Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗದ ಡ್ಯಾನ್ಸ್ ಮಾಸ್ಟರ್ ಹತ್ಯೆ : ಆ ಹುಡುಗನ ಮೇಲೆ ತಾಯಿಗೆ ಅನುಮಾನ..!

---Advertisement---

 

ಚಿತ್ರದುರ್ಗ, ಆಗಸ್ಟ್. 25 : ಚಿತ್ರದುರ್ಗದ ನೃತ್ಯ ನಿರ್ದೇಶಕ ಲಿಂಗೇಶ್ ನನ್ನು ಬರ್ಬರವಾಗಿ ಹಾವೇರಿ ಜಿಲ್ಲೆಯ ಮೋಟೆ ಬೆನ್ನೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಹತ್ಯೆ ಮಾಡಲಾಗಿದೆ. ಬ್ಯಾಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಗನ ಸಾವಿನ ಸಂಬಂಧ ತಾಯಿ ಕವಿತಾ ಮಾತನಾಡಿದ್ದು, ವಿಕ್ಕಿ ಅವರ ಬರ್ತ್ ಡೇಗೆ ಗಿಫ್ಟ್ ಸರ ಹಾಕ್ತೀನಿ ಅಂತ ಹೋದ ಹುಡುಗ ಮತ್ತೆ ಬರಲಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.

ರಾತ್ರಿ 8-8.15 ಸಮಯಕ್ಕೆ ಮಾತಾಡಿದ. ಊಟಕ್ಕೆ ಬಾರಪ್ಪ ಅಂತ ಹೇಳಿದಾಗ, ಹು ಅಮ್ಮ ಅಂದ. ಎಲ್ಲಿದ್ದೀನಿ ಅಂತಾನು ಹೇಳಲಿಲ್ಲ. ಈಗ ನೋಡಿದ್ರೆ ಈ ರೀತಿಯಾಗಿದ್ದಾನೆ. ಯಾರ ಜೊತೆಗೂ ಅಷ್ಟು ಮಾತಾಡ್ತಾ ಇರಲಿಲ್ಲ ಎಂದಿದ್ದಾರೆ. ಏನು ಹೇಳ್ತಾ ಇರಲಿಲ್ಲ. ಹುಡುಗಿಯರ ವಿಚಾರಕ್ಕೂ ಹೋಗ್ತಾ ಇರಲಿಲ್ಲ. ನೀನೆ ಇಷ್ಟ ಪಟ್ಟಿದ್ರೆ ಕರ್ಕೊಂಡು ಬಾ ಅಂತ ಹೇಳಿದ್ದೆವು. ಮುಸ್ಲಿಂ ಹುಡುಗನೇ ಇದ್ದರು ಇರಬಹುದು. ನಂಗೆ ಅವನ ಮೇಲೆ ಅನುಮಾನ ಇದೆ. ನನ್ನ ಅಂದಾಜು ಅವನದ್ದೇ ಇರಬೇಕು ಅನ್ಸುತ್ತೆ. ಬಾಡಿಗೆ, ಕರೆಂಟ್ ಬಿಲ್ ಎಲ್ಲವನ್ನು ಸರಿಯಾದ ಸಮಯಕ್ಕೆ ಕೊಡುತ್ತಿದ್ದ.

ಅವನ ಸ್ನೇಹಿತ ಮಾತನಾಡಿ, ನನ್ನ ಬರ್ತ್ ಡೇ ಇರೋದು ಈಗಲ್ಲ ಸೆಪ್ಟೆಂಬರ್ 17ಕ್ಕೆ ಅದು ಅವನಿಗೆ ಚೆನ್ನಾಗಿ ಗೊತ್ತು. ಒಂದು ವಾರದಿಂದ ಡಿಫ್ರೆಷನ್ ನಲ್ಲಿದ್ದ. ನಂಗೆ ಫೋನ್ ಮಾಡಿ ಭಯ ಭಯ ಆಗ್ತಿದೆ ಅಂತ ಹೇಳಿದ. ನಾನು ಅದ್ಕೆ ಶುಕ್ರವಾರವೇ ಬಂದು ಅವನಿಗೆ ಧೈರ್ಯ ತುಂಬಿದೆ. ಏನು ಭಯ ಅಂತ ಕೇಳಿದೆ. ಆದರೂ ಏನು ಅಂತ ಗೊತ್ತಿಲ್ಲ. ಭಯ ಭಯ ಅಂತಿದ್ದ ಎಂದಿದ್ದಾರೆ‌

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment