ಅನುಶ್ರೀ ಮದುವೆ ವಿಚಾರಕ್ಕೆ ಸುದ್ದಿಯಾಗಿದ್ದೇ ಹೆಚ್ಚು. ಕಡೆಗೂ ನಿಮ್ಮ ಮದುವೆ ಯಾವಾಗ ಎಂದು ಕೇಳುತ್ತಿದ್ದವರಿಗೆ ಅದ್ದೂರಿಯಾಗಿ, ಸಾಂಪ್ರದಾಯಿಕವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟು, ಸಿಹಿ ಸುದ್ದಿಯನ್ನ ನೀಡಿದ್ದಾರೆ. ಇಂದು ಅನುಶ್ರೀ ಹಾಗೂ ರೋಷನ್ ಅವರ ಕಲ್ಯಾಣ ಮಹೋತ್ಸವವು ಕಗ್ಗಲಿಪುರದ ಬೈ ಸ್ವಾನ್ ಲೈನ್ ಸ್ಟುಡಿಯೋಸ್ ತಿಟ್ಟಹಳ್ಳಿಯಲ್ಲಿ ನೆರವೇರಿದೆ.
ಅನುಶ್ರೀ ಅವರ ವಿವಾಹ ಮಹೋತ್ಸವಕ್ಕೆ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಬಂದು ಶುಭ ಹಾರೈಸಿದ್ದಾರೆ. ಅನುಶ್ರೀ ತಮ್ಮ ನಿರೂಪಣಾ ಶೈಲಿಯಿಂದಲೇ ತಮ್ಮದೇ ಆದ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ಅನುಶ್ರೀ ಪಕ್ಕ ಅಪ್ಪು ಫ್ಯಾನ್ ಆಗಿರುವ ಕಾರಣ, ಅಪ್ಪು ಹುಟ್ಟಿದ ಹಬ್ಬದ ದಿನವೇ ಮದುವೆ ಬಗ್ಗೆ ಸಿಹಿ ಸುದ್ದಿ ಕೊಡ್ತೀನಿ ಎಂದಿದ್ದರು. ಆದರೆ ಅಂದು ಅಭಿಮಾನಿಗಳಿಗೆ ನಿರಾಸೆ ಮಾಡಿದ್ದರು. ಸದ್ಯ ಒಂದಷ್ಟು ಜನರ ಪ್ರಶ್ನೆಗಳಿಗೆ ಉತ್ತರವಾಗಿ, ಅನುಶ್ರೀ ಮದುವೆಯ ಬಗ್ಗೆ ಇರುವ ಕುತೂಹಲಕ್ಕೆ ಇಂದು ತೆರೆ ಬಿದ್ದಿದೆ.
ನಿನ್ನೆಯಿಂದಾನೂ ಶಾಸ್ತ್ರಗಳು ನಡೆದಿದ್ದು ಅರಿಶಿನ ಶಾಸ್ತ್ರ, ಬಳೆ ಶಾಸ್ತ್ರದಲ್ಲಿ ಅನುಶ್ರೀ ಮಿಂದೆದ್ದಿದ್ದಾರೆ. ರೋಷನ್ ಮೂಲತಃ ಕೊಡಗಿನವರು. ಬೆಂಗಳೂರಿನಲ್ಲಿಯೇ ಉದ್ಯಮಿಯಾಗಿದ್ದಾರೆ ಎನ್ನುತ್ತಿವೆ ಮೂಲಗಳು. ಎರಡು ಕಡರಯವರು ಒಪ್ಪಿ ಅದ್ದೂರಿಯಾಗಿ ಮದುವೆ ಮಾಡಿದ್ದಾರೆ. ಇಂದು ಬೆಳಗ್ಗೆ 10.56ಕ್ಕೆ ರೋಷನ್, ಅನುಶ್ರೀ ಅವರಿಗೆ ಮಾಂಗಲ್ಯ ಧಾರಣೆ ಮಾಡಿದ್ದಾರೆ. ಅನುಶ್ರೀ ಅವರ ಮದುವೆಯನ್ನು ಕಂಡು ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ.
ರಾಜ್ ಬಿ ಶೆಟ್ಟಿ, ನೆನಪಿರಲಿ ಪ್ರೇಮ್, ಕಾವ್ಯ ಶಾ, ಸೋನಲ್, ಶರಣ್, ನಾಗಭೂಷಣ್, ಚೈತ್ರಾ ಆಚಾರ್ ಸೇರಿದಂತೆ ಹಲವು ಸೆಲೆಬ್ರೆಟಿಗಳು ಮದುವೆಗೆ ಬಂದು ಶುಭ ಹಾರೈಸಿದ್ದಾರೆ.










