್ ನೀಡಿದ್ದಾರೆ. ಬಳಿಕ ಅವರ ಹೇಳಿಕೆಗಳನ್ನು ಪೊಲೀಸರು ದಾಖಲು ಮಾಡಿಕೊಳ್ಳಲಿದ್ದಾರೆ.
ಸಿನಿಮಾ ಪ್ರಚಾರಕ್ಕೆಂದು ಬರೋಬ್ಬರಿ 65 ಲಕ್ಷ ರೂಪಾಯಿ ಪಡೆದುಕೊಂಡಿದ್ದರಂತೆ. ಆದರೆ ಲೆಕ್ಕವೇ ಕೊಟ್ಟಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಸಿನಿಮಾ ನಿರ್ದೇಶಕ ಶ್ರೀರಾಜ್ ಅವರಿಂದಲೇ ಲೆಕ್ಕದ ಆರೋಪ ಕೇಳಿ ಬಂದಿದೆ. 65 ಲಕ್ಷದ ಹಣದ ಲೆಕ್ಕ ಕೊಟ್ಟಿಲ್ಲ, ಮತ್ತೆ ಮತ್ತೆ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಹಣ ಕೊಡದೆ ಹೋದರೆ ಶ್ರೀರಾಜ್ ರನ್ನ ಕೆಟ್ಟದಾಗಿ ಬಿಂಬಿಸುತ್ತೇವೆಂದು ಬೆದರಿಕೆ ಹಾಕುತ್ತಿದ್ದಾರಂತೆ.
ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಶ್ರೀರಾಜ್, ಸಿನಿಮಾದ ಆಗುಹೋಗುಗಳ ಬಗ್ಗೆ ಅಮ್ಮನ ಬಳಿ ಚರ್ಚೆ ಮಾಡುತ್ತಲೆ ಇದ್ದೆ. ಯಾರಿಗೆ ಪೇಮೆಂಟ್ ಕೊಡಬೇಕಿರುತ್ತೆ ಅವರಿಗೆ ಮಾಹಿತಿ ನೀಡಿರುತ್ತೇವೆ. ಉದಾಹರಣೆಗೆ 10 ಸಾವಿರ ಕೊಡ್ತೀವಿ ಅಂದ್ರೆ ಅಷ್ಟೇ ಕೊಡೋದಕ್ಕೆ ಆಗೋದು. ಅದರ ಮೇಲೂ ಎಕ್ಸ್ ಟ್ರಾ ಕೊಡಿ ಅಂದ್ರೆ ಹೇಗೆ ಕೊಡೋದು. ಕಾನೂನು ಮುಖಾಂತರವೇ ಹೋರಾಟ ಮಾಡುತ್ತೇನೆ. ಹೊಸ ಕಲಾವಿದರನ್ನ ತೆಗೆದುಕೊಳ್ಳುವಾಗ ಯೋಚನೆ ಮಾಡಿ ಎಂದು ನಿರ್ದೇಶಕ ಶ್ರೀರಾಜ್ ಹೇಳಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











