ಚಿತ್ರದುರ್ಗ, ಆಗಸ್ಟ್. 25 : ಚಿತ್ರದುರ್ಗದ ನೃತ್ಯ ನಿರ್ದೇಶಕ ಲಿಂಗೇಶ್ ನನ್ನು ಬರ್ಬರವಾಗಿ ಹಾವೇರಿ ಜಿಲ್ಲೆಯ ಮೋಟೆ ಬೆನ್ನೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಹತ್ಯೆ ಮಾಡಲಾಗಿದೆ. ಬ್ಯಾಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಗನ ಸಾವಿನ ಸಂಬಂಧ ತಾಯಿ ಕವಿತಾ ಮಾತನಾಡಿದ್ದು, ವಿಕ್ಕಿ ಅವರ ಬರ್ತ್ ಡೇಗೆ ಗಿಫ್ಟ್ ಸರ ಹಾಕ್ತೀನಿ ಅಂತ ಹೋದ ಹುಡುಗ ಮತ್ತೆ ಬರಲಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.
ರಾತ್ರಿ 8-8.15 ಸಮಯಕ್ಕೆ ಮಾತಾಡಿದ. ಊಟಕ್ಕೆ ಬಾರಪ್ಪ ಅಂತ ಹೇಳಿದಾಗ, ಹು ಅಮ್ಮ ಅಂದ. ಎಲ್ಲಿದ್ದೀನಿ ಅಂತಾನು ಹೇಳಲಿಲ್ಲ. ಈಗ ನೋಡಿದ್ರೆ ಈ ರೀತಿಯಾಗಿದ್ದಾನೆ. ಯಾರ ಜೊತೆಗೂ ಅಷ್ಟು ಮಾತಾಡ್ತಾ ಇರಲಿಲ್ಲ ಎಂದಿದ್ದಾರೆ. ಏನು ಹೇಳ್ತಾ ಇರಲಿಲ್ಲ. ಹುಡುಗಿಯರ ವಿಚಾರಕ್ಕೂ ಹೋಗ್ತಾ ಇರಲಿಲ್ಲ. ನೀನೆ ಇಷ್ಟ ಪಟ್ಟಿದ್ರೆ ಕರ್ಕೊಂಡು ಬಾ ಅಂತ ಹೇಳಿದ್ದೆವು. ಮುಸ್ಲಿಂ ಹುಡುಗನೇ ಇದ್ದರು ಇರಬಹುದು. ನಂಗೆ ಅವನ ಮೇಲೆ ಅನುಮಾನ ಇದೆ. ನನ್ನ ಅಂದಾಜು ಅವನದ್ದೇ ಇರಬೇಕು ಅನ್ಸುತ್ತೆ. ಬಾಡಿಗೆ, ಕರೆಂಟ್ ಬಿಲ್ ಎಲ್ಲವನ್ನು ಸರಿಯಾದ ಸಮಯಕ್ಕೆ ಕೊಡುತ್ತಿದ್ದ.
ಅವನ ಸ್ನೇಹಿತ ಮಾತನಾಡಿ, ನನ್ನ ಬರ್ತ್ ಡೇ ಇರೋದು ಈಗಲ್ಲ ಸೆಪ್ಟೆಂಬರ್ 17ಕ್ಕೆ ಅದು ಅವನಿಗೆ ಚೆನ್ನಾಗಿ ಗೊತ್ತು. ಒಂದು ವಾರದಿಂದ ಡಿಫ್ರೆಷನ್ ನಲ್ಲಿದ್ದ. ನಂಗೆ ಫೋನ್ ಮಾಡಿ ಭಯ ಭಯ ಆಗ್ತಿದೆ ಅಂತ ಹೇಳಿದ. ನಾನು ಅದ್ಕೆ ಶುಕ್ರವಾರವೇ ಬಂದು ಅವನಿಗೆ ಧೈರ್ಯ ತುಂಬಿದೆ. ಏನು ಭಯ ಅಂತ ಕೇಳಿದೆ. ಆದರೂ ಏನು ಅಂತ ಗೊತ್ತಿಲ್ಲ. ಭಯ ಭಯ ಅಂತಿದ್ದ ಎಂದಿದ್ದಾರೆ









