ಕಲಬುರಗಿ: ಕುರುಬ ಸಮುದಾಯವನ್ನು ನಾಯಕ ಸ್ಥಾನಕ್ಕೆ ಸೇರ್ಪಡೆ ಮಾಡುವ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ನಿನ್ನೆ ಈ ಸಂಬಂಧ ಸಭೆ ಕೂಡ ನಡೆದಿತ್ತು. ಆದರೆ ಯಶಸ್ಸು ಆದಂತೆ ಕಂಡಿಲ್ಲ. ಇದರ ನಡುವೆ ವಾಲ್ಮೀಕಿ ಸಮುದಾಯದವರು ಕೂಡ ಈ ನಿರ್ಧಾರವನ್ನು ಒಪ್ಪುವಂತೆ ಕಂಡಿಲ್ಲ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಇದು ಹಿಂದಿನ ಸರ್ಕಾರವೇ ಮಾಡಿತ್ತು. ಯಾರೂ ಕೂಡ ವಿರೋಧ ಮಾಡುವ ಅಗತ್ಯವೇ ಇಲ್ಲ. ಕೇಂದ್ರ ಸರ್ಕಾರ ತೀರ್ಮಾನ ಮಾಡುತ್ತೆ. ಕೇಂದ್ರ ಸರ್ಕಾರವೂ ತೀರ್ಮಾನ ಮಾಡಲ್ಲ, ಅದು ಶಿಫಾರಸು ಮಾಡುತ್ತೆ. ಯಾರೂ ಇದನ್ನ ವಿರೋದ ಮಾಡುವ ಅಗತ್ಯವಿಲ್ಲ. ಅವರು ಎಸ್ಟಿಗೆ ಬರ್ತಾರೆ ಅಂದ್ರೆ ಎಸ್ಟಿಗೆ ಸೇರಿಸ್ಲಿ. ಇಲ್ಲವಾದರೆ ಇಲ್ಲ ಅಂತ ಮಾಡ್ತಾರೆ ಎಂದಿದ್ದಾರೆ.
ಇದೆ ವೇಳೆ ಆರ್ ಅಶೋಕ್ ಅವರ ನಾಸ್ತಿಕ ಎಂಬ ಕಾಲಂ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಆರ್ ಅಶೋಕ್ ಹೇಳಿದಂಗೆಲ್ಲಾ ಕೇಳುವುದಕ್ಕೆ ಆಗಲ್ಲ. ಆರ್ ಅಶೋಕ್ ಅವರು ಬಿಜೆಪಿಲಿರೋದಕ್ಕೆ ರಾಜಕೀಯವಾಗಿ ಮಾತಾಡ್ತಾರೆ. ನಾವೂ ಎಲ್ಲರನ್ನು ಕೂಡ ಶೈಕ್ಷಣಿಕ ಸರ್ವೇ ಆಗ್ಬೇಕು. ಸ್ವತಂತ್ರ ಬಂದು 78 ವರ್ಷ ಆಯ್ತು. ಅವರ ಆರ್ಥಿಕ ಪರಸ್ಥಿತಿ ಏನು, ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿ ಏನು ಎಂಬುದನ್ನ ಗುರುತು ಮಾಡಿಕೊಳ್ಳಬೇಕು. ಈ ಸರ್ವೇಯಿಂದ ಎಲ್ಲಾ ಗೊತ್ತಾಗುತ್ತೆ. ಆಮೇಲೆ ಏನೆಲ್ಲಾ ಕಾರ್ಯಕ್ರಮಗಳನ್ನ ಮಾಡಬಹುದು ಎಂದಿದ್ದಾರೆ. ಕ್ರಿಶ್ಚಿಯನ್ಸ್, ಮುಸ್ಲಿಂಸ್ ಈ ದೇಶದ ಜನಗಳಲ್ವಾ. ಯಾರೂ ಏನು ಹೇಳ್ತಾರೆ ಅದರ ಪ್ರಕಾರ ಮಾಡ್ತೇವೆ. ಈಗ ಜಾತಿ ಗಣತಿ ಮಾಡುವುದಕ್ಕೆ ಟೀಚರ್ ಗಳನ್ನ ನೇಮಕ ಮಾಡಿದ್ದೇವೆ. ಜಾತಿ ಗಣತಿ ಸರ್ವೇ ಮಾಡ್ತಾರೆ ಎಂದಿದ್ದಾರೆ.




