ಕಾಂತಾರ ಸಿನಿಮಾ ಹಿಟ್ ಆದ ಬೆನ್ನಲ್ಲೇ ಅದರ ಪ್ರೀಕ್ವೇಲ್ ಮಾತುಕಥೆ ಕೂಡ ಶುರುವಾಗಿತ್ತು. ಕಾಂತಾರವನ್ನ ಬರೀ ಚಂದನವನ ಅಲ್ಲ ಇಡೀ ದೇಶದಾದ್ಯಂತ ಮೆಚ್ಚಿ ಕೊಂಡಾಡಿದ್ದರು. ಇದೀಗ ಎಲ್ಲರೂ ಬಹುನಿರೀಕ್ಷೆಯಿಂದ ಕಾಯ್ತಾ ಇದ್ದಂತ ಕಾಂತಾರ ಚಾಪ್ಟರ್ 1 ಟ್ರೇಲರ್ ರಿಲೀಸ್ ಆಗಿದೆ. ಹೊಂಬಾಳೆ ಯೂಟ್ಯೂಬ್ ಚಾನೆಲ್ ನಲ್ಲಿಯೇ ಎಲ್ಲಾ ಭಾಷೆಯ ಟ್ರೇಲರ್ ತೆರೆಕಂಡಿದೆ. ಅಕ್ಟೋಬರ್ 2ರಂದು ಕಾಂತಾರ ಸಿನಿಮಾ ತೆರೆಗೆ ಬರುತ್ತಿದೆ.
ಅದ್ಬುತ ಲೊಕೇಶನ್, ಅದ್ದೂರಿ ಸೆಟ್ ಗಳು ಸಿನಿಮಾದ ಟ್ರೇಲರ್ ನಲ್ಲಿಯೇ ಕಾಣಿಸುತ್ತಿವೆ. ಕಾಂತಾರ ಬಂದಾಗ ಕೊನೆಯಲ್ಲಿ ಒಂದು ಕಾಡಲ್ಲಿ ಶಿವ ನಾಪತ್ತೆಯಾಗಿದ್ದ. ಅವರ ವಂಶದವರು ಅಲ್ಲಿಯೇ ಮಾಯವಾಗುತ್ತಿದ್ದರು. ಆಗ ಶಿವನ ಹೆಂಡತಿ ಬಸುರಿಯೂ ಆಗಿದ್ದರು. ಈಗ ಶಿವನ ತಂದೆಯ ಕಾಲದ ಕಥೆಯನ್ನ ಹೇಳಲಾಗ್ತಾ ಇದೆ. ಕಾಡು, ರಾಜ ಮನೆತನ ಈ ಎಲ್ಲವೂ ಟ್ರೇಲರ್ ನಲ್ಲಿ ಕಾಣಿಸ್ತಾ ಇದೆ. ಕಾಡಿನಲ್ಲಿ ವಾಸಿಸುವ ಜನರಿಗೆ ಆ ಕಾರ್ಣಿಕದ ಕಲ್ಲು ಸಿಗಯತ್ತದೆ, ಜನರನ್ನ ಕಾಪಾಡುವುದಕ್ಕೆ ಒಬ್ಬ ಹುಟ್ಟುತ್ತಾನೆ ಅವರೇ ರಿಷಬ್ ಶೆಟ್ಟಿ. ಕಾಂತಾರದ ಒಳಗೆ ಯಾವತ್ತು ಹೋಗ್ಬೇಡಿ ಮಕ್ಕಳೇ ಎಂಬ ಡೈಲಾಗ್ ಕುತೂಹಲವನ್ನ ಹುಟ್ಟಿಸಿದೆ.

ಇಲ್ಲಿ ರಿಷಬ್ ಶೆಟ್ಟಿಗೆ ನಾಯಕಿಯಾಗಿ ರುಕ್ಮಿಣಿ ವಸಂತ್ ಬಂದಿದ್ದಾರೆ. ರಾಜಕುಮಾರಿಯಾಗಿ ಕಾಣಿಸಿಕೊಂಡಿದ್ದಾರೆ. ಕಾಡಿನಲ್ಲಿ ವಾಸಿಸುವ ರಿಷಬ್ ಮೇಲೆ ರಾಣಿ ರುಕ್ಮಿಣಿಗೆ ಲವ್ ಆಗುತ್ತೆ. ಮುಂದೆ ಏನೆಲ್ಲಾ ಆಗುತ್ತೆ ಎಂಬ ಕುತೂಹಲಕ್ಕಾಗಿಯೇ ಎಲ್ಲರೂ ಕಾಯ್ತಿದ್ದಾರೆ. ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದು, ರಿಷಬ್ ಶೆಟ್ಟಿ ನಿರ್ದೇಶನ ಮಾಡಿ, ನಟನೆ ಮಾಡಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















