ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 11 : ಕರ್ನಾಟಕ ದಲಿತ ಸಂಘರ್ಷ ಸಮಿತಿ ಪರಿವರ್ತನಾವಾದ ಜಿಲ್ಲಾ ಸಮಿತಿಗೆ ರಾಜ್ಯ ಪ್ರಧಾನ ಸಂಚಾಲಕರಾದ ಎಂ.ಗೋವಿಂದರಾಜುರವರ ಆದೇಶದ ಮೇರೆಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾಧ್ಯಕ್ಷರಾಗಿ ಕೋದಂಡರಾಮ ಪಿ. ಮಹಿಳಾ ಜಿಲ್ಲಾಧ್ಯಕ್ಷರಾಗಿ ಆರ್.ಭಾಗ್ಯಮ್ಮ, ಮಹಿಳಾ ಘಟಕದ ಸಂಘಟನಾ ಸಂಚಾಲಕರಾಗಿ ಭಾರತಿ, ಸಂಘಟನಾ ಸಂಚಾಲಕರಾಗಿ ಶಿಲ್ಪ ಮಂಜುನಾಥ್ ಹೆಚ್.ಆರ್. ಕಣುಮಪ್ಪ, ತಿಪ್ಪೇಸ್ವಾಮಿ, ಯೋಗೀಶ್, ವೀರೇಶ್, ಜಯಣ್ಣ, ಉಮೇಶ್, ಗಿರಿಜಮ್ಮ, ಶಿವಮ್ಮ, ಅಂಬಿಕಾ, ರಾಘವೇಂದ್ರ, ಪುಟ್ಟರಾಜು, ಹನುಮೇಶ್, ಅಲ್ಪಸಂಖ್ಯಾತ ಜಿಲ್ಲಾ ಘಟಕದ ಸಂಚಾಲಕರಾಗಿ ದಾದಾಪೀರ್ ಇವರುಗಳನ್ನು ನೇಮಕಗೊಳಿಸಲಾಯಿತು.
ಪದಾಧಿಕಾರಿಗಳನ್ನು ಆಯ್ಕೆಗೊಳಿಸಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪರಿವರ್ತನಾವಾದದ ರಾಜ್ಯ ಬೆಂಗಳೂರು ವಿಭಾಗೀಯ ಪ್ರಧಾನ ಸಂಚಾಲಕ
ಕೆ.ಮಂಜುನಾಥ್ ಹೆಗ್ಗೆರೆ ಬುದ್ದ, ಬಸವ, ಅಂಬೇಡ್ಕರ್‍ರವರ ತತ್ವ ಸಿದ್ದಾಂತದ ಮೇಲೆ ದೀನ ದಲಿತರ, ಶೋಷಿತರ, ಧ್ವನಿಯಿಲ್ಲದವರ ಪರವಾಗಿ ಕೆಲಸ ಮಾಡುತ್ತಿದೆ. ದಲಿತರ ಮೇಲೆ ಎಲ್ಲಿಯೆ ದೌರ್ಜನ್ಯ, ದಬ್ಬಾಳಿಕೆ, ಅನ್ಯಾಯವಾದರೆ ಪದಾಧಿಕಾರಿಗಳು ಹೋರಾಡಬೇಕು. ಅದಕ್ಕೆ ನಮ್ಮ ಸಂಘಟನೆ ಸದಾ ಬೆಂಬಲವಾಗಿರುತ್ತದೆ. ಮುಂದಿನ ದಿನಗಳಲ್ಲಿ ಚಿತ್ರದುರ್ಗದಲ್ಲಿ ರಾಜ್ಯ ಮಟ್ಟದ ಬೃಹತ್ ಸಮಾವೇಶ ನಡೆಸಲಾಗುವುದೆಂದು ಹೇಳಿದರು.
ಹೆಚ್.ಎಸ್.ಮಾರುತೇಶ್, ಹನುಮೇಶ್ ಕೆ. ಉಮೇಶ್ ವಿ, ಆರ್.ಭಾಗ್ಯಮ್ಮ, ಹೆಚ್.ಆರ್.ಮಂಜುನಾಥ್, ಪುಟ್ಟರಾಜ್, ಹೆಚ್.ರಾಘವೇಂದ್ರ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.



















